ಶಿಕ್ಷಕರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಕರು. ಶಿಕ್ಷಕರ ಪರಿಶ್ರಮ, ಪ್ರೀತಿ ಮತ್ತು ಪ್ರೋತ್ಸಾಹವೇ ವಿದ್ಯಾರ್ಥಿಗಳ ಯಶಸ್ಸಿನ ಭದ್ರ ಬುನಾದಿ ಎಂದು ಮಣಿಪಾಲ ಮಾಹೆಯ ಸಹಉಪಕುಲಪತಿ ಡಾ. ಕರುಣಾಕರ್ ಕೋಟೆಗಾರ ಹೇಳಿದರು.

ಉಡುಪಿ: ಶಿಕ್ಷಕರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಕರು. ಶಿಕ್ಷಕರ ಪರಿಶ್ರಮ, ಪ್ರೀತಿ ಮತ್ತು ಪ್ರೋತ್ಸಾಹವೇ ವಿದ್ಯಾರ್ಥಿಗಳ ಯಶಸ್ಸಿನ ಭದ್ರ ಬುನಾದಿ ಎಂದು ಮಣಿಪಾಲ ಮಾಹೆಯ ಸಹಉಪಕುಲಪತಿ ಡಾ. ಕರುಣಾಕರ್ ಕೋಟೆಗಾರ ಹೇಳಿದರು.

ನಗರದ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಗೆ ನೇತ್ರ ಜ್ಯೋತಿ ಕಾಲೇಜಿನ ವತಿಯಿಂದ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.

ಹೆಬ್ರಿಯ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ನ್ಯಾಯವಾದಿ ಸಪ್ನಾ ಎನ್. ಶೆಟ್ಟಿ ಮಾತನಾಡಿ, ಶಿಕ್ಷಕರ ಮಾತುಗಳು ಕೆಲವೊಮ್ಮೆ ಪಾಠಕ್ಕಿಂತಲೂ ದೊಡ್ಡ ಜೀವನ ಪಾಠವಾಗುತ್ತವೆ ಎಂದು ಹೇಳಿದರು.ಶಿಕ್ಷಕರನ್ನು ಗೌರವಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ - ಅಧ್ಯಕ್ಷ ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕನಾಗಬೇಕು ಎಂದು ಆಶಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಮಾಧವ್ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ರಂಜಿತಾ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರಾದ ಡಾ. ಜಿ.ಎಂ. ಗೊಂಡ (ಭಂಡಾರ್ಕರ್ಸ್ ಪ ಪೂ ಕಾಲೇಜು, ಕುಂದಾಪುರ), ಪ್ರಶಾಂತ್ ಬೇಳೂರು (ವಿವೇಕಾ ಪಿಯು ಕಾಲೇಜು, ಕೋಟ), ಅನುಸೂಯಾ ಶೆಟ್ಟಿ (ಶ್ರೀ ದುರ್ಗಾ ಪರಮೇಶ್ವರಿ ಪಿಯು ಕಾಲೇಜು, ಮಂದಾರ್ತಿ), ರಾಜೇಂದ್ರ ಪ್ರಭು (ಪ್ರಾಚಾರ್ಯರು, ಎಸ್.ವಿ.ಆರ್. ಪಿಯು ಕಾಲೇಜು, ಇನ್ನಂಜೆ), ಉದಯ್ ಕುಮಾರ್ ಎಂ.ಪಿ. (ಸರ್ಕಾರಿ ಪದವಿಪೂರ್ವ ಕಾಲೇಜು, ಬೈಂದೂರು), ಸಂತೋಷ್ ನೀಲಾವರ (ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು, ಬ್ರಹ್ಮಾವರ), ಗಣೇಶ್ ವಿ. (ಪೂರ್ಣಪ್ರಜ್ಞಾ ಪಿಯು ಕಾಲೇಜು, ಉಡುಪಿ), ಸೀತಾರಾಮ ಭಟ್ (ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು, ಬೈಲೂರು), ದಿವ್ಯಾ ಕುಮಾರಿ (ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು), ಸಂಧ್ಯಾ ದೇವಿ (ಭುವನೇಂದ್ರ ಕಾಲೇಜುಪ ಪೂ ಕಾರ್ಕಳ), ಶ್ರೀನಿಧಿ ಭಾಗವತ್ (ಜ್ಞಾನಸುಧಾ ಪಿಯು ಕಾಲೇಜು, ಉಡುಪಿ), ಉಮೇಶ್ ನಾಯ್ಕ್ (ಜನತಾ ಪಿಯು ಕಾಲೇಜು, ಹೆಮ್ಮಾಡಿ), ಅನುಸೂಯಾ (ವಿದ್ಯೋದಯ ಪಿಯು ಕಾಲೇಜು, ಉಡುಪಿ) ಹಾಗೂ ಲಕ್ಷ್ಮೀನಾರಾಯಣ ಕಾಮತ್ (ಪ್ರಾಚಾರ್ಯರು, ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು, ಕಾರ್ಕಳ) ಅವರನ್ನು ಸನ್ಮಾನಿಸಲಾಯಿತು.