ಸಾರಾಂಶ
ರಾಣಿಬೆನ್ನೂರು: ಸಮಾಜದಲ್ಲಿ ಗೌರವ ಸ್ಥಾನವಿರುವ ಶಿಕ್ಷಕರಿಗೆ ಮುಂದಿನ ಯುವ ಪೀಳಿಗೆಯನ್ನು ಅಣಿಗೊಳಿಸುವ ಶಕ್ತಿಯಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಶನಿವಾರ ಜಿಪಂ, ಶಾಲಾ ಶಿಕ್ಷಣ ಇಲಾಖೆ,ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 137 ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಯಾವ ಪ್ರಧಾನಿ, ಮುಖ್ಯಮಂತ್ರಿ, ಶಾಸಕರಿಂದ ಸಾಧ್ಯವಾಗದ ಕೆಲಸ ಶಿಕ್ಷಕರು ಮಾಡುತ್ತಾರೆ. ಶಾಸಕರ ಅನುದಾನದಲ್ಲಿ ಹೆಚ್ಚಿನ ಹಣ ಶಿಕ್ಷಣಕ್ಕಾಗಿಯೇ ಮೀಸಲಿಟ್ಟಿದ್ದೇನೆ. ಈಗಾಗಲೇ 210 ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ನೀಡಲು ಸ್ಮಾರ್ಟ್ಕ್ಲಾಸ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೈನ್ಸ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಶಿಕ್ಷಣದ ಜತೆಗೆ ಆರೋಗ್ಯವಾಗಿದ್ದು, ತಾಲೂಕಿನಲ್ಲಿರುವ ಎಲ್ಲ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಹೇಲ್ತ್ ಕ್ಲಿನಿಕ್ ಸ್ಥಾಪನೆ ಮಾಡಲಾಗುವುದು. ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಲು ಶಿಕ್ಷಣ ಅವಶ್ಯವಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜನಗೌಡ ಪಾಟೀಲ, ತಹಸೀಲ್ದಾರ ಆರ್.ಎಚ್. ಭಾಗವಾನ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೆಂಚರಡ್ಡಿ, ಕರಾಪ್ರಾ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಶಿಡೇನೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಪ್ರೊ. ಬಿ.ಬಿ.ನಂದ್ಯಾಲ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಚ್.ಆರ್. ವೆಂಕಣ್ಣನವರ ವಿರಚಿತ ಮಕ್ಕಳ ಮಲ್ಲಿಗೆ ಪುಸ್ತಕ ಅತಿಥಿಗಳು ಬಿಡುಗಡೆ ಮಾಡಿದರು.
ಸಿ.ವಿ. ಅಡಿವೇರ, ಮಂಜು ನಾಯಕ್, ಪ್ರಭಾಕರ ಚಿಂದಿ, ಕೃಷ್ಣ ಕಾಟಣ್ಣನವರ, ರಮೇಶ ಚಲವಾದಿ, ರವಿ ಗೋಣೆಪ್ಪನವರ, ಬಿ.ಎಫ್.ದೊಡ್ಡಮನಿ, ರಮೇಶ ಅಳಲಗೇರಿ, ಎಂ.ಸಿ. ಬಲ್ಲೂರ, ಶಂಕರ ಚಲವಾದಿ, ಡಾ. ಮಾಲತೇಶ ಚಲವಾದಿ, ಚಂದ್ರಶೇಖರ ಗ್ಯಾನಗೌಡ್ರ, ನಾಗರಾಜ ನಲವಾಗಲ, ಕಾಂತೇಶ ಮಾದಾಪುರ, ವಿ.ಎಚ್. ಕೆಂಚರಡ್ಡಿ, ನಿರ್ಮಲಾ ಲಮಾಣಿ, ಕುಮುದ ಎ.ಎಸ್. ಸೇರಿದಂತೆ ಇತರರಿದ್ದರು.