ಸಾರಾಂಶ
2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿ ಆದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯ ಸರಿಪಡಿಸಬೇಕು.
ಕಲಘಟಗಿ:
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಇಒ ಉಮಾದೇವಿ ಬಸಾಪುರ ಅವರಿಗೆ ಮನವಿ ಸಲ್ಲಿಸಿದರು. ಆನಂತರ ನಡೆದ ಮೆರವಣಿಗೆ ಬಸ್ ನಿಲ್ದಾಣ, ಆಂಜನೇಯ ವೃತ್ತ, ಕಾರವಾರ ರಸ್ತೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿ ತಲುಪಿ ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಂಕಣ್ಣವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿ ಆದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯ ಸರಿಪಡಿಸಬೇಕು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ, ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ವೈ. ಅಂಚಟಗೇರಿ, ಕಾರ್ಯದರ್ಶಿ ಉಮೇಶ ಬೇರೂಡಗಿ, ಜಿಲ್ಲಾ ಕೌಶಾಧ್ಯಕ್ಷ ಜಗದೀಶ ವೀರಕ್ತಮಠ, ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್.ಎ. ಚಿಕನರ್ತಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ರಮೇಶ ಹೂಲ್ತಿಕೋಟಿ, ಶಿಕ್ಷಕರಾದ ಬಿ.ಎಫ್. ಉಳಾಗಡ್ಡಿ, ಎಸ್.ಎನ್. ಪರವಾಪುರ, ಐ.ವಿ. ಜವಳಿ, ಸಿ.ಎಸ್. ಗ್ಯಾನಪ್ಪನವರ, ಮಹೇಶ ಧೂಳಿಕೊಪ್ಪ, ಆರ್.ಎಸ್. ಜಂಬಗಿ, ಎಸ್.ಎಫ್. ಪಾಟೀಲ, ಎಸ್.ಎಚ್. ಭಜಂತ್ರಿ, ಎಂ.ಐ. ಹುಚ್ಚಣ್ಣವರ, ವಿ.ವಿ. ದೇಶಪಾಂಡೆ, ಆರ್.ವೈ. ರಜಪೂತ, ಎಸ್.ಎಸ್. ಚಿನ್ನಪ್ಪನವರ, ಶೋಭಾ ಸಿ.ಜೆ ಸೇರಿದಂತೆ ಪ್ರಾಥಮಿಕ ಶಿಕ್ಷಕರು ಉಪಸ್ಥಿತರಿದ್ದರು.