ಶಿಕ್ಷಕರ ಸೇವೆ ಸ್ಮರಣೀಯ: ಆರ್.ಉಗ್ರೇಶ್

| Published : Aug 03 2025, 11:45 PM IST

ಸಾರಾಂಶ

ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಇಂತಹ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಶಿಕ್ಷಕರ ಸೇವೆ ಸ್ಮರಣೀಯ ಎಂದು ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಇಂತಹ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಶಿಕ್ಷಕರ ಸೇವೆ ಸ್ಮರಣೀಯ ಎಂದು ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್ ಹೇಳಿದರು. ಅವರು ತಾಲೂಕಿನ ಗೌಡಗೆರೆ ಹೋಬಳಿ ಮದ್ದಕ್ಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಡಿ ಶ್ರೀನಿವಾಸ್ ಅವರಿಗೆ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣಸೇವೆ ಮಹತ್ತರ ಕಾರ್ಯವಾಗಿದ್ದು ನೀವೆಲ್ಲ ಸೇರಿ ಅವರನ್ನು ತುಂಬಾ ಸಂತೋಷದಿಂದ ಸಮಾರಂಭ ಏರ್ಪಡಿಸಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ ಆದರ್ಶ ಪ್ರಾಯವಾದ ವಿಷಯವಾಗಿದೆ ಎಂದರು. ಶಾಲೆಯ ಹಳೆಯ ವಿದ್ಯಾರ್ಥಿ ಚಂದ್ರಶೇಖರ್ ಮಾತನಾಡಿ ಈ ಶಾಲೆಯ ಋಣ ಸಲ್ಲಿಸಲು ಒಂದು ಶಾಲಾ ಕೊಠಡಿ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು. ಈ ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಂಜುಳಾ, ಕನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷರು ವಿಶ್ವನಾಥ್, ಗೌಡಪ್ಪ, ಕಲ್ಲುಕುಟಿಕರ ಸಹಕಾರ ಸಂಘ ಅಧ್ಯಕ್ಷ ಚಂದ್ರಶೇಖರ್, ವಿದ್ಯಾ ಗಣಪತಿ ಯುವಕರ ಸಂಘದ ಅಧ್ಯಕ್ಷ ಎಂ ಆರ್ ರಾಜು, ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ , ಮಾಜಿ ಅಧ್ಯಕ್ಷರು ಮಂಜುನಾಥ್, ಮುಖಂಡರಾದ ಪೆದ್ದರಾಜು, ದೊಡ್ಡೇಗೌಡ, ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕ ಶ್ರೀನಿವಾಸ್ ಡಿ, ಶಿಕ್ಷಕರಾದ ಮಂಜುಳ ವೈ ಡಿ, ಪವಿತ್ರ ಬಿ ಸಿ., ಅನಿತಾ ವಿ, ಭಾಗ್ಯ, ಜ್ಯೋತಿ ಬಿ ಟಿ, ಸೇರಿದಂತೆ ಊರಿನ ಗ್ರಾಮಸ್ಥರು ವಿಧ್ಯಾರ್ಥಿ ವೃಂದ ಹಾಜರಿದ್ದರು.