ಸಾರಾಂಶ
ರಾಣಿಬೆನ್ನೂರು: ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ, ಜ್ಞಾನದಖಣಿಯಾಗಿ ಹಾಗೂ ತಪಸ್ವಿಯಂತೆ ಶಿಕ್ಷಣ ಪಡೆದು ಸಮಾಜ ಸೇವೆಗೆ ಮುಂದಾಗಬೇಕು ಎಂದು ಬಿಎಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಎಂ. ಕುಬೇರಪ್ಪ ಹೇಳಿದರು. ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಿಕ್ಷಕ ವಿದ್ಯಾರ್ಥಿ ಸಂಘದ ಸಮಾರೋಪ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕ ಸಾಮರಸ್ಯದ ಜತೆಗೆ ತನಗಾಗಿ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯವನ್ನು ಹೊಂದಿ ಆದರ್ಶ ಶಿಕ್ಷಕರಾಗಬೇಕು ಎಂದರು. ಡಾ.ಎಂ. ರಾಮಮೋಹನರಾವ್ ಮಾತನಾಡಿ, ಉತ್ತಮ ಶಿಕ್ಷಕ ಭರವಸೆಯ ಪ್ರೇರಕರಾಗಿದ್ದು, ಮುಂದಿನ ಪೀಳಿಗೆಯ ನಿರ್ಮಾತೃಗಳಾಗಿದ್ದಾರೆ. ಶಿಕ್ಷಕರು ಪರಿಪೂರ್ಣ ಜ್ಞಾನ ಹೊಂದುವುದರ ಜತೆಗೆ ಅತ್ಯುತ್ತಮ ಸಂವಹನ ಕೌಶಲ್ಯವನ್ನು ಒಳಗೊಂಡು ಆದರ್ಶ ಸಮಾಜ ನಿರ್ಮಿಸುವ ದೃಢ ಸಂಕಲ್ಪ ಹೊಂದಬೇಕು ಎಂದರು. ಯಲ್ಲಪ್ಪ ಕುಡುಪಲಿ, ಎಂ.ಚಿರಂಜೀವಿ ಅತಿಥಿಗಳಾಗಿ ಆಗಮಿಸಿದ್ದರು. ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರಶಾಂತಕುಮಾರ ಹುಲ್ಲತ್ತಿ, ಮೇಘನಾ ಮಾಕನೂರ, ಚನ್ನವೀರಸ್ವಾಮಿ ಹಿರೇಮಠ ಇವರಿಗೆ ಸನ್ಮಾನಿಸಲಾಯಿತು.ಪ್ರಾ. ಡಾ.ಎಂ.ಎಂ.ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಶಿವಕುಮಾರ ಬಿಸಲಳ್ಳಿ, ಕೆ.ಕೆ. ಹಾವಿನಾಳ, ಎಚ್.ಎ. ಭಿಕ್ಷಾವರ್ತಿಮಠ, ಎ. ಶಂಕರನಾಯ್ಕ, ಪ್ರೊ. ಪರಶುರಾಮ ಪವಾರ, ಡಾ. ಎಚ್. ಐ. ಬ್ಯಾಡಗಿ, ಶ್ರೀಕಾಂತ ಗೌಡಶಿವಣ್ಣನವರ, ರಾಜೀವ ಕೆ ಎಂ., ಪ್ರಿಯಾಂಕ ಮಲ್ಲಾಡದ, ಮುತ್ತುರಾಜ ಸಿದ್ದಣ್ಣನವರ, ಚಂದನ ಕಿಚಡಿ, ಪೂಜಾ ಹುಲ್ಲತ್ತಿ, ಭೂಮಿಕಾ, ಭಾರತಿ, ಭೂಮಿಕಾ ಎನ್.ಕೆ., ಭಾಗ್ಯ ದೇವಗಿರಿಮಠ, ರುಕ್ಮಿಣಿ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))