ಅಧ್ಯಾಪಕರು ಭವಿಷ್ಯದ ಪ್ರಜೆ ರೂಪಿಸುವ ನಿಜವಾದ ನಾಯಕರಾಗಬೇಕು: ಡಾ.ಎ.ಟಿ.ಶಿವರಾಮ

| Published : May 20 2024, 01:31 AM IST

ಅಧ್ಯಾಪಕರು ಭವಿಷ್ಯದ ಪ್ರಜೆ ರೂಪಿಸುವ ನಿಜವಾದ ನಾಯಕರಾಗಬೇಕು: ಡಾ.ಎ.ಟಿ.ಶಿವರಾಮ
Share this Article
  • FB
  • TW
  • Linkdin
  • Email

ಸಾರಾಂಶ

21ನೇ ಶತಮಾನದ ಮಾದರಿ ಶಿಕ್ಷಕರಾದ ನೀವು ಬೋಧನೆ ತಂತ್ರಗಳು ಮತ್ತು ತತ್ವಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಯಶಸ್ವಿ ಬೋಧಕರಾಗಬೇಕು. ಯಾರಿಗೂ ನೋವುಂಟು ಮಾಡದೆ ಎಲ್ಲರಿಗೂ ಸಂತೋಷವನ್ನು ಉಂಟುಮಾಡುವ ಚಿಟ್ಟೆಯಂತೆ ಬದುಕಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅಧ್ಯಾಪಕರು ವೃತ್ತಿಪರತೆ ಮತ್ತು ಶ್ರೇಷ್ಠ ನಡವಳಿಕೆಯಿಂದ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಈ ದೇಶದ ನಿಜವಾದ ನಾಯಕರಾಗಬೇಕು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಹೇಳಿದರು.

ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಜಿ.ನಗರದ ರೋಟರಿ ಕ್ಲಬ್ ಹಾಗೂ ಬಿಜಿಎಸ್ ಪಿಯು ಕಾಲೇಜಿನ ಸಹಭಾಗಿತ್ವದಲ್ಲಿ ನಾಗಮಂಗಲದ ರೋಟರಿ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಎಲ್‌ಐಎಂಇ-ಎಸ್‌ಎಎಲ್‌ಟಿ ಶೀರ್ಷಿಕೆಯ 2 ದಿನಗಳ ಪರಿಚಯಾತ್ಮಕ, ವೃತ್ತಿ ನೈಪುಣ್ಯತೆ ಹಾಗೂ ಪುನಶ್ಚೇತನ ಕಾರ್ಯಾಗಾರದ ಅಧ್ಯಕ್ಷತೆ ಮಾತನಾಡಿದರು.

ತಮ್ಮ ಅಧ್ಯಾಪಕರನ್ನೇ ಮಾದರಿಯಾಗಿ ಅನುಸರಿಸುವ ವಿದ್ಯಾರ್ಥಿಗಳನ್ನು ಉತ್ತಮ ನಡವಳಿಕೆ ಮತ್ತು ವೃತ್ತಿಪರತೆಯ ಪ್ರಭುದ್ಧತೆಯೊಂದಿಗೆ ಪರಿಣಾಮಕಾರಿ ಬೋಧನಾ ಕೌಶಲ್ಯದ ಪ್ರಭುತ್ವವನ್ನು ಮೆರೆಯಬೇಕು ಎಂದರು.

21ನೇ ಶತಮಾನದ ಮಾದರಿ ಶಿಕ್ಷಕರಾದ ನೀವು ಬೋಧನೆ ತಂತ್ರಗಳು ಮತ್ತು ತತ್ವಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಯಶಸ್ವಿ ಬೋಧಕರಾಗಬೇಕು. ಯಾರಿಗೂ ನೋವುಂಟು ಮಾಡದೆ ಎಲ್ಲರಿಗೂ ಸಂತೋಷವನ್ನು ಉಂಟುಮಾಡುವ ಚಿಟ್ಟೆಯಂತೆ ಬದುಕಿ ಎಂದು ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಉಕ್ತಿಯ ಉಲ್ಲೇಖದೊಂದಿಗೆ ಶುಭ ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣದ ರೋಟರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಸತೀಶ್ ಮಾತನಾಡಿ, ಬಿಜಿಎಸ್ ಪಿಯು ಕಾಲೇಜು ಹಾಗೂ ಶಿಕ್ಷಣ ಮಹಾ ವಿದ್ಯಾಲಯದದಿಂದ ನಮ್ಮ ಶಾಲೆಯ ಶಿಕ್ಷಕರಿಗೆ ನೀಡುತ್ತಿರುವ ಈ ವೃತ್ತಿಪರನೈಪುಣ್ಯ ಕೌಶಲ್ಯಾಧಾರಿತ ಕಾರ್ಯಾಗಾರವು ಬಹಳ ಉಪಯುಕ್ತವಾಗಿದೆ ಎಂದರು.

ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರಾದ ನಾವು ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಾಧಾರಿತ ನೈಪುಣ್ಯತಾ ಬೋಧನೆ ಕೈಗೊಳ್ಳುವ ಈ ಕಾರ್ಯಾಗಾರವನ್ನು ಆಯೋಜಿಸಿ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಶೈಕ್ಷಣಿಕ ಮಾಹಿತಿ ಸಂವಹನ ಮಾಡಿ ಉಪಕರಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ತಾಲೂಕಿನ ಇತರೆ ಶಾಲೆಗಳಿಗೂ ಈ ಸೌಲಭ್ಯ ದೊರೆಯಲೆಂದು ಆಶಿಸಿ, ಎರಡು ದಿನಗಳ ಈ ಕಾರ್ಯಾಗಾರದ ಪುನಶ್ಚೇತನದಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮಾರ್ಗದರ್ಶಿಸಲು ಉತ್ಸುಕರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್. ಶಿಲ್ಪಾ, ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ವಿ. ಪುಟ್ಟಸ್ವಾಮಿ, ಸಂಪನ್ಮೂಲ ವ್ಯಕ್ತಿ ಡಾ. ಎಂ.ಸಿ. ಪ್ರಭುದೇವ್, ಪ್ರಾಧ್ಯಾಪಕ ಎ.ಎಚ್. ಗೋಪಾಲ್, ಸಿ.ಎಲ್. ಶಿವಣ್ಣ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಹಲವರು ಇದ್ದರು.