ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಜ್ಞಾನ ತಂತ್ರಜ್ಞಾನಗಳ ಶಿಕ್ಷಣ ಕೂಡ ಅಷ್ಟೇ ಅವಶ್ಯಕತೆ ಇದೆ

ಕೊಪ್ಪಳ: ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಅಮ್ಜದ್ ಪಟೇಲ್ ಹೇಳಿದರು.

ನಗರದ ಎ.ಆರ್.ವಿಶ್ಡಂ ಇಂಟರ್ನ್ಯಾಷನಲ್ ಶಾಲೆಯಲ್ಲಿ ಜರುಗಿದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಜ್ಞಾನ ತಂತ್ರಜ್ಞಾನಗಳಿಗೆ ಅತ್ಯಂತ ಮಹತ್ವ ನೀಡಲಾಗಿದೆ. ವಿಜ್ಞಾನ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಂಡು ಒಳ್ಳೆಯ ಆವಿಷ್ಕಾರ ಮಾಡುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರೇಪಿಸಬೇಕು.ಅವರಿಗೆ ಉತ್ತಮ ಪ್ರೇರಣೆ ನೀಡಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕವಾಗಿದೆ.ವಿಜ್ಞಾನ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಂಡು ಮಕ್ಕಳು ತಮ್ಮ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.

ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಜ್ಞಾನ ತಂತ್ರಜ್ಞಾನಗಳ ಶಿಕ್ಷಣ ಕೂಡ ಅಷ್ಟೇ ಅವಶ್ಯಕತೆ ಇದೆ. ಇದರ ಬಗ್ಗೆ ಶಿಕ್ಷಕರು ಅತ್ಯಂತ ಮುತುವರ್ಜಿ ವಹಿಸಿ ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು ಎಂದು ಹೇಳಿದರು.

ರಾಬಿತ, ಎ,ಮಿಲ್ಲತ ಜಿಲ್ಲಾಧ್ಯಕ್ಷ ಎಂ.ಲಾಯಕ್ ಅಲಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷ ಶಾಹಿದ್ ಹುಸೇನ್ ತಹಸಿಲ್ದಾರ್, ಈದ್ಗಾ ಕಮಿಟಿ ಆಡಳಿತ ಅಧಿಕಾರಿ ಗೌಸ್ ಸಾಬ್ ಸರ್ದಾರ್, ಕೊಪ್ಪಳ ಸದ್ಭಾವನಾ ವೇದಿಕೆ ಪ್ರಧಾನ ಕಾರ್ಯದರ್ಶಿ ಸೈಯದ್ ಹಿದಾಯತ್ ಅಲಿ, ಅಲಿ ಮುದ್ದೀನ್ ಸಾಧಿಕ್ ಹುಸೇನ್, ಎ.ಆರ್.ವಿಶ್ಡಂ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರು, ಸದಸ್ಯರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರಿದ್ದರು.