ಸಾರಾಂಶ
ಹೊಳೆಹೊನ್ನೂರಿನ ಲಯನ್ಸ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರೂಪಾಲಿ ಕಟ್ಟಿ ಸುಕೃತಿ ಪಬ್ಲಿಕೇಶನ್ ರವರ ಇಂಗ್ಲಿಷ್ ಪುಸ್ತಕವನ್ನ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುವುದರಿಂದ, ಶಿಕ್ಷಕರು ಹೇಗೆ ಚಟುವಟಿಕೆ ಆಧಾರಿತ ಕಲಿಕೆಯನ್ನು ಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರೋತ್ಸಾಹಿಸಬೇಕು ಎಂಬುದನ್ನು ಸಂಪನ್ಮೂಲ ವ್ಯಕ್ತಿ ನವದೆಹಲಿಯ ಎಸ್.ಚಾಂದ್ ಕಂಪನಿ ಲಿಮಿಟೆಡ್ ಡೆಪ್ಯುಟಿ ಪ್ರಾಡಕ್ಟ ಮ್ಯಾನೇಜರ್ ರೂಪಾಲಿ ಕಟ್ಟಿ ಶಿಕ್ಷಕರಿಗೆ ಮಾಹಿತಿ ನೀಡಿದರು.ಪಟ್ಟಣದ ವಿವೇಕಾನಂದ ಲಯನ್ಸ್ ಪಿಯು ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಟುವಟಿಕೆ ಆಧಾರಿತ ಇಂಗ್ಲೀಷ್ ಕಲಿಕಾ ಕಾರ್ಯಗಾರವನ್ನು ಉದ್ಘಾಟಿಸಿ ಹಾಗೂ ಸುಕೃತಿ ಪಬ್ಲಿಕೇಶನ್‌ನ ಇಂಗ್ಲಿಷ್ ಪುಸ್ತಕ ಬಿಡುಗಡೆ ಮಾಡಿದರು.
ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ ಮುಂದಿನ ಭಾರತದ ಭವ್ಯ ಪ್ರತಿನಿಧಿಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶಿಕ್ಷಣ ಸಂಸ್ಥೆಗಳು ದಿನದಿನಕ್ಕೆ ಪೈಪೋಟಿ ನಡೆಸುತ್ತಿದ್ದು, ಯಾವ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂಬುದರ ಬಗ್ಗೆ ಪೋಷಕರು ಆಲೋಚನೆ ಮಾಡುತ್ತಾರೆ. ಆದ್ದರಿಂದ ಶಿಕ್ಷಕರು ಆಧುನಿಕತೆಗೆ ತಕ್ಕಂತೆ ಬದಲಾಗಬೇಕಾದ ಸನ್ನಿವೇಶವಿದೆ ಎಂದರು.ಈ ವೇಳೆ ಸಂಪನ್ಮೂಲ ಬೆಂಬಲ ವ್ಯಕ್ತಿಗಳಾಗಿ ಜಿ.ಎಸ್.ಶ್ರೀಧರ್ ಮೂರ್ತಿ ಮಾಲೀಕರು ಸುಕೃತಿ ಬುಕ್ಸ್ ಏಜೆನ್ಸಿ ಮೈಸೂರು, ಪಟಣ್ಣದ ಲಯನ್ಸ್ ಅಧ್ಯಕ್ಷ ರುದ್ರೇಶ್ ಎನ್, ಸೀತಾರಾಮ್ ಜಿ.ಆರ್, ದ್ಯಾಮಪ್ಪ, ರಾಜೇಶ್ ಎಚ್.ಸಿ, ಡಾ.ಯು.ಲಯನ್ ವಿಜಯ್ ಶೆಟ್ಟಿ, ಇ.ರೇಣುಕಾ, ಪ್ರವೀಣ್ ಕುಮಾರ್ ಕೆ.ಆರ್, ಪ್ರಾಂಶುಪಾಲ ಎಸ್.ರಂಗನಾಥಯ್ಯ, ಡಯಟ್‌ನ ಹರಿಪ್ರಸಾದ್ ಹಾಜರಿದ್ದರು.