ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸಮಾಜಕ್ಕೆ ಉತ್ತಮ ದಾರಿಯನ್ನು ತೋರಿಸಬೇಕಾಗಿರುವ ಶಿಕ್ಷಕರು ಬಡ್ಡಿ ವ್ಯವಹಾರದಲ್ಲಿ ಪಾಲ್ಗೊಳ್ಳುವುದರಿಂದ ದೂರ ಇರಬೇಕು ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಸ್ವರ್ಣ ಭೂಮಿ ಫೌಂಡೇಷನ್, ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು ಮತ್ತು ರೋಟರಿ ಕ್ಲಬ್‌ನಿಂದ ಶಿಕ್ಷಕರ ದಿನಾಚರಣೆ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಡಾ.ಎಸ್.ರಾಧಾಕೃಷ್ಣನ್ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿಚಾರಣೆ ವೇಳೆ ಬಹಿರಂಗ
ಇತ್ತೀಚಿಗೆ ತಾವು ಲೋಕ ಅದಾಲತ್‌ಗಳನ್ನು ನಡೆಸುತ್ತಿದ್ದು, ಇದರಲ್ಲಿ ಬಡ್ಡಿ ವ್ಯವಹಾರದಡಿ ಸಾಕಷ್ಟು ಶಿಕ್ಷಕರನ್ನು ಗಮನಿಸಿದ್ದೇನೆ, ಬಡ್ಡಿಗೆ ಹಣ ಕೊಟ್ಟವರು ಶಿಕ್ಷಕರೆ, ಆರೋಪಿ ಸ್ಥಾನದಲ್ಲಿ ನಿಂತವರು ಶಿಕ್ಷಕರೇ ಆಗಿರುವುದರಿಂದ ತಾವು ಈ ಮಾತು ಹೇಳುತ್ತಿರುವುದಾಗಿ ವಿವರಿಸಿದರು.ಮಕ್ಕಳನ್ನು ದುಶ್ಚಟಗಳಿಂದ ದೂರ ಇರುವಂತೆ ಬುದ್ಧಿ ಹೇಳಬೇಕಾದ ಹಾಗೂ ಸಮಾಜಕ್ಕೆ ಸರಿ ದಾರಿಯನ್ನು ತೋರಬೇಕಾದ ಶಿಕ್ಷಕರೇ ಇಂತ ಕೃತ್ಯಗಳಲ್ಲಿ ಭಾಗವಹಿಸಿದರೆ ಸಮಾಜಕ್ಕೆ ಏನು ಸಂದೇಶ ನೀಡಲು ಸಾಧ್ಯವಾಗುತ್ತದೆ, ಆದ್ದರಿಂದ ಶಿಕ್ಷಕರು ಇಂತ ವ್ಯವಹಾರಗಳಿಂದ ದೂರ ಇರಬೇಕೆಂದರು.ಮಕ್ಕಳಿಗೆ ಕನ್ನಡ ಕಲಿಸಿ
ಸಾಧಕ ಶಿಕ್ಷಕರನ್ನು ಸನ್ಮಾನಿಸಿದ ಸಮಾಜ ಸೇವಕ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ಶಿಕ್ಷಣ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ, ಶಿಕ್ಷಣ ಹೆಚ್ಚಾದಂತೆ ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗುತ್ತವೆ, ಇತ್ತೀಚಿಗೆ ಕನ್ನಡ ಭಾಷೆಯ ಬಗ್ಗೆ ಮಕ್ಕಳಿಗೆ ಹೆಚ್ಚಿನ ಪರಿಣಿತಿ ಇಲ್ಲವಾಗುತ್ತಿರುವುದರಿಂದ ಶಿಕ್ಷಕರು ಪರಿಣಾಮಕಾರಿಯಾಗಿ ಕನ್ನಡವನ್ನು ಬೋಧಿಸಿ ಮಕ್ಕಳನ್ನು ಸಮರ್ಥ ಕನ್ನಡಿಗರನ್ನಾಗಿಸಬೇಕೆಂದು ಸಲಹೆ ನೀಡಿದರು.ಸ್ವರ್ಣ ಭೂಮಿ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿ, ಪ್ರತಿ ವರ್ಷ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ, ಕಳೆದ ವರ್ಷ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು, ಈ ಬಾರಿ ಜಿಲ್ಲಾ ಮಟ್ಟಕ್ಕೆ ಮಿತಿಗೊಳಿಸಲಾಗಿದೆ ಎಂದರು.ವೇದಿಕೆಯಲ್ಲಿ ಸಾವಿತ್ರಿಬಾಯಿ ಫುಲೆ, ಡಾ.ಎಸ್.ರಾಧಾಕೃಷ್ಣನ್ ಮತ್ತು ಫಾತಿಮಾಷೇಕ್‌ರ ಭಾವಚಿತ್ರಗಳಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು.ಟಿ.ಸುಬ್ಬರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಸುಧಾಕರ್, ರೋಟರಿ ಅಧ್ಯಕ್ಷ ನಾಗಾನಂದ ಕೆಂಪರಾಜ್, ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಗಮನ ಶಾಂತಮ್ಮ, ಕವಿ ವಿ.ಲಕ್ಷ್ಮಯ್ಯ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಸಂತೋಷ್ ಕುಮಾರ್, ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ಸುಪ್ರೀಂ ಇತರರು ಹಾಜರಿದ್ದರು.ಪ್ರಶಸ್ತಿ ಪುರಸ್ಕೃತರುಕೋಲಾರ ತಾಲೂಕಿನ ಕೆ.ಸಿ.ಮುನಿರಾಜು, ಜೆಡ್.ಜಮೀಲ್ ಅಹಮದ್, ಕೆ.ಎನ್.ಮುರಳೀಧರ, ಎಸ್.ರೇಣುಕ, ಎಂ.ಆರ್.ಧನಂಜಯ, ಆರ್.ಕೆ.ಜಯಂತಿ, ವಿ.ಮಂಗಳಗೌರಿ, ಆರ್.ಅಮರೇಶ್‌ಬಾಬು, ಕೆ.ವಿ.ಜಗನ್ನಾಥ್, ಶ್ರೀನಿವಾಸಪುರ ತಾಲೂಕಿನ ಆರ್.ಮಂಜುನಾಥರೆಡ್ಡಿ, ಜೆ.ಎಸ್.ರಜಿನಿ, ಜಿ.ಮಂಜುನಾಥ, ಕೆಜಿಎಫ್ ತಾಲೂಕಿನ ಟಿ.ಭಾರತಿ, ವಿ.ಸುಬ್ರಮಣಿ, ಎಂ.ನಿವೇದಿತ, ಮಾಲೂರು ತಾಲೂಕಿನ ಪಿ.ಜಿ.ವಿದ್ಯಾಧರಿ, ದೊಡ್ಡಿ ನಾರಾಯಣಸ್ವಾಮಿ, ಬಂಗಾರಪೇಟೆ ತಾಲೂಕಿನ ಜಿ.ಗೀತಾ, ಕೆ.ಜಿ.ಮಂಜುನಾಥ್, ವಿ.ಎನ್.ನಾರಾಯಣಸ್ವಾಮಿ, ಕೆ.ರೂಪ, ಮುಳಬಾಗಿಲು ತಾಲೂಕಿನ ಎನ್.ಸಿರಾಜೇಶ್ವರಿ, ಎಂ.ಮಹೇಶ್, ವಿಶೇಷ ಚೇತನ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜೆ.ಜೋಶ್ವಾ ಡ್ಯಾನಿಯಲ್, ಕೆ.ಪದ್ಮ, ಟಿ.ಎಂ.ರಮೇಶ್, ಕೆ.ಎನ್.ರಾಧಾಕೃಷ್ಣ, ಪ್ರe, ಎಂ.ಎಸ್.ಗಿರೀಶ್‌ರಿಗೆ ಡಾ.ಎಸ್.ರಾಧಾಕೃಷ್ಣನ್ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸ್ವರ್ಣಭೂಮಿ ಸೇವಾ ರತ್ನ ಪ್ರಶಸ್ತಿಯನ್ನು ಪಿಪಿಡಿ ಸಮುದಾಯ ಪಿಜಿಯೋಥೆರಪಿಸ್ಟ್ ಬಿ.ಎನ್.ಸುಧಾ ಮತ್ತು ಸ್ವಾಭಿಮಾನಿ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಹೆನ್ರಿ ಜೋಸೆಫ್ ಮತ್ತು ಮಂದಾರ ಅಂಗವಿಕಲರ ವಸತಿ ಶಾಲೆಯ ಅಕ್ಷಕಿ ಎಂ.ಜಿ.ಗಾಯತ್ರಿ ಅವರಿಗೆ ನೀಡಿ ಸತ್ಕರಿಸಲಾಯಿತು. ಈನೆಲ ಈಜಲ ವೆಂಕಟಾಚಲಪತಿ ಮತ್ತು ವೈ.ಹರ್ಷಿತ್ ರಿಂದ ಗಾಯನ ಕಾರ್ಯಕ್ರಮ. ಕುಮಾರಿ ಎಂ.ನಿಶ್ಚಯ ರಿಂದ ಭರತನಾಟ್ಯ ನೆರವೇರಿತು. ರಂಗ ಇಂಚರ ಟ್ರಸ್ಟ್ ಅಧ್ಯಕ್ಷ ಡಾ.ಇಂಚರ ನಾರಾಯಣಸ್ವಾಮಿ, ಪೋಸ್ಟ್ ನಾರಾಯಣಸ್ವಾಮಿ, ಶಿವಕುಮಾರ್ ಇದ್ದರು.