ಸಿಎಸ್‌ಆರ್‌ ನಿಧಿ ಬಳಿ ಶಾಲೆಗಳನ್ನು ಅಭಿವೃದ್ಧಿಪಡಿಸಿ

| Published : Mar 03 2025, 01:47 AM IST

ಸಾರಾಂಶ

ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಪ್ರತಿ ಗ್ರಾಮದಲ್ಲಿ ಸ್ಮಶಾನ ಮತ್ತು ಎಲ್ಲಾ ಸರ್ಕಾರಿ ಶಾಲೆಗಳಲ್ಲಿನ ಆಸ್ತಿ ದಾಖಲೆಯನ್ನು ಮಾರ್ಚ್ ಅಂತ್ಯದೊಳಗೆ ವಿತರಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಗಾರಿಕೆಗಳ ಸಿ.ಎಸ್‌.ಆರ್‌. ನಿಧಿ ಬಳಸಿಕೊಳ್ಳುವಂತೆ ಶಾಸಕ ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರದ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ಶನಿವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಪ್ರತಿ ಗ್ರಾಮದಲ್ಲಿ ಸ್ಮಶಾನ ಮತ್ತು ಎಲ್ಲಾ ಸರ್ಕಾರಿ ಶಾಲೆಗಳಲ್ಲಿನ ಆಸ್ತಿ ದಾಖಲೆಯನ್ನು ಮಾರ್ಚ್ ಅಂತ್ಯದೊಳಗೆ ವಿತರಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರಿ ಶಾಲೆಗಳ ಜಾಗದ ಸ್ಥಿತಿ ಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದಾಗ ಸಾಕಷ್ಟು ಮಂದಿ ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಜಾಗದ ಸಂಬಂಧ ಸರ್ವೆ ನಡೆಸಲು ಸಾಧ್ಯವಾಗಿಲ್ಲ. ಇದರಿಂದ ಆಸ್ತಿ ಶಾಲೆಯ ಹೆಸರಿಗೆ ನೋಂದಣಿಯಾಗುವ ಕೆಲಸ ಆಗಿಲ್ಲ ಎಂದರು.ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಶಾಲೆ ಆರಂಭವಾಗಿ ಹಲವು ವರ್ಷವಾದರೂ ದಾಖಲಾತಿ ನಡೆಯುತ್ತಿಲ್ಲ. ಆದ್ದರಿಂದ ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆಗೂಡಿ ಸರ್ವೇ ನಡೆಸುವಂತೆ ಸೂಚಿಸಿದರು. ಇನ್ನೂ ಶೇ. 30ರಷ್ಟು ಕಾರ್ಯವಾಗಿಲ್ಲ. ಮಾರ್ಚ್ ಅಂತ್ಯದ ವೇಳೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಆಸ್ತಿ ಖಾತೆ ಮಾಡುವ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.ಎಲ್ಲಾ ಗ್ರಾಮಗಳಲ್ಲೂ ಸ್ಮಶಾನಗಳು ಪ್ರತಿ ಗ್ರಾಮದಲ್ಲೂ ಇರಬೇಕು. ಕೆಲವು ಕಡೆ ಗ್ರಾಮ ಠಾಣೆ, ಸರ್ವೇ ನಂಬರ್‌ ಗಳನ್ನು ಮಾರ್ಚ್‌ ಅಂತ್ಯದೊಳಗೆ ಗುರುತಿಸಬೇಕು ಎಂದರು.ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಆಗಬೇಕು. ಅಗತ್ಯವಿರುವ ಕಡೆ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಬೇಕು. ಮಕ್ಕಳೇ ಇಲ್ಲದಿರುವ ಅಂಗನವಾಡಿ ಕಾರ್ಯಕರ್ತರು ಊರಿನೊಳಗಡೆ ಪಾಲಕರಿಗೆ ಮನವರಿಕೆ ಮಾಡಿ ಮಕ್ಕಳನ್ನು ಕರೆತರಬೇಕು ಎಂದು ಅವರು ಹೇಳಿದರು.ರಾಜ್ಯಾದಾದ್ಯಂತ ಬಿ ಖಾತಾ ಅಭಿಯಾನ ಆರಂಭವಾಗಿದೆ. ಹೀಗಾಗಿ ಕ್ಷೇತ್ರದಲ್ಲಿಯೇ ಹೆಚ್ಚು ಬಿ ಖಾತಾ ವಿತರಿಸಬೇಕಿದೆ. ಇದರಲ್ಲಿ ಹೆಚ್ಚಿನವರು ಬಡವರಿದ್ದು, ಅಧಿಕಾರಿಗಳು ಮಾನವೀಯತೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. 30 ವರ್ಷದಿಂದ ಹೊಸ ಬಡಾವಣೆಗಳಿಗೆ ನಗರಾಭಿವೃದ್ದಿ ಪ್ರಾಧಿಕಾರಿವೂ ಒಂದು ರೂಪಾಯಿ ಅಭಿವೃದ್ಧಿ ಮಾಡಿಲ್ಲ. ಈಗ ಗ್ರಾಪಂ, ಪಪಂ ಜವಾಬ್ದಾರಿ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಿ ಯಶಸ್ವಿಯಾಗಿ ನಿಭಾಯಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಗ್ರಾಪಂನಲ್ಲಿ ವಾಸವಿರುವ ನಿವೇಶನ ರಹಿತರಿಗೆ, ಬಾಡಿಗೆ ಮನೆಯಲ್ಲಿ ಇರುವವರ ಪಟ್ಟಿ ಸಿದ್ಧಪಡಿಸಿಕೊಂಡು ಆಶ್ರಯ ಯೋಜನೆಯಲ್ಲಿ ಮನೆಗಳು ಬಂದಾಗ ಮೊದಲ ಆದ್ಯತೆ ನೀಡಬೇಕು. ಉಳ್ಳವರಿಗೆ ನಿವೇಶನ ಕೊಡಬೇಡಿ. ಬಡವರಿಗೆ ನೆರಳು ಕೊಟ್ಟು ದಿವಂಗತ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಆಶಯವನ್ನು ಈಡೇರಿಸಿ ಎಂದು ಮನವಿ ಮಾಡಿದರು.ಅಕ್ರಮ ಪಂಪ್‌ ಸೆಟ್‌ ಗಳನ್ನು ಹೊಂದಿದ್ದು, ಇವರಿಂದ ಹಣ ಕಟ್ಟಿಸಿಕೊಂಡು ಸಕ್ರಮ ಮಾಡಬೇಕು. ರೈತರು ಕೂಡ ಸರ್ಕಾರದ ಆದೇಶ ಪಾಲಿಸಬೇಕು. ಇದೇ ಕಾರಣಕ್ಕೆ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸದರೆ ರೈತರ ಬೆಳೆ ಸಂಪೂರ್ಣ ಹಾಳಾಗಲಿದೆ. ಏಕಲವ್ಯ ನಗರಕ್ಕೂ ವಿದ್ಯುತ್ ಕೊಡಬೇಕು ಎಂದು ಅವರು ಸೂಚಿಸಿದರು.ಸೇವಾ ಮನೋಭಾವನೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಬಡವರರೊಂದಿಗೆ ನಿಮ್ಮ ಅಧಿಕಾರ ಚಲಾಯಿಸಬೇಡಿ. ಬಡವರ ಕಣ್ಣೀರು ಹೊರೆಸುವ ಕೆಲಸ ಮಾಡಿದರೆ ನಿಮ್ಮ ಕುಟುಂಬಕ್ಕೆ ದೇವರನ್ನು ಒಳ್ಳೆಯದ್ದನ್ನು ಮಾಡುತ್ತಾನೆ. ಬಡವರನ್ನು ಅಯ್ಯೋ ಅನಿಸಿದರೆ ಯಾವ ದೇವಾಲಯಕ್ಕೆ ಹೋದರ ಕರ್ಮ ಕಳೆಯುವುದಿಲ್ಲ. ಕುಂಭಮೇಳದಲ್ಲಿ ಪುಣಸ್ನಾನ ಮಾಡಿದರು ಪಾಪಾ ಕಮ್ಮಿಯಾಗುವುದಿಲ್ಲ. ಹೀಗಾಗಿ ನಿಮ್ಮ ಕೊಟ್ಟಿರುವ ಅಧಿಕಾರವನ್ನು ಬಡವರ ಪರವಾಗಿ ಚಲಾಯಿಸಿ. ಸರ್ಕಾರಿ ಕೆಲಸ ದೇವರ ಎಂದು ನಿರೂಪಿಸಿ ಎಂದರು. ಶಾಲಾ ಸಮಯಕ್ಕೆ ಸರಿಯಾಗಿ ಶಿಕ್ಷಕರು ಬರುತ್ತಿಲ್ಲ. ಮೊಬೈಲ್‌ನಿಂದ ಪಾಠ-ಪ್ರವಚನ ಮಾಡುತ್ತಿಲ್ಲ ಎಂಬ ದೂರುಗಳು ನನಗೆ ಬಂದಿವೆ. ಹೀಗಾಗಿ ಶಾಲಾ ಸಮಯದಲ್ಲಿ ಶಿಕ್ಷಕರ ಮೊಬೈಲ್ ಬಳಕೆ ನಿಷೇಧಿಸಬೇಕು. ಫಲಿತಾಂಶದಲ್ಲಿ ಶಾಲೆಗಳ ಸ್ಪರ್ಧೆ ಹೆಚ್ಚಿಸಬೇಕು ಎಂದರು. ಕುಡಿಯುವ ನೀರು ಸಮಸ್ಯೆ ಆಗಬಾರದುಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಆಗಬಾರದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗಬಾರದು. ಈಗಾಗಲೇ ಕಬಿನಿ, ಕಾವೇರಿ ನದಿಯಿಂದ ತರಲಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಬಜೆಟ್ ಹಣ ಮೀಸಲಿಡಲು ಮನವಿ ಮಾಡಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆಗೆ ಸಜ್ಜಾಗಬೇಕು ಎಂದು ಅವರು ತಿಳಿಸಿದರು.---ಬಾಕ್ಸ್‌ ಸುದ್ದಿಬಡವರು ಊಟ ಮಾಡಿ ಸಂತೃಪ್ತಿಯಿಂದ ಮಲಗಿದರೆ ನನ್ನನ್ನು ಕಾಪಾಡಲಿದೆ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಕೂಡಲೇ ಅನ್ನಭಾಗ್ಯ ಜಾರಿಗೆ ತಂದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಇಷ್ಟು ವರ್ಷ ಉಳಿದಿದ್ದಾರೆ ಎಂದರೆ, ಅದಕ್ಕೆ ಅನ್ನಭಾಗ್ಯ ಸೇರಿ ಬಡವರಿಗೆ ಕೊಟ್ಟ ಕಲ್ಯಾಣ ಕಾರ್ಯಕ್ರಮಗಳೇ ಕಾರಣ. ಯಾರನ್ನು ಲೆಕ್ಕಸದೇ ಬಡವರ ಪರ ನಿಂತ ಹಿನ್ನೆಲೆಯಲ್ಲಿ ರಾಜಕೀಯದಲ್ಲಿ ಅವರನ್ನು ರಕ್ಷಣೆ ಮಾಡುತ್ತಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.