ಸಾರಾಂಶ
ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚ ನಡೆಸುವ ಮೂಲಕ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುವುದು ಅಗತ್ಯ
ಲಕ್ಷ್ಮೇಶ್ವರ: ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಶಿಕ್ಷಕರ ಜ್ಞಾನ ವೃದ್ಧಿ ಹಾಗೂ ಶೈಕ್ಷಣಿಕ ಸಮಾಲೋಚನೆ ನಡೆಸಲು ಸಿಆರ್‌ಸಿ ಕಟ್ಟಡ ಉಪಯುಕ್ತವಾಗಿ ಬಳಸಿಕೊಳ್ಳುವ ಕಾರ್ಯ ಶಿಕ್ಷಣ ಇಲಾಖೆ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಬುಧವಾರ ಸಮೀಪದ ಪು.ಬಡ್ನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನವೀಕರಣಗೊಂಡ ಸಿಆರ್‌ಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಕಳೆದ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಸಿಆರ್‌ಸಿ ಕಟ್ಟಡವನ್ನು ಪುನರ್ ನವೀಕರಣಗೊಳಿಸಿ ಶಿಕ್ಷಣ ಇಲಾಖೆ ತನ್ನ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು, ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚ ನಡೆಸುವ ಮೂಲಕ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಪಾಳು ಬಿದ್ದ ಕಟ್ಟಡವನ್ನು ಸುಮಾರು ₹1ಲಕ್ಷಕ್ಕಿಂತ ಹೆಚ್ಚು ವೆಚ್ಚದಲ್ಲಿ ಇಲ್ಲಿನ ಶಿಕ್ಷಕರು ಹಾಗೂ ಸಿಆರ್‌ಸಿ ಸೇರಿಕೊಂಡು ನವೀಕರಣಗೊಳಿಸಿದ್ದಾರೆ.ಈ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆದು ಮಕ್ಕಳ ಸುಧಾರಣೆಗೆ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಪ್ರೇಮಕ್ಕ ಮಾದರ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಮರಿಹೊಳಲಣ್ಣವರ, ಬಿಇಓ ಜಿ.ಎಂ.ಮುಂದಿನಮನಿ, ತಾಪಂ ಮಾಜಿ ಸದಸ್ಯ ಸುಭಾಷ ಬಟಗುರ್ಕಿ, ಎಂ.ಬಿ. ಹೊಸಮನಿ, ಪರಮೇಶ್ವರಪ್ಪ ಬಟಗುರ್ಕಿ, ಬಿ.ಎಸ್. ಹರ್ಲಾಪೂರ, ಈಶ್ವರ ಮೆಡ್ಲೇರಿ, ಗಿರೀಶ್ ನೇಕಾರ, ಶೇಖಣ್ಣ ಕರೆಣ್ಣವರ, ಮುತ್ತಣ್ಣ ಚೋಟಗಲ್ಲ, ಚಂದ್ರು ನೇಕಾರ, ಜ್ಯೋತಿ ಗಾಯಕವಾಡ, ಉಮೇಶ ನೇಕಾರ, ಲೋಕೇಶ ಮಠದ, ಎಲ್.ಎನ್. ನಂದೆಣ್ಣವರ, ಡಿ.ಡಿ. ಲಮಾಣಿ, ವೈ.ಎಸ್. ತಿರಕಣ್ಣವರ, ಬಿ.ಎಂ. ಯರಗುಪ್ಪಿ, ವಿ.ಎಚ್. ದೀಪಾವಳಿ, ಜಿ.ಆರ್. ಪಾಟೀಲ, ಸತೀಶ ಬೊಮಲೆ, ಎಲ್.ಎಫ್. ಮಠದ, ಎಸ್.ಎನ್. ಪಶುಪತಿಹಾಳ, ಎನ್.ಎ. ಮುಲ್ಲಾ, ಎ.ಡಿ. ಸೋಮನಕಟ್ಟಿ ಇದ್ದರು.