ರಾಣಿಬೆನ್ನೂರು: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ 16 ಸ್ಥಾನಗಳಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಕ್ರಿಯಾ ಸಮಿತಿ ಅಭ್ಯರ್ಥಿಗಳು 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಪ್ರಸ್ತುತ ಆಡಳಿತ ನಡೆಸುತ್ತಿದ್ದ ಹೋರಾಟ ಸಮಿತಿ 7 ಸ್ಥಾನಗಳನ್ನು ಮಾತ್ರ ಗಳಿಸುವ ಮೂಲಕ ಪರಾಭವಗೊಂಡಿದೆ. ಕ್ರಿಯಾ ಸಮಿತಿಯಿಂದ ಆಯ್ಕೆಯಾದವರು: ಗಿರೀಶ ಪದಕಿ, ನಾಗರಾಜ ದೇವಾಂಗದ, ಬಸವರಾಜ ಧುಳೇಹೊಳಿ, ಮಾಲತೇಶ ಸಾವಂತಲವರ, ಕರಬಸಪ್ಪ ಚಿನ್ನಿಕಟ್ಟಿ, ಬಸಪ್ಪ ಕಿತ್ತೂರ ಹಾಗೂ ಮಹಿಳಾ ವಿಭಾಗದಲ್ಲಿ ಕುಸುಮಾ ಮುದಿಗೌಡರ, ಬಿ. ಶೋಭಾ, ಸವಿತಾ ಲಾಪೋಜಿ ಆಯ್ಕೆಯಾಗಿದ್ದಾರೆ.

ಹೋರಾಟ ಸಮಿತಿಯಿಂದ ಆಯ್ಕೆಯಾದವರು: ಇಸ್ಮಾಯಿಲ್ ಐರಣಿ, ಕೆ.ವಿ. ಕಾಟಣ್ಣನವರ, ರಾಜೇಶ ಮುದ್ದಿ, ಬಸವರಾಜ ಬಡಿಗೇರ, ಎಂ.ಎಚ್.ಕಂತಿ ಹಾಗೂ ಮಹಿಳಾ ವಿಭಾಗದಲ್ಲಿ ಅನ್ನಪೂರ್ಣ ಬಣಕಾರ, ಜಯಶ್ರೀ ಗುರಪ್ಪನವರ ಆಯ್ಕೆಯಾಗಿದ್ದಾರೆ. ಶುಕ್ರವಾರ ಸಂಜೆ ಪ್ರಾರಂಭವಾದ ಮತಗಳ ಎಣಿಕೆ ಶನಿವಾರ ಬೆಳಗಿನ ಜಾವದವರೆಗೂ ನಡೆಯಿತು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕ್ರಿಯಾ ಸಮಿತಿ ಅಭ್ಯರ್ಥಿಗಳು ಪರಸ್ಪರ ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು.