ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಶಿಕ್ಷಕರು ದೈವಿ ಸಂಭೂತರು: ಕಣ್ಣನ್‌

| Published : Sep 08 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ಸಮಾಜಕ್ಕೆ ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಗುರುಗಳು ದೈವಿಸಂಭೂತರು. ಗುರುಗಳು ಹಾಕಿಕೊಟ್ಟ ಮಾರ್ಗದರ್ಶನ, ಸನ್ನಡತೆ, ಸದ್ವಿಚಾರದಡಿ ವಿದ್ಯಾರ್ಥಿಗಳು ಸಾಗಿದರೆ ದೇಶದಲ್ಲಿ ಉತ್ತಮ ನಾಗರಿಕರಾಗಿ ರೂಪು ಗೊಳ್ಳಬಹುದು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

- ಎಸ್‌ಎಸ್‌ಆರ್‌ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಮಾಜಕ್ಕೆ ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಗುರುಗಳು ದೈವಿಸಂಭೂತರು. ಗುರುಗಳು ಹಾಕಿಕೊಟ್ಟ ಮಾರ್ಗದರ್ಶನ, ಸನ್ನಡತೆ, ಸದ್ವಿಚಾರದಡಿ ವಿದ್ಯಾರ್ಥಿಗಳು ಸಾಗಿದರೆ ದೇಶದಲ್ಲಿ ಉತ್ತಮ ನಾಗರಿಕರಾಗಿ ರೂಪು ಗೊಳ್ಳಬಹುದು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಜ್ಯೋತಿನಗರದ ಸಮೀಪದ ಮಲೆನಾಡು ವಿದ್ಯಾಸಂಸ್ಥೆಯ ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ಧ ಗುರುವಂದನ ಹಾಗೂ 25ನೇ ವರ್ಷದ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಳೇ ವಿದ್ಯಾರ್ಥಿಗಳು ಹಾಗೂ ಹಿರಿಯ ಶಿಕ್ಷಕರ ಸಮ್ಮೀಲನ ಅಪರೂಪವಾಗಿದೆ. ಹಿಂದಿನ ಗೆಳೆಯ ಮತ್ತು ಗೆಳತಿಯರ ಬಾಂಧವ್ಯ ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡಿರುವುದು ಹೆಮ್ಮೆಯ ಸಂಗತಿ. ಹಣವಿದ್ದಲ್ಲಿ ಜೀವನ ಸಾಗಿಸ ಬಹುದಷ್ಟೇ ಹೊರತು. ಪ್ರೀತಿ, ವಿಶ್ವಾಸ ಹಾಗೂ ಹಳೇ ನೆನಪುಗಳನ್ನು ಮೆಲುಕು ಹಾಕಲು ಸಾಧ್ಯವಿಲ್ಲ ಎಂದರು.ಗುರುಗಳ ಆಶೀರ್ವಾದದಿಂದ ವಿದ್ಯಾರ್ಥಿಗಳು ಬದುಕಿನಲ್ಲಿ ಸೋಲಾನುಭವಿಸಲು ಸಾಧ್ಯವಿಲ್ಲ. ಶಿಕ್ಷಕರ ಕೃಪೆಗೆ ಪಾತ್ರರಾಗಿ ಬದುಕುವುದೇ ನಿಜವಾದ ಧರ್ಮವಾಗಿದೆ. ಆ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸಿದ ಶಾಲೆಯನ್ನು ಉಳಿಸಿ, ಬೆಳೆಸುವ ಜೊತೆಗೆ ಪರರಿಗೂ ಶಾಲೆ ವೈಶಿಷ್ಟತೆಯ ಬಗ್ಗೆ ತಿಳಿ ಹೇಳಬೇಕು ಎಂದು ಕಿವಿಮಾತು ಹೇಳಿದರು.ಹಳೇ ವಿದ್ಯಾರ್ಥಿಗಳು ಮಾತನಾಡಿ, ಶಾಲೆಯಲ್ಲಿ ನಡೆದ ತುಂಟಾಟ, ಕಿಟಲೇ, ಸಣ್ಣ ಪುಟ್ಟ ತಪ್ಪುಗಳಿಗೆ ಶಿಕ್ಷಕರಿಂದ ತಿಂದ ಪೆಟ್ಟುಗಳನ್ನು ಮೆಲುಕು ಹಾಕಿ ಖುಷಿ ಪಟ್ಟರು. ಶಿಕ್ಷಕರು ನೀಡಿದಂತಹ ಪೆಟ್ಟು ಕಲ್ಲಿನ ಬಂಡೆಯನ್ನು ಸುಂದರ ವಿಗ್ರಹ ರೂಪದಲ್ಲಿ ತಯಾರಾಗುವಂತೆ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಮಾಡಿದೆ ಎಂದು ಹೇಳಿದರು.ಇತ್ತೀಚಿನ ಶಿಕ್ಷಣ ವ್ಯವಸ್ಥೆ ಹಿಂದಿನ ಪದ್ಧತಿಯಲ್ಲಿಲ್ಲ. ಮಕ್ಕಳಿಗೆ ಒತ್ತಡದಿಂದ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆದರುಗೊಂಬೆಯಂತೆ ತಯಾರಾಗಿ ತೆರಳುವಂತಾಗಿದೆ. ಕೆಜಿಗಟ್ಟಲೇ ನೋಟ್‌ ಪುಸ್ತಕ ಹೊರಬೇಕಾಗಿದೆ. ಹೀಗಾಗಿ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಪಾಲಕರು ಮುಂದಾಗಬೇಕು ಎಂದರು. ಇದೇ ವೇಳೆ ಶಾಲೆಯಲ್ಲಿನ ಹಳೇ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗೌರವಯುತವಾಗಿ ಸನ್ಮಾನಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳು ಪರಸ್ಪರ ಪರಿಚಯ, ಅನಿಸಿಕೆಗಳನ್ನು ಹಂಚಿಕೊಂಡರು. ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಕೆ.ಸದಾಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಎಸ್.ಸೀತಾಲಕ್ಷ್ಮೀ, ಬಿ.ಎಲ್.ಜಗದೀಶ್, ಎಚ್.ಎನ್.ಸತೀಶ್, ಎಚ್. ಬಿ.ಹನುಮಂತಪ್ಪ, ಶಶಿಕಲಾ, ಬಿ.ಸಿ.ಯೋಗೀಶ್, ಹಳೇ ವಿದ್ಯಾರ್ಥಿಗಳಾದ ಎನ್.ಕೆ.ಮಂಜುನಾಥ್, ಡಿ.ಆರ್. ಅರುಣ್, ಮಂಜುನಾಥ್, ಮಧು ಕುಮಾರ್, ಅಶೋಕ್ ಉಪಸ್ಥಿತರಿದ್ದರು. ಬಿಂದಿಯಾ ಪ್ರಾರ್ಥಿಸಿದರು. ಬಿ.ಆರ್.ದಿವ್ಯ ಸ್ವಾಗತಿಸಿದರು. ಎಂ.ಎಂ.ಕವೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಸ್.ಉಮಾ ನಿರೂಪಿಸಿ, ವಂದಿಸಿದರು. 7 ಕೆಸಿಕೆಎಂ 1ಚಿಕ್ಕಮಗಳೂರಿನ ಮಲೆನಾಡು ವಿದ್ಯಾಸಂಸ್ಥೆ ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಗುರುವಂದನ ಹಾಗೂ 25ನೇ ವರ್ಷದ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮ ನಡೆಯಿತು.