ಸ್ವಚ್ಛತಾ ಅಭಿಯಾನ ಪ್ರಯುಕ್ತ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧನೆ

| Published : Sep 21 2024, 01:54 AM IST

ಸ್ವಚ್ಛತಾ ಅಭಿಯಾನ ಪ್ರಯುಕ್ತ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛ ಭಾರತಕ್ಕಾಗಿ ವಾರದಲ್ಲಿ ಎರಡು ಗಂಟೆ ಕಾಲ ಸ್ವಪ್ರೇರಣೆಯಿಂದ ನಾವು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದಿಲ್ಲ. ಇತರರು ಕಸ ಹಾಕಲು ಬಿಡುವುದಿಲ್ಲ. ಭಾರತವನ್ನು ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆಂದು ನೆರೆದಿದ್ದವರು ಪತಿಜ್ಞೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಶಿರಾ ಪಟ್ಟಣದ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದಲ್ಲಿ ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನ ಪ್ರಯುಕ್ತ ಸ್ವಚ್ಛತಾ ಪ್ರತಿಜ್ಞಾ ವಿಧಿ ನಡೆಯಿತು.

ಸ್ವಚ್ಛ ಭಾರತಕ್ಕಾಗಿ ವಾರದಲ್ಲಿ ಎರಡು ಗಂಟೆ ಕಾಲ ಸ್ವಪ್ರೇರಣೆಯಿಂದ ನಾವು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದಿಲ್ಲ. ಇತರರು ಕಸ ಹಾಕಲು ಬಿಡುವುದಿಲ್ಲ. ಭಾರತವನ್ನು ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆಂದು ನೆರೆದಿದ್ದವರು ಪತಿಜ್ಞೆ ಮಾಡಿದರು.

ಈ ವೇಳೆ ಅನುಸಂಧಾನ ಸಂಸ್ಥಾನದ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ಮಾತನಾಡಿ, ಸ್ವಚ್ಛತೆ ಮತ್ತು ಉತ್ತಮ ಪರಿಸರ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದಿಂದ ಸ್ವಚ್ಛತಾ ಅಭಿಯಾನ, ಆರೋಗ್ಯ ಜಾಗೃತಿ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಕಲಾ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಜನರು ಪೂರ್ಣಪ್ರಮಾಣದ ಸಹಕಾರ ನೀಡುವ ಮೂಲಕ ಭಾರತವನ್ನು ಸ್ವಚ್ಛ ರಾಷ್ಟ್ರವನ್ನಾಗಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಂಶೋಧನಾಧಿಕಾರಿ ಡಾ.ನಿತೇಶ, ಡಾ. ನುಝಾತ, ಡಾ.ಸಿಂಧುಶ್ರೀ, ಡಾ. ಕಾರ್ತಿಕ್, ಡಾ. ಪೂಜಾ, ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಫಿಜಿಯೋ ಥೆರಪಿಸ್ಟ್ ರಮ್ಯ, ಇಂಜನಿಯರ್ ನಾಗೇಶ, ಕಚೇರಿ ಸಿಬ್ಬಂದಿಗಳಾದ ಆರ್.ಪ್ರಗತಿ, ಯು.ಆರ್.ಚೈತ್ರಾ, ಎಂ.ಟಿ.ಎ. ಯಶವಂತ, ಸ್ವಚ್ಛತಾ ಕರ್ಮಿಗಳು ಸೇರಿದಂತೆ ಹಲವರು ಇದ್ದರು.