ಗುರು-ಶಿಷ್ಯರ ಸಂಬಂಧ ಬಹಳ ಪ್ರದಾನವಾಗಿದ್ದು, ಅಧ್ಯಾಪಕ ವೃತ್ತಿ ಅತೀ ಶ್ರೇಷ್ಠ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗುರು-ಶಿಷ್ಯರ ಸಂಬಂಧ ಬಹಳ ಪ್ರದಾನವಾಗಿದ್ದು, ಅಧ್ಯಾಪಕ ವೃತ್ತಿ ಅತೀ ಶ್ರೇಷ್ಠ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹ್ಯಾದ್ರಿ ವಿಜ್ಞಾನ ಪರಿಷತ್, ಕ್ರೀಡಾ ವಿಭಾಗದ ವಾರ್ಷಿಕ ಚಟುವಟಿಕೆಗಳ ಹಾಗೂ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಲೇಜಿನಲ್ಲಿ ಓದಿದವರು ರಾಜಕೀಯ ಮುತ್ಸದ್ದಿಗಳಾಗಿರುವುದು, ವಿಜ್ಞಾನಿಗಳಾಗಿರುವುದು ದೇಶ ವಿದೇಶಗಳಲ್ಲಿ ಕಾಲೇಜಿನ ಕೀರ್ತಿಪತಾಕೆಯನ್ನು ಹೆಚ್ಚಿಸಿದ ಈ ಕಾಲೇಜಿಗೆ ಸಹ್ಯಾದ್ರಿ ಎಂದು ನಾಮಕರಣ ಮಾಡಿದ್ದು ಕುವೆಂಪು ಅವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಲೆಪ್ಟಿನೆಂಟ್ ಕರ್ನಲ್ ಬಿ.ಎಸ್.ರಾಜು ಅವರು ಸೇವಾನುಭವದಲ್ಲಿ ಅನುಭವಿಸಿದ ಕಠಿಣವಾದ ಹೆಲಿಕಾಪ್ಟರ್ -ಫ್ಲೈಯ್ ಮಾಡುವ ದೇಶದಲ್ಲೇ ಪ್ರಥಮವಾಗಿ ಆಫ್ರಿಕಾದಲ್ಲಿ ಒಬ್ಬರಾಗಿ ಲಂಡನ್‌ನಲ್ಲಿ ಉನ್ನತ ಅಧ್ಯಯನ ಆರ್ಮಿಯಿಂದ ಮಾತ್ರ ಸಾಧ್ಯವಾಯಿತು. ವಿದ್ಯಾರ್ಥಿಗಳು ಉತ್ತಮ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವುದು ನಿಮ್ಮ ಭಾಗ್ಯ, ಇದೆಲ್ಲವನ್ನು ಸಾಧಿಸಲು ಮೂಲಭೂತವಾಗಿ ಶಿಸ್ತು, ಸಂಯಮ ಅಗತ್ಯ, ಅದು ಎನ್‌ಸಿಸಿ ಘಟಕದಿಂದ ಸಾಧ್ಯವೆಂದು ಕಿವಿಮಾತು ಹೇಳಿದರು.ಡಾ.ಪವಿತ್ರ ಮಾತನಾಡಿ, ಪಠ್ಯದಷ್ಟೇ ಸಾಂಸ್ಕೃತಿಕ ಚಟುವಟಿಕೆಗಳು ದೈಹಿಕ ಆರೋಗ್ಯಕ್ಕೆ ಉತ್ತಮವಾದುದೆಂದರು. ಪರಂಪರೆಯುಳ್ಳ ಇಂಟರ್ ಮೀಡಿಯಟ್ ಕಾಲೇಜು, ಕುವೆಂಪು ಅವರಿಂದ ಸಹ್ಯಾದ್ರಿ ಕಾಲೇಜು ಎಂಬ ನಾಮಕರಣ ಪಡೆಯಿತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ ಹಾ.ಮ.ನಾಗಾರ್ಜುನ, ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಅಡಿಗಲ್ಲನ್ನು ಕಂಡು ಇಂದಿಗೆ 85 ಸಂವತ್ಸರಗಳನ್ನು ಕಳೆದು ಶತಮಾನದತ್ತ ದಾಪುಗಾಲಿಡುತ್ತಿರುವ ಕಾಲೇಜಿಗೆ ತನ್ನ ಪ್ರತಿಷ್ಠೆಯನ್ನು ಪ್ರೊ.ಸಿ.ಎನ್.ರಾವ್ ವಿಜ್ಞಾನಿಯನ್ನು ಶಿವಮೊಗ್ಗ ಸುಬ್ಬಣ್ಣನಂತಹ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮುತ್ಸದ್ದಿಗಳನ್ನು ದೇಶ ವಿದೇಶಗಳಲ್ಲಿ ಪಸರಿಸಿದೆ ಎಂದರು.ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎನ್.ರಾಜೇಶ್ವರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕರಾದ ಪ್ರೊ.ಕೃಷ್ಣಮೂರ್ತಿ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪಾಚಾರ್ಯರಾದ ಪ್ರೊ ಅವಿನಾಶ್ ಹಾಗೂ ಪ್ರೊ.ಸಿರಾಜ್ ಅಹಮದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿದಿಗಳಾದ ಕುಮಾರಿ ನಿವೇದಿತ, ನಂದಿನಿ ನಾಯಕ್, ಸಹನ, ಗೋಪಿ ಇವರುಗಳು ಉಪಾಧ್ಯಕ್ಷರು, ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳಾಗಿ ಉಪಸ್ಥಿತರಿದ್ದರು. 2025-26ನೇ ಶೈಕ್ಷಣಿಕ ಅವಧಿಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.