ಕಡೂರುಎಲ್ಲಾ ವೃತ್ತಿಗಳಿಗಿಂತ ಅತ್ಯಮೂಲ್ಯವಾದ ವೃತ್ತಿ ಎಂದರೆ ಶಿಕ್ಷಕ ವೃತ್ತಿ ಎಂದು ಕಡೂರು ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಶಿಕ್ಷಕ ಎಸ್. ಎಚ್. ದಾಸೇಗೌಡರ ಬೀಳ್ಕೊಡುಗೆ ಸಮಾರಂಭ

ಕನ್ನಡಪ್ರಭ ವಾರ್ತೆ, ಕಡೂರು

ಎಲ್ಲಾ ವೃತ್ತಿಗಳಿಗಿಂತ ಅತ್ಯಮೂಲ್ಯವಾದ ವೃತ್ತಿ ಎಂದರೆ ಶಿಕ್ಷಕ ವೃತ್ತಿ ಎಂದು ಕಡೂರು ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.ತಾಲೂಕಿನ ಸಖರಾಯಪಟ್ಟಣ ಸಮೀಪದ ಜಿ.ಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಎಸ್. ಎಚ್. ದಾಸೇಗೌಡರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ತಂದೆ ತಾಯಿ ಮಗುವಿಗೆ ಜನ್ಮ ನೀಡಿದರೆ ಗುರು ಸಂಸ್ಕಾರದ ಮೂಲಕ ಜ್ಞಾನಾರ್ಜನೆ ನೀಡುವ ಶಿಕ್ಷಕ ವೃತ್ತಿ ಪ್ರಪಂಚದಲ್ಲೇ ಪವಿತ್ರವಾದುದು. ಅಂತಹ ಶಿಕ್ಷಕ ವೃತ್ತಿಯಲ್ಲಿ ದಾಸೇಗೌಡರು ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಅಲ್ಲದೆ ವಿಕಲ ಚೇತನದ ನಡುವೆಯೂ ಶಾಲೆಯನ್ನೇ ಮನೆಯಾಗಿಸಿಕೊಂಡು ಶಿಕ್ಷಣ ನೀಡಿರುವುದು ಸಂತಸ ತಂದಿದೆ ಎಂದರು.

ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ಶಾಲೆ ಮಕ್ಕಳನ್ನು ಸತ್ಪ್ರ ಜೆಗಳನ್ನಾಗಿ ರೂಪಿಸಲು ಶಿಕ್ಷಕ ವೃತ್ತಿ ಪವಿತ್ರವಾದುದು. 3 ದಶಕಗಳ ಕಾಲ ಮಕ್ಕಳ ಸೇವೆ ಮಾಡಿ, ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ನೀಡಿದ ಕೊಡುಗೆ ದಾಸೇಗೌಡರಿಗೆ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿ ಚಿನ್ನದ ಉಂಗುರವನ್ನು ಶಿಕ್ಷಕ ದಾಸೇಗೌಡ ದಂಪತಿಗೆ ನೀಡಿ ಸನ್ಮಾನಿಸಿದರು. ಸಭೆಯಲ್ಲಿ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜು, ಮುಖಂಡರಾದ ರಮೇಶ್, ತಿಮ್ಮರಾಯಪ್ಪ, ಹನುಮಂತಪ್ಪ, ಲೋಕೇಶ್, ಅಜ್ಜಯ್ಯ, ದಾಸೇಗೌಡ,ಗೋವಿಂದಸ್ವಾಮಿ, ಚಿಕ್ಕಯ್ಯ, ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ಗೀತಾ, ಶಾಲಾ ಮುಖ್ಯ ಶಿಕ್ಷಕ ಚಂದ್ರಪ್ಪ , ದೊಡ್ಡಪಟ್ಟಣಗೆರೆ ಕ್ಲಸ್ಟರ್ ಮಟ್ಟದ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಪೋಟೋ 2ಕೆಕೆಡಿಯು2..

ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಜಿ ಕೊಪ್ಪಲು ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಎಸ್. ಹೆಚ್. ದಾಸೇಗೌಡರಿಗೆ ಗ್ರಾಮಸ್ಥರ ಬೀಳ್ಕೊಡುಗೆ ಸಮಾರಂಭದಲ್ಲಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ಸನ್ಮಾನಿಸಿದರು..