ಧರ್ಮ ಮಾರ್ಗ ಬೋಧನೆಯೇ ಸಿದ್ಧಾಂತ ಶಿಖಾಮಣಿ

| Published : Mar 13 2025, 12:51 AM IST

ಸಾರಾಂಶ

ರೇಣುಕಾಚಾರ್ಯರು ಇಡೀ ಜಗತ್ತಿನ ತುಂಬಾ ಧರ್ಮ ಮಾರ್ಗ ಬೋಧಿಸುತ್ತಾರೆ. ಅವರೇ ವೀರಶೈವ ಮತ ಸ್ಥಾಪಕರಾಗಿರುತ್ತಾರೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲ್ಲನಪಾಕಿ ಸೋಮೇಶ್ವರ ಲಿಂಗದಿಂದ ಅನುರ್ಭವಿಸಿ ಭೂಮಿಯ ಮೇಲಿರುವ ಸರ್ವರಿಗೂ ಹಾಗೂ ಅಗಸ್ತ್ಯ ಮಹಾಮುನಿಗೆ ಧರ್ಮ ಮಾರ್ಗ ಬೋಧಿಸಿರುವುದೇ ಸಿದ್ಧಾಂತ ಶಿಖಾಮಣಿಯಾಗಿದೆಂದು ಗ್ರಾಮ ಪಂಚಾಯಿತಿ ಮುಖಂಡ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

ಗದ್ದನಕೇರಿ ಗ್ರಾಪಂ ಕಾರ್ಯಾಲಯದಲ್ಲಿ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಎಂದರೆ ಯಾವ ಸಮಯಕ್ಕೆ ಭೂಮಿಯ ಮೇಲೆ ಅನ್ಯಾಯ, ಅಧರ್ಮ, ಅನೀತಿ, ಅಸತ್ಯಗಳು ತಾಂಡವಾಡುತ್ತಿದ್ದವು ಶಿವನು ಚಿಂತಿತನಾಗಿ ಧರ್ಮ ಮಾರ್ಗವನ್ನು ಜನರಿಗೆ ಬೋಧಿಸಲೇಂದು ತನ್ನ 5 ಮುಖಗಳಿಂದ ಐದು ಜನರನ್ನು ಅನುರ್ಭವಿಸುತ್ತಾನೆ. ಅದರಲ್ಲಿ ಮೊದಲನೆಯದಾಗಿ ಶ್ರೀ ರೇಣುಕಾಚಾರ್ಯರು ಜನ್ಮತಾಳಿ ವೀರಶೈವ ಧರ್ಮ ಸ್ಥಾಪಿಸಿ, ಇಡೀ ಭೂಮಿ ಮೇಲೆ ಧರ್ಮ ಉಳಿಯುವಂತೆ ನೋಡಿಕೊಳ್ಳುತ್ತಾರೆ. ಭದ್ರಾನದಿ ದಂಡೆಯ ಮೇಲೆ ರಂಭಾಪುರಿ ಪೀಠ ಆರಂಭಿಸುವ ಮೂಲಕ ಪ್ರಥಮ ಜಗದ್ಗುರು ಆಗುತ್ತಾರೆ. ಈ ರೀತಿಯಾಗಿ ರೇಣುಕಾಚಾರ್ಯರು ಇಡೀ ಜಗತ್ತಿನ ತುಂಬಾ ಧರ್ಮ ಮಾರ್ಗ ಬೋಧಿಸುತ್ತಾರೆ. ಅವರೇ ವೀರಶೈವ ಮತ ಸ್ಥಾಪಕರಾಗಿರುತ್ತಾರೆ ಎಂದರು.

ಗ್ರಾಪಂ ಅಧ್ಯಕ್ಷ ಮಂಜು ರಾಠೋಡ, ಸದಸ್ಯರಾದ ವಿರುಪಾಕ್ಷಪ್ಪ ಮಾವಡಿ, ವೆಂಕಟೇಶ ಹಿರೇಮಠ, ಶಾಂತವ್ವ ಹೂಗಾರ್ ಪಿಡಿಒ ಅರ್ಜುನ್ ಲಮಾಣಿ, ಕಾರ್ಯದರ್ಶಿ ಆರ್‌.ವೈ.ಅಪ್ಪಣ್ಣವರ ಸಮಾಜದರಾದ ಅಯ್ಯಪ್ಪಯ್ಯ ಹಿರೇಮಠ, ಬಸಯ್ಯ ಮಠಪತಿ, ಗುರುಲಿಂಗಯ್ಯ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ, ರುದ್ರಯ್ಯ ಗಣಕುಮಾರಮಠ, ಪ್ರಭುಲಿಂಗಯ್ಯ ಹಿರೇಮಠ, ಮಹಾಂತೇಶ ಹಿರೇಮಠ, ಸಂಗಯ್ಯ ವಸ್ತ್ರದ, ತ್ರಿಮೂರ್ತಿ ವಸ್ತ್ರದ, ಬಸವರಾಜ ಹಿರೇಮಠ, ಗ್ರಾಮದ ಪ್ರಮುಖರಾದ ಅಂಖಡಪ್ಪ ಕುಂಬಾರ, ಸಂಗಪ್ಪಸ್ವಾಮಿ ಅಂಗಡಿ ಇದ್ದರು.