ಶಿಕ್ಷೆ ನೀಡದೆ ಶಿಕ್ಷಣ ಕಲಿಸುವುದು ಸವಾಲಿನ ಕೆಲಸ: ಮಲಯ ಶಾಂತಮುನಿ ಸ್ವಾಮೀಜಿ

| Published : Sep 25 2024, 12:55 AM IST

ಶಿಕ್ಷೆ ನೀಡದೆ ಶಿಕ್ಷಣ ಕಲಿಸುವುದು ಸವಾಲಿನ ಕೆಲಸ: ಮಲಯ ಶಾಂತಮುನಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯ ಮತ್ತು ಶಿಕ್ಷಕ ದಿನಾಚಾರಣೆ ಅತ್ಯಂತ ಮುಖ್ಯ. ಒಂದು ವ್ಯಕ್ತಿಯ ಆರೋಗ್ಯ ಕಾಪಾಡಿದರೆ ಮತ್ತೊಂದು ದೇಶದ ಆರೋಗ್ಯ ಮತ್ತು ಬಲಿಷ್ಟತೆಯನ್ನು ಹೆಚ್ಚು ಮಾಡುವ ಜವಾಬ್ದಾರಿ ಹೊತ್ತಿಕೊಂಡಿದೆ ಎಂದು ಶಿವಗಂಗೆ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ಸ್ವಾಮೀಜಿ ಹೇಳಿದರು. ಕುದೂರಿನಲ್ಲಿ ಶಿಕ್ಷಕರ ಸಮ್ಮೇಳನದಲ್ಲಿ ಮಾತನಾಡಿದರು.

-ಶಿಕ್ಷಕರನ್ನು ಗೌರವಿಸಿ । ಶಿವಗಂಗೆ ಮೇಲಣಗವಿ ಮಠದ ಶ್ರೀ ಕನ್ನಡಪ್ರಭ ವಾರ್ತೆ ಕುದೂರು

ವೈದ್ಯ ಮತ್ತು ಶಿಕ್ಷಕ ದಿನಾಚಾರಣೆ ಅತ್ಯಂತ ಮುಖ್ಯ. ಒಂದು ವ್ಯಕ್ತಿಯ ಆರೋಗ್ಯ ಕಾಪಾಡಿದರೆ ಮತ್ತೊಂದು ದೇಶದ ಆರೋಗ್ಯ ಮತ್ತು ಬಲಿಷ್ಟತೆಯನ್ನು ಹೆಚ್ಚು ಮಾಡುವ ಜವಾಬ್ದಾರಿ ಹೊತ್ತಿಕೊಂಡಿದೆ ಎಂದು ಶಿವಗಂಗೆ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ಸ್ವಾಮೀಜಿ ಹೇಳಿದರು.

ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಚಿಕ್ಕಹಳ್ಳಿ ಗ್ರಾಪಂಯಿಂದ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಭಯ ಮತ್ತು ಭಕ್ತಿ ಇದ್ದಾಗ ತಪ್ಪುಗಳಾಗುವುದಿಲ್ಲ. ಹಿಂದಿನ ಕಾಲದಲ್ಲಿ ಶಿಕ್ಷೆ ನೀಡಿ ಶಿಕ್ಷಣ ಕಲಿಸಲಾಗುತ್ತಿತ್ತು. ಇದರಿಂದ ಸಮಾಜ ಕಂಟಕ ಕೆಲಸಗಳು ಕಡಿಮೆ ಇರುತ್ತಿದ್ದವು. ಆದರೆ ಶಿಕ್ಷೆ ನೀಡದೆ ಶಿಕ್ಷಣ ಕಲಿಸುವುದು ಸವಾಲಿನ ಕೆಲಸ. ಶಿಕ್ಷೆ ಇಲ್ಲದ ಸಮಾಜದಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಗಮನಿಸಬಹುದಾಗಿದೆ ಎಂದು ತಿಳಿಸಿದರು.ಮಕ್ಕಳು ಹೆಚ್ಚು ಅಂಕ ಪಡೆದು ಪಾಸಾದರೆ ಪ್ರತಿಭಾ ಪುರಸ್ಕಾರ ಅಂತ ಮಕ್ಕಳನ್ನು ಸನ್ಮಾನಿಸುತ್ತಾರೆ. ಆದರೆ ಕಡಿಮೆ ಅಂಕ ಪಡೆದರೆ ಶಿಕ್ಷಕರನ್ನು ದಂಡಿಸುತ್ತಾರೆ. ಇಂತಹ ವಿಚಿತ್ರ ವಾತಾವರಣದ ನಡುವೆ ಚಿಕ್ಕಹಳ್ಳಿ ಗ್ರಾಪಂಯಿಂದ ಶಿಕ್ಷಕರನ್ನು ಅಭಿಮಾನದಿಂದ ಗುರುತಿಸುವ ಕೆಲಸವಾಗುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.ಬಿಇಒ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕ ವೃತ್ತಿ ಮೊದಲ ಸ್ಥಾನದಲ್ಲಿತ್ತು. ಈಗ ಏಳನೇ ಸ್ಥಾನಕ್ಕೋಗಿದೆ. ಮೊದಲನೇ ಸ್ಥಾನದಲ್ಲಿದ್ದ ಶಿಕ್ಷಕ ಸ್ಥಾನ ಏಳನೇ ಸ್ಥಾನಕ್ಕೆ ಹೋಗಲು ಕಾರಣ ಶಿಕ್ಷಕರಲ್ಲಿನ ಅವಗುಣಗಳು. ಇದು ಎಲ್ಲಾ ಶಿಕ್ಷಕರಿಗೆ ಅನ್ವಯವಾಗದಿದ್ದರೂ ಬಹುಪಾಲು ತಮ್ಮ ಸ್ಥಾನಮಹಿಮೆಯನ್ನು ಮರೆತಂತಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತನ್ನು ಹೆಚ್ಚು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಗ್ರಾಪಂ ಸದಸ್ಯ ಹೊನ್ನಾಪುರ ಶಿವಪ್ರಸಾದ್ ಮಾತನಾಡಿ, ಗುರುಗಳ ಆಶೀರ್ವಾದವಿಲ್ಲದೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರುಗಳರೆಲ್ಲರನ್ನು ಸನ್ಮಾನಿಸುವ ಕೆಲಸದ ಮಾಡಲಾಗಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷ ಶ್ರೀನಿವಾಸಮೂರ್ತಿ, ಗಂಗಾಧರ್, ಕಸಾಪ ಅಧ್ಯಕ್ಷ ಪದ್ಮನಾಭ್, ಉಪಾಧ್ಯಕ್ಷೆ ಶಾರದಮ್ಮ ಕೃಷ್ಣಮೂರ್ತಿ, ಸದಸ್ಯ ಶಿವಪ್ರಸಾದ್, ಮುನಿರಾಜ್, ನರಸಿಂಹಮೂರ್ತಿ, ಜಯಮ್ಮ, ಚಿಕ್ಕಬೋರಯ್ಯ, ಪುಷ್ಪ, ಯಾಸ್ಮೀನ್ ಭಾನು, ನೂರ್ ಜಹಾನ್, ಮಸ್ತಾಪ್, ಜಯಮ್ಮ, ಲಕ್ಷ್ನಣ, ಪಿಡಿಒ ಶೀನಿವಾಸ್, ಸಿಆರ್ ಪಿ ಜಯಲಕ್ಷ್ಮಿ, ಸಿಇಒ ಅಶೋಕ್ , ಕಾರ್ಯದರ್ಶಿ ರವಿಕುಮಾರ್ ಇದ್ದರು.