ಸಹಕಾರ ರಂಗದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ವಿಶಿಷ್ಟ ರೀತಿಯ ಸೇವೆ ನೀಡುತ್ತಿರುವ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯಕ್ಕೆ ಮಾದರಿ ಸಹಕಾರಿ ಸಂಘವಾಗಿದ್ದು, ಇದರ ಕಾರ್ಯಚಟುವಟಿಕೆಗಳ ಅಧ್ಯಯನ ನಡೆಸಲು ಕೇರಳ ರಾಜ್ಯದ ಕೃಷಿ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರತಿನಿಧಿಗಳ ತಂಡದ ೪೫ ಮಂದಿ ಅಕ್ಟೋಬರ್ ೮ ಗುರುವಾರದಂದು ಸಂಘದ ಕಿಲ್ಲೂರು ಹಾಗೂ ಕಡಿರುದ್ಯಾವರ ಶಾಖೆಗೆ ಭೇಟಿ ನೀಡಿತು.
ಬೆಳ್ತಂಗಡಿ : ಸಹಕಾರ ರಂಗದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ವಿಶಿಷ್ಟ ರೀತಿಯ ಸೇವೆ ನೀಡುತ್ತಿರುವ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯಕ್ಕೆ ಮಾದರಿ ಸಹಕಾರಿ ಸಂಘವಾಗಿದ್ದು, ಇದರ ಕಾರ್ಯಚಟುವಟಿಕೆಗಳ ಅಧ್ಯಯನ ನಡೆಸಲು ಕೇರಳ ರಾಜ್ಯದ ಕೃಷಿ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರತಿನಿಧಿಗಳ ತಂಡದ ೪೫ ಮಂದಿ ಅಕ್ಟೋಬರ್ ೮ ಗುರುವಾರದಂದು ಸಂಘದ ಕಿಲ್ಲೂರು ಹಾಗೂ ಕಡಿರುದ್ಯಾವರ ಶಾಖೆಗೆ ಭೇಟಿ ನೀಡಿತು.ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಅತೀ ಹೆಚ್ಚು ನವೋದಯ ಸ್ವ-ಸಹಾಯ ಗುಂಪುಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಸಂಘದ ಮೂಲಕ ಸ್ವ-ಸಹಾಯ ಗುಂಪುಗಳಿಗೆ ಸ್ವ-ಉದ್ಯೋಗಕ್ಕೆ ಸಾಲವನ್ನು ನೀಡಲಾಗುತ್ತಿದೆ. ವನಶ್ರೀ ನವೋದಯ ಸ್ವ-ಸಹಾಯ ಗುಂಪು ಕೋಡಿ ಇದರ ಸದಸ್ಯರು ಸ್ವ- ಉದ್ಯೋಗಕ್ಕೆ ಸಾಲ ಪಡೆದು ಡ್ರಾಗನ್ ಪ್ರೂಟ್ ಮಾಡಿರುವ ಮಾದರಿ ರೈತರು ಸಂಘದ ಸದಸ್ಯರಾದ ಮಿತ್ತಬಾಗಿಲು ಗ್ರಾಮದ ರವಿಚಂದ್ರ ಗೌಡ ಇವರ ತೋಟವನ್ನು ಅದ್ಯಯನ ತಂಡವು ವೀಕ್ಷಣೆ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಶ್ರೀ ರಾಮ ನವೋದಯ ಕುಕ್ಕುದಡಿ ಕಡಿರುದ್ಯಾವರ ಇದರ ಸದಸ್ಯರಾದ ಶ್ರೀ ಪ್ರಶಾಂತ್ ಗೌಡ ಹಾಗೂ ಸಂತೋಷ್ ಗೌಡ ಇವರು ಗುಂಪಿನ ಮೂಲಕ ಸಾಲ ಪಡೆದು ಶಾಮಿಯಾನದ ಉದ್ಯಮವನ್ನು ನಡೆಸುತ್ತಿರುವ ಕುರಿತಂತೆ ಉಪಯುಕ್ತ ಮಾಹಿತಿಯನ್ನು ತಂಡವು ಪಡೆಯಿತು.ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೀರ್ತಿ ನವೋದಯ ಗುಂಪು ಕೊಂದೊಡಿ,ಶ್ರೀ ಗುರು ನವೋದಯ ಗುಂಪು ಕಿನ್ಯಡ್ಕ,ಶ್ರೀ ರಾಮ ನವೋದಯ ಕುಕ್ಕುದಡಿ, ನವರತ್ನ ನವೋದಯ ಸ್ವ-ಸಹಾಯ ಗುಂಪು ಗುಂಡಿರು ಇದರ ಗುಂಪಿನ ಸದಸ್ಯರೊಂದಿಗೆ ಸಂವಾದ ನಡೆಸಿ,ಗುಂಪಿನ ಕಾರ್ಯನಿರ್ವಹಣೆ ಮತ್ತು ಸಾಲ ವಿತರಣೆಯ ಬಗ್ಗೆ ನವೋದಯ ಸ್ವ-ಸಹಾಯ ಗುಂಪಿನ ಮೇಲ್ವೀಚಾರಕಾರದ ಶ್ರೀಮತಿ ಸುಮಿತ್ರ ಇವರಿಂದ ಮಾಹಿತಿಯನ್ನು ಪಡೆಯಿತು.
ಸ್ವ-ಉದ್ಯೋಗದ ಮೂಲಕ ಮಾದರಿಯಾಗಿ, ೧೦೦೦೦ ಕೋಳಿ ಸಾಕಾಣಿಕೆ ಮಾಡುತ್ತಿರುವ ಇಂದಬೆಟ್ಟು ಗ್ರಾಮದ ಪರಾರಿ ಪ್ರಕಾಶ್ ಇವರ ಉದ್ಯಮವನ್ನು ಕೇರಳದ ಕೃಷಿ ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರತಿನಿಧಿಗಳ ತಂಡವು ಬೇಟಿ ನೀಡಿ ವಿಶೇಷ ಅನುಭವನ್ನು ಪಡಕೊಂಡಿತ್ತು.ಬರ್ಡ್ ಸಂಸ್ಥೆಯ ಡಿ.ಜಿ.ಎಂ. ಪ್ರೀತಿ ತೋಮಸ್, ಸತೀಶ್ ಹಾಗೂ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಉಪಾಧ್ಯಕ್ಷ ಆನಂದ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್, ಮೇಲ್ವಿಚಾರಕಿ ಸುಮಿತ್ರ, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.