ಸಾರಾಂಶ
ತಮ್ಮ ಸೊಸೆಯ ಜೊತೆ ಅವರ ಊರಾದ ತಾಲೂಕಿನ ಬಸಾಪುರದಲ್ಲಿ ಉಳಿದುಕೊಂಡಿದ್ದ ತಮ್ಮ ಪುತ್ರ ಕಳೆದ ಏಳು ತಿಂಗಳಿಂದ ನಾಪತ್ತೆಯಾಗಿದ್ದು, ಸೊಸೆಯೇ ತಮ್ಮ ಪುತ್ರನನ್ನು (ತನ್ನ ಗಂಡ) ಹತ್ಯೆ ಮಾಡಿದ್ದಾಳೆ ಎಂದು ಗದಗ- ಬೆಟಗೇರಿಯ ಶಂಕ್ರಪ್ಪ- ಮಾರೆವ್ವ ದಂಪತಿಗಳು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೊಪ್ಪಳ: ತಮ್ಮ ಸೊಸೆಯ ಜೊತೆ ಅವರ ಊರಾದ ತಾಲೂಕಿನ ಬಸಾಪುರದಲ್ಲಿ ಉಳಿದುಕೊಂಡಿದ್ದ ತಮ್ಮ ಪುತ್ರ ಕಳೆದ ಏಳು ತಿಂಗಳಿಂದ ನಾಪತ್ತೆಯಾಗಿದ್ದು, ಸೊಸೆಯೇ ತಮ್ಮ ಪುತ್ರನನ್ನು (ತನ್ನ ಗಂಡ) ಹತ್ಯೆ ಮಾಡಿದ್ದಾಳೆ ಎಂದು ಗದಗ- ಬೆಟಗೇರಿಯ ಶಂಕ್ರಪ್ಪ- ಮಾರೆವ್ವ ದಂಪತಿಗಳು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ತಮ್ಮ ಪುತ್ರ ಆಂಜನೇಯ ಹಂದಿಜೋಗಿ ಎಂಬಾತ ತಾಲೂಕಿನ ಬಸಾಪುರದ ಗೌರಮ್ಮ ಎಂಬುವವರನ್ನು ಎರಡನೇ ಮದುವೆಯಾಗಿ, ಆಕೆಯ ಊರು ಬಸಾಪುರದಲ್ಲಿದ್ದ. ಕಳೆದ ಏಳು ತಿಂಗಳಿಂದ ಪತ್ತೆ ಇಲ್ಲ. ಸಂಪರ್ಕಕ್ಕೂ ಸಿಕ್ಕಿಲ್ಲ. ಆಂಜನೇಯನನ್ನು ಆತನ ಪತ್ನಿಯೇ ಹತ್ಯೆ ಮಾಡಿದ್ದಾಳೆ ಎಂಬ ಶಂಕೆ ಇದೆ ಎಂದು ಆರೋಪಿಸಿದರು. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಪಾದಿಸಿದ ಅವರು, ಮಗನನ್ನು ಹುಡುಕಿಕೊಡಿ ಎಂದು ಎಸ್ಪಿಗೆ ಮನವಿ ಸಲ್ಲಿಸಿ ಕಣ್ಣೀರು ಹಾಕಿದರು.