ಸಾರಾಂಶ
ಕನ್ನಡಪ್ರಭವಾರ್ತೆ ಕಲಬುರಗಿ
ಎಟಿಎಂ ಯಂತ್ರಗಳ ಸುವ್ಯವಸ್ಥೆ ನಿರ್ವಹಿಸುವಲ್ಲಿ ಬ್ಯಾಂಕ್‌ಗಳ ನಿರ್ಲಕ್ಷ್ಯೆ ಎದ್ದು ತೋರುತ್ತಿದೆ. ಜಿಲ್ಲಾದ್ಯಂತ ಎಟಿಎಂ ಬಳಸುವ ಗ್ರಾಹಕರು ಕಂಗಾಲಾಗಿದ್ದಾರೆ. ಹಲವು ಬ್ಯಾಂಕ್‌ಗಳ ಎಟಿಎಂಗಳಲ್ಲಿ ಸುರಕ್ಷತೆಯೇ ಲೋಪ, ಸಿಸಿಟಿವಿ ಕ್ಯಾಮೆರಾ, ಸೈರನ್ ಇತ್ಯಾದಿ ದುರಸ್ತಿಯಲ್ಲಿವೆ.ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಇರುವ 315 ಬ್ಯಾಂಕ್ ಶಾಖೆಗಳವರು 450 ಎಟಿಎಂ ಕೇಂದ್ರ ಹೊಂದಿದ್ದಾರೆ. ಈ ಪೈಕಿ 239 ಎಟಿಎಂಗಳ ಹಣೆಗಾರಿಕೆ ಆಯಾ ಬ್ಯಾಂಕ್‌ನವರು ನಿಬಾಯಿಸಿದರೆ, ಉಳಿದ ಎಟಿಎಂಗಳ ಜವಾಬ್ದಾರಿ ಹೊರಗುತ್ತಿಗೆ ನೀಡಲಾಗಿದೆ. 40 ಎಟಿಎಂಗಳಿಗೆ ಮಾತ್ರ ಭದ್ರತಾ ಸಿಬ್ಬಂದಿ ಇದ್ದಾರೆ. ಉಳಿದಂತೆ ಯಾವ ಎಟಿಎಂಗಳಿಗೂ ಕಾವಲುಗಾರರಿಲ್ಲ.
ರಿಂಗ್ ರಸ್ತೆಗಳಲ್ಲಿರೋ ಎಟಿಎಂಗಳಲ್ಲಂತೂ ಕಸದ ರಾಶಿಯೇ ಬಿದ್ದರೂ ಕೇಳುವವರೆ ಇಲ್ಲ.ಎಟಿಎಂಗಳ ನಿರ್ವಹಣೆಯಲ್ಲಿ ಮುಗ್ಗರಿಸಿರುವ ಬ್ಯಾಂಕ್‌ಗಳ ಆಡಳತದಿಂದಾಗಿಯೇ ನಗರದಲ್ಲಿ ಎಟಿಎಂ ನಿಂದ 18 ಲಕ್ಷ ರು. ದೋಚಲಾಗಿತ್ತು. 3 ಬಾರಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿಯೂ ಎಟಿಎಂ ದರೋಡೆ ಯತ್ನ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
....ಕೋಟ್....ಎಟಿಎಂಗಳ ನಿರ್ವಹಣೆಯಲ್ಲಿ ಬ್ಯಾಂಕ್‌ಗಳ ನಿರ್ಲಕ್ಷ್ಯವನ್ನು ಗ್ರಾಹಕರು ಗಮನಕ್ಕೂ ತಂದಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳಲು ಹಳಿದ್ದೇವೆ. ಅವರಿಂದ ಅನುಪಾಲನಾ ವರದಿ ತರಿಸಿಕೊಳ್ಳುತ್ತೇವೆ. ಸಿಸಿಟಿವಿ, ಕ್ಯಾಮೆರಾ, ಅಲಾರಾಮ್ ವ್ಯವಸ್ಥೆಗಳು ಇರಬೇಕು ಎಂಬುದು ಕಾಲಕಾಲಕ್ಕೆ ಪರಿಶೀಲಿಸುವ ಕೆಲಸವಾಗಬೇಕೆಂದು ಸೂಚಿಸಿದ್ದೇವೆ.
-ಡಾ. ಶರಣಪ್ಪ ಢಗೆ, ಪೊಲೀಸ್ ಆಯುಕ್ತರು, ಕಲಬುರಗಿ------------
ಫೋಟೋ- ಎಟಿಎಂ 1ಎಸ್ಬಿಐ ಎಟಿಎಂ ನೋಟ, ಪೂಜಾರಿ ಚೌಕ್, ರಿಂಗ್ ರಸ್ತೆ--
ಫೋಟೋ- ಎಟಿಎಂ 2 ಮತ್ತು ಎಟಿಎಂ 3ಕಲಬುರಗಿಯಲ್ಲಿರುವ ಪೂಜಾರಿ ಚೌಕ್‌ನಲ್ಲಿನ ಎಸ್ಬಿಐ ಬ್ಯಾಂಕ್‌ಗೆ ಸೇರಿದ್ದ ಎಟಿಎಂ ಏ. 9 ರಂದು ಕಳವಾದಾಗ ಆಯುಕ್ತ ಡಾ. ಶರಣಪ್ಪ ಭೇಟಿ ನೀಡಿ ಅಲ್ಲಿ ಪರಿಶೀಲಿಸಿದ ನೋಟಗಳು. (ಸಂಗ್ರಹ ಚಿತ್ರ)