ತಾಂತ್ರಿಕ ಪರೀಕ್ಷೆ: ಶ್ರೀನಿವಾಸ ವಿದ್ಯಾಲಯಕ್ಕೆ 6 ರ‍್ಯಾಂಕ್

| Published : Jul 19 2024, 12:55 AM IST

ಸಾರಾಂಶ

ಇವರೆಲ್ಲರೂ ಭವಿಷ್ಯದಲ್ಲಿ ಉತ್ತಮ ಮರೈನ್ ಎಂಜಿನಿಯರ್ ಆಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾಂ ನಡೆಸಿದ ೨೦೨೩-೨೦೨೪ನೇ ಸಾಲಿನ ತಾಂತ್ರಿಕ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ೬ ವಿದ್ಯಾರ್ಥಿಗಳು ವಿವಿಧ ವಿಭಾಗಳಲ್ಲಿ ರ‍್ಯಾಂಕ್‌ ಗಳಿಸಿದ್ದಾರೆ. ಅಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ನರೇಶ್ ಚೌಧರಿ ಒಟ್ಟು ೮.೯೪ ಸಿಜಿಪಿಎ ಅಂಕ ಗಳಿಸುವುದರ ಮೂಲಕ ಪ್ರಥಮ ರ‍್ಯಾಂಕ್ ಮತ್ತು ವಿಟಿಯುನ ಚಿನ್ನದ ಪದಕವನ್ನು ಪಡೆದಿರುತ್ತಾರೆ.

ಮರೈನ್ ಎಂಜಿನಿಯರಿಂಗ್ ವಿಭಾಗದಲ್ಲಿ ೮.೫೬ ಸಿಜಿಪಿಎ ಅಂಕಗಳ ಗಳಿಸಿದ ನಿತ್ಯಾ ಎಂ.ಆರ್, ೨ನೇ ರ‍್ಯಾಂಕ್, ೮.೫೫ ಸಿಜಿಪಿಎ ಅಂಕಗಳ ಮೂಲಕ ರಾಹುಲ್ ಎಂ. ೩ನೇ ರ‍್ಯಾಂಕ್, ೮.೪೭ ಸಿಜಿಪಿಎ ಮೂಲಕ ಸಿದ್ಧಾರ್ಥ್ ಟಿ, ೪ನೇ ರ‍್ಯಾಂಕ್, ೮.೪೫ ಸಿಜಿಪಿಎ ಮೂಲಕ ಜ್ಞಾನೇಶ್ ಕೆ, ೫ನೇ ರ‍್ಯಾಂಕ್ ಹಾಗೂ ೮.೩೫ ಸಿಜಿಪಿಎ ಮೂಲಕ ಹೃಷಿಕೇಶ್ ಡಿ. ೭ನೇ ರ‍್ಯಾಂಕ್ ಗಳಿಸಿರುತ್ತಾರೆ.

ಇವರೆಲ್ಲರೂ ಭವಿಷ್ಯದಲ್ಲಿ ಉತ್ತಮ ಮರೈನ್ ಎಂಜಿನಿಯರ್ ಆಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾರೆ.ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಎ. ಶ್ಯಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ. ರಾಘವೇಂದ್ರ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಮತ್ತು ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ ರಾವ್, ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ಮಯ್ಯ ಡಿ., ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

------------------