ಹದಿ ಹರೆಯದ ಮಕ್ಕಳ ಮನಸ್ಥಿತಿ ಅತೀ ಸೂಕ್ಷ್ಮ

| Published : Aug 22 2024, 12:59 AM IST

ಸಾರಾಂಶ

ಪೋಷಕರು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸಬೇಕು. ಪ್ರೀತಿಯಿಂದ ಅವರೊಡನೆ ವ್ಯವಹರಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಡಿ. ಗೀತಾ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಪೋಷಕರು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸಬೇಕು. ಪ್ರೀತಿಯಿಂದ ಅವರೊಡನೆ ವ್ಯವಹರಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಡಿ. ಗೀತಾ ಹೇಳಿದರು. ಬುಧವಾರ ಭೀಮಸಮಯದ್ರ ಗ್ರಾಮದ ಹಾಲಮ್ಮ ಮಲ್ಲಿಕಾರ್ಜುನಪ್ಪ ಸಮುದಾಯ ಭವನದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಂಯುಕ್ತ ಆಶ್ರಯದಲ್ಲಿ ಮಿಷನ್ ಶಕ್ತಿ ಯೋಜನೆಯ 100 ದಿನಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹದಿಹರೆಯದ ಮಕ್ಕಳ ಭಾವನಾತ್ಮಕ ಮನಸ್ಥಿತಿ ಸೂಕ್ಷ್ಮವಾಗಿರುತ್ತದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಕುಟುಂಬದಲ್ಲಿನ ವಿಘಟನೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಕಡೆ ಗಮನಹರಿಸದಿದ್ದರೆ ಅವರು ದುಶ್ಚಟಗಳ ದಾಸರಾಗಬಹುದು. ಪ್ರೀತಿ ಪ್ರೇಮ ಎಂಬ ಮೋಹಕ್ಕೆ ಒಳಗಾಗಬಹುದು. ಇದರಿಂದ ವಯಸ್ಕರಾಗುವ ಮುನ್ನವೇ ಬಾಲ್ಯ ವಿವಾಹ ಹಾಗೂ ಬಾಲ ತಾಯಂದಿರರಾಗುವ ಪರಿಸ್ಥಿತಿ ಎದುರಾಗುತ್ತದೆ. ಪೋಷಕರ ಮೇಲೆ ಮಕ್ಕಳಿಗೆ ನಂಬಿಕೆ ಇಲ್ಲದೇ ಹೋದರೆ ಅಥವಾ ಭಯದ ಮನೋಭಾವ ಇದ್ದರೆ ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಸಹ ಹೇಳಿಕೊಳ್ಳದೇ ಹೋಗಬಹುದು. ಆದ್ದರಿಂದ ಪೋಷಕು ಹೆಚ್ಚು ಜವಬ್ದಾರಿಯಿಂದ ವರ್ತಿಸಬೇಕು ಎಂದು ಡಿ. ಗೀತಾ ಹೇಳಿದರು.ಇದೇ ವೇಳೆ ಬಾಲ್ಯವಿವಾಹ, ಬಾಲತಾಯಂದಿರು ಹಾಗೂ ಮಕ್ಕಳ ಮೇಲಿನ ದೌರ್ಜನ ಪ್ರಕರಣಗಳು ಕಂಡುಬಂದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ತಿಳಿಸಬೇಕು. ಮಹಿಳೆಯರ ಮತ್ತು ಮಕ್ಕಳ ಮಾರಾಟ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿ, ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹ ಕೈಜೋಡಿಸಬೇಕು. ಮಹಿಳೆಯರ ಮೇಲಿನ ದೌರ್ಜನ ತಡೆಯಲು ಸಹಾಯವಾಣಿ ಸಂಖ್ಯೆ 181 ಈ ನಂಬರಿಗೆ ಕರೆ ಮಾಡಬಹುದು. ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದರು.ವಲಯ ಮೇಲ್ವಿಚಾರಕಿ ರಂಜಿನಿ ಸಂಪತ್, ಒಕ್ಕೂಟದ ಅಧ್ಯಕ್ಷೆ ಉಷಾ, ಮಿಷನ್ ಶಕ್ತಿ ಸಂಯೋಜಕ ವಿನಯ್ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.