ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸನಗರ / ಸೊರಬ
ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಜನಮೆಚ್ಚುಗೆಗೆ ಪಾತ್ರರಾಗಿದ್ದ ಗ್ರಾಮ ಆಡಳಿತಾಧಿಕಾರಿಗೆ ನಿವೃತ್ತಿ ದಿನ ತಹಶೀಲ್ದಾರ್ ಅವರು ವಿಶಿಷ್ಟ ಗೌರವ ಸಲ್ಲಿಸಿದ್ದಾರೆ. ಹೊಸನಗರ ತಹಶೀಲ್ದಾರ್ ಅವರು ತಮ್ಮ ವಾಹನದಲ್ಲಿಯೇ ಮನೆಗೆ ಕರೆದೊಯ್ಯುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಸರ್ಕಾರಿ ನೌಕರಿಯಲ್ಲಿ ವಯೋನಿವೃತ್ತಿಯಾದವರಿಗೆ ಸನ್ಮಾನ ಮಾಡಿ ಮನೆಗೆ ಕಳುಹಿಸುವುದು ಸಾಮಾನ್ಯ. ಆದರೆ, ಹೊಸ ನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ತಮ್ಮ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಯೊಬ್ಬರೂ ನಿವೃತ್ತಿ ಯಾದ ಹಿನ್ನೆಲೆಯಲ್ಲಿ ಅವರನ್ನು ತಮ್ಮ ವಾಹನದಲ್ಲಿ ಅವರ ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
ಸೇವೆಗೆ ಸಿಕ್ಕ ಗೌರವ:ಹೊಸನಗರ ತಾಲೂಕು ಕಂದಾಯ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಎಸ್.ವಿ.ಸದಾಶಿವಪ್ಪ ಅವರು ಶನಿವಾರ (ಆ.31) ವಯೋನಿವೃತ್ತಿ ಹೊಂದಿದರು. ಅವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮವಾದ ಕೆಲಸ ಮಾಡಿದ್ದರು.
ಸದಾಶಿವಪ್ಪ ಅವರಿಗೆ ಶನಿವಾರ ಹೊಸನಗರ ಕಂದಾಯ ಇಲಾಖೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾ ಯಿತು. ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿ ದ್ದರು. ಕಾರ್ಯಕ್ರಮದ ನಂತರ ತಹಶೀಲ್ದಾರ್ ಅವರು ತಾವು ತಾಲೂಕು ಆಡಳಿತಾಧಿಕಾರಿ ಆಗಿದ್ದರೂ ತಮ್ಮ ವಾಹನದಲ್ಲಿ ಸದಾಶಿವಪ್ಪರನ್ನು ಇಲಾಖೆಯ ವಾಹನದಲ್ಲಿ ಕೂರಿಸಿಕೊಂಡು ಅವರ ಮನೆಗೆ ತಾವೇ ಡ್ರೈವ್ ಮಾಡಿಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.ಪಾವಿತ್ರ್ಯತೆ ಕಾಯ್ದುಕೊಂಡ ಶಿಕ್ಷಕ ಸದಾ ಸ್ಮರಣೀಯ: ತಹಸೀಲ್ದಾರ್ಸೊರಬ: ಮಕ್ಕಳ ಭವಿಷ್ಯದ ಬದುಕಿಗೆ ದಾರಿ ದೇವಿಗೆಯಾಗುವ ಶಿಕ್ಷಕರು ವೃತ್ತಿ ಪಾವಿತ್ರ್ಯತೆಯನ್ನು ಕಾಯ್ದುಕೊಂಡಾಗ ಸಮಾಜದಲ್ಲಿ ಸದಾ ಸ್ಮರಣೀಯರು ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ನುಡಿದರು.ಶನಿವಾರ ಪಟ್ಟಣದ ಗುರುಭವನದಲ್ಲಿ ಶ್ರೀ ರಂಗನಾಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕ ಸಿ.ಪಿ.ಈಶ್ವರಪ್ಪ ಅವರಿಗೆ ತಾಲೂಕಿನ ಶಿಕ್ಷಕ ವೃಂದ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಪಿ.ಈಶ್ವರಪ್ಪ, ಕಷ್ಟದ ದಿನಗಳನ್ನು ಎದುರಿಸಿ ಬೆಳೆದ ನನಗೆ ಕುಟುಂಬ, ಶಾಲಾ ಆಡಳಿತ ಸಮಿತಿ ಹಾಗೂ ಸಮಾಜ ಸದಾ ಪ್ರೋತ್ಸಾಹಿಸುತ್ತ ಬಂದಿದೆ ಎಂದರು.
ಶಾಲಾ ಆಡಳಿತ ಸಮಿತಿ ಕಾನೂನು ಸಲಹೆಗಾರ ಚಂದ್ರು ಬಿ.ಕರೆಮ್ಮನವರ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪಿ.ಪಿ.ವಿ.ಜಿ.ಯಳಗೇರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಎಸ್.ಎಂ.ನೀಲೇಶ್ ಮಾತನಾಡಿದರು. ಶಿಕ್ಷಕಿ ಲಲಿತಾ ಈಶ್ವರಪ್ಪ ಅವರ ಬಗ್ಗೆ ಸ್ವರಚಿತ ಕವನ ವಾಚಿಸಿದರು.ಚಂದ್ರಗುತ್ತಿ ರಂಗನಾಥ ಶಾಲೆ ಮುಖ್ಯ ಶಿಕ್ಷಕ ಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕರಾದ ಮಾಲತೇಶ್ ನಿರೂಪಿಸಿ, ಹಾಲೇಶ್ ನವುಲೆ ಸ್ವಾಗತಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಸಮಾಜ ಚಿಂತಕ ರಾಜಪ್ಪ ಮಾಸ್ತರ್, ಶಾಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಬಿ. ಶಶಿಧರ್, ಸದಸ್ಯರಾದ ನೀಲಪ್ಪ ಭೂತಣ್ಣನವರ್, ಸವಿತಾ, ಭಿಮಾನಾಯ್ಕ್, ಮುಖ್ಯ ಶಿಕ್ಷಕ ಬಿ.ಮಲ್ಲಿಕಾರ್ಜುನ, ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಕೆ.ಸಿ.ಶಿವಕುಮಾರ್, ಎನ್.ಗಣಪತಿ, ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ರೈತ ಸಂಘದ ಅಧ್ಯಕ್ಷ ಹಾಲೇಶಪ್ಪಗೌಡ, ಶಿವಪ್ಪ, ರುದ್ರಮುನಿ, ನೇತ್ರಾವತಿ, ಶೃತಿ, ಶಿಲ್ಪಾ, ಸಂದೀಪ್ ಕುಮಾರ್ ಮೊದಲಾದವರಿದ್ದರು.