ಸಾರಾಂಶ
ಚನ್ನರಾಯಪಟ್ಟಣ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವವರು ಯಾರೂ ಎಂಬುದು ಪ್ರಶ್ನೆಯಾಗಿದ್ದು ಜನರೇ ಇದಕ್ಕೆ ಉತ್ತರ ನೀಡಬೇಕು ಎಂದು ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ತಿಳಿಸಿದರು. ಪೌತಿ ಖಾತೆ ಮಾಡಲು, ಖಾತೆ ಬದಲಾವಣೆಗೆ ತಾಲೂಕು ಕಚೇರಿಯಲ್ಲಿ ನಡೆಯುವಷ್ಟು ಭ್ರಷ್ಟಚಾರ ಎಲ್ಲೂ ನಡೆಯದು. ಇಂತಹ ಕೆಟ್ಟ ಅಧಿಕಾರಿಗಳನ್ನು ಹೊರಹಾಕಲು ಪ್ರತಿಭಟನೆಗಳೇ ಉತ್ತರವಾಗಬೇಕು, ಪ್ರತಿಭಟನೆಯನ್ನು ಹಿಂಪಡೆಯದೆ ತಕ್ಕ ಶಾಸ್ತಿಯಾಗುವ ತನಕ ಪ್ರತಿಭಟನೆಯನ್ನು ಹಿಂಪಡೆಯಬೇಡಿ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವವರು ಯಾರೂ ಎಂಬುದು ಪ್ರಶ್ನೆಯಾಗಿದ್ದು ಜನರೇ ಇದಕ್ಕೆ ಉತ್ತರ ನೀಡಬೇಕು ಎಂದು ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ತಿಳಿಸಿದರು.ಅವರು ಪಟ್ಟಣದ ಮಿನಿ ವಿಧಾನಸೌಧದ ಎದುರು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ವತಿಯಿಂದ ನಾಲ್ಕನೇ ದಿನಕ್ಕೆ ತಹಸೀಲ್ದಾರ್ ಹಠಾವೋ ಚನ್ನರಾಯಪಟ್ಟಣ ಜನತೆ ಬಚಾವೋ ಆಂದೋಲನದ ಅಡಿಯಲ್ಲಿ ಆಹೋ ರಾತ್ರಿ ಧರಣಿ ಸತ್ಯಾಗ್ರಹ ಸಭೆಯಲ್ಲಿ ಮಾತನಾಡಿ, ನಾವು ಶಾಸಕರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಹುಡುಕಿ ಹುಡುಕಿ ಉತ್ತಮ ಅಧಿಕಾರಿಗಳನ್ನು ತಾಲೂಕಿಗೆ ಕರೆಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆವು. ಆದರೆ ಈಗ ಹಣ ಕೊಟ್ಟು ಅಧಿಕಾರಿಗಳು ತಾಲೂಕಿಗೆ ಬಂದು ಹಣ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಈಗಿನ ರಾಜಕಾರಣಿಗಳೇ ಕಾರಣ. ಜನರ ಕೆಲಸ ಮಾಡಲು ಭ್ರಷ್ಟ ಅಧಿಕಾರಿಗಳು ಮುಂದಾಗದೆ ಒಂದು ಜಮೀನು ಮಂಜೂರು ಮಾಡಿಸಲು, ಪೌತಿ ಖಾತೆ ಮಾಡಲು, ಖಾತೆ ಬದಲಾವಣೆಗೆ ತಾಲೂಕು ಕಚೇರಿಯಲ್ಲಿ ನಡೆಯುವಷ್ಟು ಭ್ರಷ್ಟಚಾರ ಎಲ್ಲೂ ನಡೆಯದು. ಇಂತಹ ಕೆಟ್ಟ ಅಧಿಕಾರಿಗಳನ್ನು ಹೊರಹಾಕಲು ಪ್ರತಿಭಟನೆಗಳೇ ಉತ್ತರವಾಗಬೇಕು, ಪ್ರತಿಭಟನೆಯನ್ನು ಹಿಂಪಡೆಯದೆ ತಕ್ಕ ಶಾಸ್ತಿಯಾಗುವ ತನಕ ಪ್ರತಿಭಟನೆಯನ್ನು ಹಿಂಪಡೆಯಬೇಡಿ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘಟ ಅಧ್ಯಕ್ಷ ಸಿ. ಜಿ. ರವಿ, ಸಿಐಟಿಯು ಅಧ್ಯಕ್ಷ ಮಂಜಣ್ಣ, ಬರಗೂರು ಶಂಕರ್, ತೇಜಸ್, ಮಹೇಶ್, ಮಂಜೇಗೌಡ ಜೋಗೀಪುರ, ಮಿಲ್ಟ್ರಿ ಮಂಜು, ಚಂದ್ರಹಾಸ್, ದೊರೆಕಬ್ಬಳಿ, ಉತ್ತೇನಹಳ್ಳಿ ಚಂದ್ರು, ರಮೇಶ್ ಉಳ್ಳಾವಳ್ಳಿ, ಶಂಕರ ಲಿಂಗೇಗೌಡ, ಲೋಕೇಶ್ ಮಡಬ, ಗುಲಸಿಂದ ಮಹೇಶ್, ನಂದ ಅರಳಾಪುರ ಮತ್ತಿತರಿದ್ದರು.