ಸಾರಾಂಶ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರು ಗುಲಾಬಿ ಹೂವು ನೀಡುವ ಮೂಲಕ ಶುಭಕೋರಿದರು.ಈ ವೇಳೆ ಮಾತನಾಡಿದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯು ಪ್ರೌಢಶಾಲಾ ಹಂತದ ಮಕ್ಕಳಿಗೆ ಪ್ರಮುಖವಾದ ಪರೀಕ್ಷೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಲು ಸಿದ್ದರಾಗಬೇಕು. ಉತ್ತಮವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಯಾವುದೆ ಪರೀಕ್ಷಾ ಭಯ ಕಾಡುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆ ಬರೆಯುವ ವಿಶ್ವಾಸ ನಮ್ಮದಾಗಿದೆ.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 6 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 1618 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಅದರಲ್ಲಿ 15 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 1603 ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಈ ವೇಳೆ ತಾಪಂ ಇಒ ಕೃಷ್ಣಪ್ಪ ಧರ್ಮರ. ಬಿಆರ್‌ಸಿ ಈಶ್ವರ ಮೆಡ್ಲೇರಿ. ಬಿ.ಎಂ. ಯರಗುಪ್ಪಿ. ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ ಸೇರಿದಂತೆ ಅನೇಕರು ಇದ್ದರು.
ಪರೀಕ್ಷಾ ಕೇಂದ್ರಕ್ಕೆ ಮಾಜಿ ಸೈನಿಕರಿಂದ ಬಿಗಿ ಬಂದೋಬಸ್ತ್ಕನ್ನಡಪ್ರಭ ವಾರ್ತೆ ಗದಗ
ಜಿಲ್ಲಾದ್ಯಂತ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎಂದು ಪರೀಕ್ಷಾ ಕೇಂದ್ರಗಳಿಗೆ ಪೊಲೀಸರೊಂದಿಗೆ ಮಾಜಿ ಸೈನಿಕರ ಸಂಘದಿಂದಲೂ ಬಂದೋಬಸ್ತ್ ಒದಗಿಸಲಾಗಿತ್ತು.ಜಿಲ್ಲೆಯ ರೋಣ ತಾಲೂಕು ಬೆಳವಣಿಕಿ ಗ್ರಾಮದ ಶ್ರೀವೀರಭದ್ರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿರ್ದೇಶಕ ಪ್ರಕಾಶ್ ಹಕ್ಕಾಪಕ್ಕಿ ಅವರ ವಿಶೇಷ ಕೋರಿಕೆಯ ಮೇರೆಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ನೇತೃತ್ವದಲ್ಲಿ ಕಾಲೇಜಿನ ಆವರಣದ ಸುತ್ತುಮುತ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ರೋಣ ಪೊಲೀಸ್ ಠಾಣೆಯ ಪಿಎಸ್‌ಐ ಜೂಲಕಟ್ಟಿ ಅವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾಲೇಜಿಗೆ ಆಗಮಿಸಿ ಮಾಜಿ ಸೈನಿಕರ ಶಿಸ್ತು ಮತ್ತು ಬಿಗಿ ಬಂದೋಬಸ್ತ್‌ನ್ನು ನೋಡಿ ಕೃತಜ್ಞತೆಗಳನ್ನು ಸಲ್ಲಿಸಿದರು.ಬೆಳವಣಿಕಿ ಗ್ರಾಪಂ ಅಧ್ಯಕ್ಷರು ಮತ್ತು ಸಿಬ್ಬಂದಿ ಹಾಗೂ ಕಾಲೇಜಿನ ಆಡಳಿತ ಮಂಡಳಿ, ಪಪೂ ಕಾಲೇಜಿನ ನಿರ್ದೇಶಕ ಪ್ರಕಾಶ್ ಹಕ್ಕಾಪಕ್ಕಿ, ಕಾರ್ಯದರ್ಶಿ ಶಿರೋಳ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಲ್ಲಪೂರ ಮಾಜಿ ಸೈನಿಕರಾದ ರೇಣುಕಗೌಡ ದಾನಪ್ಪಗೌಡ್ರ, ಕಳಕಪ್ಪ ಗಾರವಾಡ, ಚನ್ನಪ್ಪ ಬಾವಿ, ಶಶಿಧರ ವಕ್ಕರ್, ಮುತ್ತಪ್ಪ ಹಡಪದ, ಚಂದ್ರಶೇಖರಪ್ಪ ಬಿಳೆಯಲಿ, ಮುತ್ತಪ್ಪ ಹೊಸಮನಿ, ಸಂಗಪ್ಪ ತಳವಾರ, ಚೆನ್ನಪ್ಪ ಹೊಸಮನಿ ಸೇರಿದಂತೆ ಹಲವು ಮಾಜಿ ಸೈನಿಕರು ಇದ್ದರು.