ಕನ್ನಡ ಸಾಹಿತ್ಯಕ್ಕೆ ತೇಜಸ್ವಿ ಕೊಡುಗೆ ಅಪಾರ

| Published : Sep 15 2025, 01:00 AM IST

ಸಾರಾಂಶ

ತೇಜಸ್ವಿ ಅವರು ತಮ್ಮ ಕಥೆಗಳು ಮತ್ತು ಕಾದಂಬರಿಗಳಲ್ಲಿ ನಿಸರ್ಗ ಮತ್ತು ವಿಜ್ಞಾನದ ಅದ್ಭುತಗಳನ್ನು ಬೆರೆಸಿ, ಪರಿಸರ ಪ್ರಜ್ಞೆಯನ್ನು ಹೆಚ್ಚಿಸಿದರು. ಅವರ ರಚನೆಗಳು ಹಾಸ್ಯ, ತತ್ವಜ್ಞಾನ ಮತ್ತು ಸಾಮಾಜಿಕ ವಿಡಂಬನೆಯನ್ನು ಒಳಗೊಂಡಿದ್ದು, ಅಬಚೂರಿನ ಪೋಸ್ಟಾಫೀಸು, ಕರ್ವಾಲೋ, 'ಚಿದಂಬರ ರಹಸ್ಯ ಮುಂತಾದ ಕೃತಿಗಳು ಗಂಭೀರ ಚಿಂತನೆಗಳನ್ನು ಪ್ರಚೋದಿಸುತ್ತವೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಬರಹಗಾರ, ಚಿಂತಕ, ಕೃಷಿಕ ಮತ್ತು ಪರಿಸರ ಪ್ರೇಮಿಯಾಗಿದ್ದರು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಹೆಚ್.ಎಸ್.ಸತ್ಯನಾರಾಯಣ ಹೇಳಿದರು. ಪಟ್ಟಣದ ಎಸ್ ಡಿ ಸಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕಲಾ ಬಳಗದ ವತಿಯಿಂದ ಡಿವಿಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕಲಾ ಬಳಗದ ಉದ್ಘಾಟನಾ ಹಾಗೂ ಹಸಿರು ಹಾದಿಯ ಪಯಣಿಗ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯಕ್ಕೆ ಕೊಡುಗೆ

ತೇಜಸ್ವಿ ಅವರು ತಮ್ಮ ಕಥೆಗಳು ಮತ್ತು ಕಾದಂಬರಿಗಳಲ್ಲಿ ನಿಸರ್ಗ ಮತ್ತು ವಿಜ್ಞಾನದ ಅದ್ಭುತಗಳನ್ನು ಬೆರೆಸಿ, ಪರಿಸರ ಪ್ರಜ್ಞೆಯನ್ನು ಹೆಚ್ಚಿಸಿದರು. ಅವರ ರಚನೆಗಳು ಹಾಸ್ಯ, ತತ್ವಜ್ಞಾನ ಮತ್ತು ಸಾಮಾಜಿಕ ವಿಡಂಬನೆಯನ್ನು ಒಳಗೊಂಡಿದ್ದು, ಅಬಚೂರಿನ ಪೋಸ್ಟಾಫೀಸು, ಕರ್ವಾಲೋ, ''ಚಿದಂಬರ ರಹಸ್ಯ ಮುಂತಾದ ಕೃತಿಗಳು ಗಂಭೀರ ಚಿಂತನೆಗಳನ್ನು ಪ್ರಚೋದಿಸುತ್ತವೆ ಎಂದರು.

ಮನುಷ್ಯನಿಗೆ ಪ್ರಕೃತಿಯ ಅಗತ್ಯ

ತಮ್ಮ ಬದುಕು-ಬರಹಗಳ ಮೂಲಕ ಪರಿಸರ ಪ್ರಜ್ಞೆಯನ್ನು ಬೆಳೆಸಿ, ಮಾನವನಿಗೆ ಪ್ರಕೃತಿಯ ಅಗತ್ಯವಿದೆ, ಪ್ರಕೃತಿಗೆ ಮಾನವನ ಅಗತ್ಯವಿಲ್ಲ ಎಂಬ ಸಂದೇಶ ಸಾರಿದರು. ಕನ್ನಡದ ಸಾಂಪ್ರದಾಯಿಕ ಚಿಂತನೆಗಳನ್ನು ಪ್ರಶ್ನಿಸುತ್ತಾ ಹೊಸ ದಿಗಂತವನ್ನು ತೆರೆದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಸ್. ಎ. ಜಗದೀಶ್ , ಸಂಸ್ಥಾಪಕ ಕಾರ್ಯದರ್ಶಿ ಉಷಾ ಗಂಗಾಧರ,ವೈದ್ಯಕೀಯ ನಿರ್ದೇಶಕರಾದ ಡಾ.ಕೆ. ಜೆ. ರಾಜೇಂದ್ರ ಮೌನಿ , ರಾಮು, ಶಿವರಾಂ ಉಪಸ್ಥಿತರಿದ್ದರು.