ಸಾರಾಂಶ
ಎನ್‌ಡಿಎ ಬೆಂಬಲಿತ ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ಅಭಿನಂದಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಸಂಘವನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವುದಾಗಿ ಹೇಳಿದರು. ಉಪಾಧ್ಯಕ್ಷ ಕೆ.ಸಿ.ಕೆಂಪರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕೆಂಬೂತಗೆರೆ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿ ಎ.ಇ.ತೇಜೇಂದ್ರಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೆ.ಸಿ ಕೆಂಪರಾಜು ಆಯ್ಕೆಯಾದರು.ಅಮೃತೇಶ್ವರನಹಳ್ಳಿ ಕಾಲೋನಿಯ ಕೆಂಬೂತಗೆರೆ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೇಜೇಂದ್ರಕುಮಾರ್ ಹಾಗೂ ಎ.ಎಸ್.ಮಂಜುನಾಥ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಸಿ.ಕೆಂಪರಾಜು ಹಾಗೂ ಬಿಲ್ಲಯ್ಯ(ರಾಮ) ನಾಮಪತ್ರ ಸಲ್ಲಿಸಿದ್ದರು.
ನಂತರ ಅಧ್ಯಕ್ಷರಾಗಿ ತೇಜೆಂದ್ರಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೆಂಪರಾಜು ತಲಾ 8 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಎಂ.ಕೆ.ತ್ಯಾಗರಾಜು ಪ್ರಸಾದ್ ಘೋಷಣೆ ಮಾಡಿದರು.ನೂತನ ಅಧ್ಯಕ್ಷ ಎ.ಇ.ತೇಜೇಂದ್ರಕುಮಾರ್ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ಎನ್‌ಡಿಎ ಬೆಂಬಲಿತ ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ಅಭಿನಂದಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಸಂಘವನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವುದಾಗಿ ಹೇಳಿದರು. ಉಪಾಧ್ಯಕ್ಷ ಕೆ.ಸಿ.ಕೆಂಪರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ವೇಳೆ ನಿರ್ದೇಶಕರಾದ ಎನ್.ಗಿರೀಶ್, ಜಿ.ಎಸ್.ಕುಮಾರ್, ಎಚ್.ಎಂ.ಮುದ್ದೇಗೌಡ, ಬಿಲ್ಲಯ್ಯ, ಜಯಮ್ಮ, ಎಸ್.ಡಿ.ಪುಟ್ಟಸ್ವಾಮಿ, ಸುಮಾ, ಎನ್.ರಮ್ಯಾ, ಡಿ.ಕಿರಣ್ ಕುಮಾರ್, ಮುಖಂಡರಾದ ಶಂಕರೇಗೌಡ, ಪುಟ್ಟರಾಜು, ಚಿಕ್ಕಿರೇಗೌಡ, ದೊಡ್ಡತಮ್ಮಯ್ಯ, ಪರಮೇಶ್ವರಪ್ಪ, ಮಹದೇವಸ್ವಾಮಿ, ಉಮೇಶ್, ಮಾದೇಗೌಡ, ದೊಳ್ಳೇಗೌಡ, ನಾಡಗೌಡ ದೊಡ್ಡಮೊಗೇಗೌಡ, ನಾಗೇಗೌಡ, ಕಿರಣ್ ಸೇರಿದಂತೆ ಇತರರು ಇದ್ದರು.