ಸಾರಾಂಶ
ದೈಹಿಕ ಶಿಕ್ಷಕ ರಾಮಪ್ಪ ಗದ್ದಿ ಹಾಗೂ ನೇತ್ರಾವತಿ ಗದ್ದಿ ದಂಪತಿಯ ಹಿರಿಯ ಸುಪುತ್ರಿ ತೇಜೋಮಯಿ ಗದ್ದಿಗೆ ನಾಟ್ಯ ಸರಸ್ವತಿ ಪ್ರಶಸ್ತಿಯನ್ನು ವೈಷ್ಣವಿ ಲಯನ್ ಹಾಸ್ಪಿಟಲ್‌ನ ಮೆಡಿಕಲ್ ಡೈರೆಕ್ಟರ್, ನೇತ್ರ ತಜ್ಞರಾದ ಡಾ.ಅನಿತಾ ಪ್ರಸಾದ ಪ್ರದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಚಿಂತನಶೀಲ ವಿಚಾರವೇದಿಕೆ(ರಿ) ಸಾರಥ್ಯದ ವಿವೇಕ ಚೇತನ ಚಾರಿಟಬಲ್ ಟ್ರಸ್ಟ್(ರಿ) ಹಾಗೂ ರಾಜ್ಯ ಸಿರಿ ಕನ್ನಡ ನುಡಿ ಬಳಗ ಸಹಯೋಗದಲ್ಲಿ 25ನೇ ರಾಜ್ಯಮಟ್ಟದ ವಾರ್ಷಿಕೋತ್ಸವ ನಿಮಿತ್ತ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ಗೌರವ ಗುರುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.ದೈಹಿಕ ಶಿಕ್ಷಕ ರಾಮಪ್ಪ ಗದ್ದಿ ಹಾಗೂ ನೇತ್ರಾವತಿ ಗದ್ದಿ ದಂಪತಿಯ ಹಿರಿಯ ಸುಪುತ್ರಿ ತೇಜೋಮಯಿ ಗದ್ದಿಗೆ ನಾಟ್ಯ ಸರಸ್ವತಿ ಪ್ರಶಸ್ತಿಯನ್ನು ವೈಷ್ಣವಿ ಲಯನ್ ಹಾಸ್ಪಿಟಲ್‌ನ ಮೆಡಿಕಲ್ ಡೈರೆಕ್ಟರ್, ನೇತ್ರ ತಜ್ಞರಾದ ಡಾ.ಅನಿತಾ ಪ್ರಸಾದ ಪ್ರದಾನ ಮಾಡಿದರು.
ವಿವೇಕ ಚೇತನ ಚಾರಿಟಬಲ್ ಟ್ರಸ್ಟ್(ರಿ)ನ ಅಧ್ಯಕ್ಷ ರವಿದಾಸ್ ಬಿಂಡಿಗನವಿಲೆ, ಗೌರವಾಧ್ಯಕ್ಷ ಯೋಗಾನಂದ.ಜಿ, ಉಪಾಧ್ಯಕ್ಷ ಜಿ.ಎನ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಕುಳಾಯಿ ಕೃಷ್ಣಮೂರ್ತಿ, ನಿರ್ವಹಣಾ ಟ್ರಸ್ಟಿ ಸಿ.ಮಲ್ಲಿಕಾರ್ಜುನ, ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ರಾಜ್ಯ ಸಿರಿ ಕನ್ನಡ ನುಡಿ ಬಳಗದ ಅಧ್ಯಕ್ಷ ವೆಂಕಟೇಶ ಲಕ್ಷಾಣಿ ಸೇರಿದಂತೆ ಗಣ್ಯ ಮುಖಂಡರು ಉಪಸ್ಥಿತರಿದ್ದರು. ಈರಪ್ಪ ಮಹಲಿಂಗಪೂರ ನಿರೂಪಿಸಿದರು. ಭದ್ರ ನಾಯ್ಕ್ ಸ್ವಾಗತಿಸಿದರು.