ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಜೆಡಿಎಸ್ ಪಕ್ಷಗಳು ಗುರುತರವಾದ ಷಡ್ಯಾಂತರ ರೂಪಿಸಿವೆ ೪೦ ರ್ಷುಗಳ ಕಾಲ ಕಪ್ಪು ಚುಕ್ಕೆ ಇಲ್ಲದೆ ಶುದ್ಧ ಹಸ್ತದ ಆಡಳಿತ ನೀಡಿದ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ವಿರೋಧ ಪಕ್ಷಗಳು ಹುನ್ನಾರ ನಡೆಸುತ್ತಿದ್ದು ಸಿದ್ದರಾಮಯ್ಯನವರ ವಿರುದ್ಧದ ಈ ತೇಜೋವಧೆಯನ್ನು ನಾವು ಸಹಿಸುವುದಿಲ್ಲ ಎಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾಹಗರಣ, ವಾಲ್ಮೀಕಿ ಹಗರಣಗಳಲ್ಲಿ ಸಿದ್ದರಾಮಯ್ಯ ಅವರ ಹೆಸರು ತರಲಾಗುತ್ತಿದೆ ಎಂಬ ಚರ್ಚೆಗಳು ನಡೆದ ಬೆನ್ನೆಲ್ಲೇ ರಾಜ್ಯಪಾಲರು ಸಿಎಂ ಅವರಿಗೆ ನೋಟೀಸ್ ನೀಡಿದ್ದಾರೆ. ಸಿದ್ದರಾಮಯ್ಯನವರು ಬಡವರು ದಲಿತರು ಕಾರ್ಮಿಕರ ಪರ ಇದ್ದಾರೆ ಹಿಂದುಳಿದ ಮತ್ತು ದಲಿತ ಸಮುದಾಯಗಳು ಅವರ ಪರವಾಗಿ ಬಂಡೆಯಂತೆ ನಿಂತಿವೆ. ಅಭಿವೃದ್ಧಿಯ ಉದ್ದೇಶವಿಲ್ಲದೆ ಕೇವಲ ಅವರ ತೇಜೋವಧೆಯ ಕಾರಣಕ್ಕಾಗಿ ಮೈತ್ರಿ ಪಕ್ಷಗಳು ಪಾದಯಾತ್ರೆ ನಡೆಸಿದರೆ ತುಮಕೂರು ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದಲೂ ಜನ ಸೇರಿಸಿ ಪ್ರತಿಕಾರದ ಪ್ರತಿಭಟನೆಯನ್ನು ತೀರಿಸಿಕೊಳ್ಳಲಾಗುವುದು ಇಂತಹ ದೊಡ್ಡ ಮಟ್ಟದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪಿತೂರಿಗೆ ಉತ್ತರ ಕೊಡುತ್ತೇವೆ :ಸಿದ್ದರಾಮಯ್ಯನವರ ಆಡಳಿತವನ್ನು ಸಹಿಸದ ಪ್ರತಿಪಕ್ಷಗಳು ಒಂದಿಲ್ಲೊಂದು ಪಿತೂರಿಯನ್ನು ನಡೆಸುತ್ತಲೇ ಬರುತ್ತಿದ್ದು ಇದರ ಸಲುವಾಗಿ ಕಾಳಿದಾಸಕ ವಿದ್ಯಾವರ್ಧಕ ಸಂಘ ಜಿಲ್ಲಾ ಕುರುಬರ ಸಂಘ , ಕರ್ನಾಟಕ ಪ್ರದೇಶ ಕುರುಬರ ಸಂಘ, ಕನಕ ಯುವ ಸೇನೆ, ಕನಕ ಪತ್ತಿನ ಸಹಕಾರ ಸಂಘ, ಕರ್ನಾಟಕ ಪ್ರದೇಶ ಯುವಕರ ಸಂಘ, ಕವಿರತ್ನ ಕಾಳಿದಾಸ ಸಹಕಾರ ಸಂಘ ಸೇರಿದಂತೆ ತುಮಕೂರು ಜಿಲ್ಲೆಯ ಅಹಿಂದ ಮುಖಂಡರಗಳು ಸಂಘ ಕುರುಬರು ಸಂಘಗಳು ಜೊತೆಗೂಡಿ ಹೋರಾಟವನ್ನು ರೂಪಿಸಿ ರಾಜ್ಯಾದ್ಯಂತ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು. ಅಜಾತಶತ್ರು ಎನಿಸಿಕೊಂಡಿರುವ ಸಿದ್ದರಾಮಯ್ಯನವರನ್ನು ಹತ್ತಿಕ್ಕಲು ಸಾಧ್ಯವಾಗದೆ, ಅಲ್ಲದೆ ಪ್ರಧಾನಿಗಳನ್ನು ನೇರವಾಗಿ ಟೀಕಿಸುವ ಧರ್ಯಸ ಇರುವುದರಿಂದ ನೇರವಾಗಿ ಬಿಜೆಪಿ ಸರ್ಕಾರದ 40% ಹಗರಣ ಸೇರಿದಂತೆ ಇತರೆ ಹಗರಣಗಳನ್ನು ಇಂಚಿಂಚಾಗಿ ಬಿಚ್ಚಿಡುತ್ತಿರುವ ಕಾರಣದಿಂದಾಗಿ ಬಿಜೆಪಿಗರು ಪ್ರತಿರೋಧ ನೀಡಲು ಸಾಧ್ಯವಾಗದೆ ರಾಜ್ಯಪಾಲರ ಮೂಲಕ ನೋಟಿಸ್ ಕೊಡಿಸಿರುವುದು ಸಮಂಜಸವಲ್ಲ ಎಂದು ಗುಡುಗಿದರು.
ಅಸೂಹೆ ರಾಜಕಾರಣ:ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ. ಆರ್. ಸುರೇಶ್ ಮಾತನಾಡಿ, ಕಪ್ಪು ಚುಕ್ಕೆ ಇಲ್ಲದ ಅಹಿಂದ ವರ್ಗಗಳ ನಾಯಕ ಸಿದ್ದರಾಮಯ್ಯ ಸ್ವಚ್ಛ ರಾಜಕಾರಣಿ ಅಸೂಯೆಯ ರಾಜಕಾರಣ ಮಾಡುವ ಬಿಜೆಪಿಗರು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ರಾಜ್ಯಪಾಲರ ಮೂಲಕ ನೋಟಿಸ್ ಜಾರಿಗೊಳಿಸಿದ್ದಾರೆ. ಅಡ್ಡ ದಾರಿಯಲ್ಲಿ ಮೈತ್ರಿ ಮಾಡಿಕೊಂಡ ಜೆಡಿಎಸ್ ಬಿಜೆಪಿ ಇದೀಗ ದೂರದ ಮನಸ್ಸಿನಲ್ಲಿದ್ದು ಎರಡು ಪಕ್ಷದ ನಾಯಕರುಗಳ ನಡುವೆ ಸರಿಯಾದ ಒಡಂಬಡಿಕೆ ಇಲ್ಲ ಇಂತಹ ಸಂದರ್ಭದಲ್ಲಿ ಬಡವರ ಪರ, ದಲಿತರ ಪರ, ಹಿಂದುಳಿದವರ ಅಲ್ಪಸಂಖ್ಯಾತ ವರ್ಗದ ಪರವಾಗಿರುವ ಮುಖ್ಯಮಂತ್ರಿಗಳ ವಿರುದ್ಧ ಅವಹೇಳನ ಮಾಡುವ ವಿರೋಧ ಪಕ್ಷಗಳು ತೇಜೋವಧೆ ಮಾಡುತ್ತಿದ್ದು, ಒಬ್ಬ ಹಿಂದುಳಿದ ಸ್ವಚ್ಛ ನಾಯಕನ ಮೇಲೆ ಅಸೂಯೆಯ ಹೊಟ್ಟೆ ಹುರಿಯ ರಾಜಕಾರಣ ಮಾಡುತ್ತಿರುವುದು ಸರಿ ಇಲ್ಲ, ಹೀಗಾಗಿ ಕೂಡಲೇ ಬಿಜೆಪಿಗರು ತಮ್ಮ ನಿಲುವನ್ನು ವಾಪಸ್ ಪಡೆಯದೆ ಹೋದರೆ ಹಳ್ಳಿ ಹಳ್ಳಿಗಳಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ದಂಗೆ ಹೇಳುತ್ತಾರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಬಿಜೆಪಿಗರು ಹೆದರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬ ಸಂಘದ ಆಂತರಿಕ ಲೆಕ್ಕಪರಿಶೋಧಕ ಟಿ ರಘುರಾಮ್, ಕನಕ ಯುವಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು, ಹಿಂದುಳಿದ ವರ್ಗಗಳ ಗೌರವಾಧ್ಯಕ್ಷ ಮಧುಕರ್, ಕವಿರತ್ನ ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮರಾಜು, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್, ಕುರುಬ ಸಮುದಾಯದ ಪುಟ್ಟಪ್ಪ, ಬಸವರಾಜು ಸೇರಿದಂತೆ ಜ್ವಾಲಾಮಾಲಾ ರಾಜಣ್ಣ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಗೋಳೂರು ಕೃಷ್ಣಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.