ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಪರ ತೆಲಂಗಾಣ ಶಾಸಕ ರಾಜಾಸಿಂಗ್ ಅವರು ಗುರುವಾರ ಸಂಜೆ ಗುರುಮಠಕಲ್ ಪಟ್ಟಣದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು. | Kannada Prabha
Image Credit: KP
ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಅವರ ಪರ ತೆಲಂಗಾಣದ ಶಾಸಕ ಹಾಗೂ ಹಿಂದೂ ಫಯರ್ ಬ್ರಾಂಡ್ ಖ್ಯಾತಿಯ ರಾಜಾಸಿಂಗ್ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಗುರುವಾರ ಸಂಜೆ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಅವರ ಪರ ತೆಲಂಗಾಣದ ಶಾಸಕ ಹಾಗೂ ಹಿಂದೂ ಫಯರ್ ಬ್ರಾಂಡ್ ಖ್ಯಾತಿಯ ರಾಜಾಸಿಂಗ್ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.
ಪಟ್ಟಣದ ನಗರೇಶ್ವರ ಗುಡಿಯಿಂದ ಪ್ರಮುಖ ಬೀದಿಗಳಾದ ಗಂಗಾ ಪರಮೇಶ್ವರಿ ವೃತ್ತ, ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ಬಸ್ ನಿಲ್ದಾಣ, ಸಾಮ್ರಾಟ್ ವೃತ್ತದ ಮೂಲಕ ಚಪೇಟ್ಲಾ ರಸ್ತೆಯ ಬಾಬುತಲಾರಿ ಜಮೀನಿನಲ್ಲಿ ಆಯೋಜಿಸಿದ್ದ ವೇದಿಕೆಯವರೆಗೆ ರೋಡ್ ಶೋ ಜರುಗಿತು.
ರೋಡ್ ಶೋ ದಲ್ಲಿ ಬಿಜೆಪಿ-ಜೆಡಿಎಸ್ ಧ್ವಜಗಳು ರಾರಾಜಿಸಿದವು. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ನೃತ್ಯಗಳ ಮೂಲಕ ಹಾಗೂ ಮೋದಿ ಅವರ ಹಾಡುಗಳನ್ನು ಪ್ರದರ್ಶಿಸುವ ಮೂಲಕ ಜನಮನ ಸೆಳೆದರು.
ಈ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ, ರಾಜ್ಯ ಬಿಜೆಪಿ ಕಾರ್ಯದರ್ಶಿ ಲಲಿತಾ ಅನಪೂರ, ನಿತಿನ್, ಗುತ್ತೇದಾರ, ಬಾಲರಾಜ ಗುತ್ತೇದಾರ್, ದೇವೇಂದ್ರನಾಥ ಸೇರಿದಂತೆ ಪ್ರಮುಖ ನಾಯಕರು ಇದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.