ಸಾರಾಂಶ
ಬಾಗಲಕೋಟೆಯಲ್ಲಿ ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆಯಿಂದ ನಗರದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಖೇಲೋ ಇಂಡಿಯಾ ಮಹಿಳಾ ಕ್ರೀಡಾಕೂಟದಲ್ಲಿ ತೆಲಂಗಾಣ 5 ಚಿನ್ನ, ಕೇರಳ 2 ಚಿನ್ನದ ಪದಕ ಪಡೆದು ಮುನ್ನಡೆ ಸಾಧಿಸಿವೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆಯಿಂದ ನಗರದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಖೇಲೋ ಇಂಡಿಯಾ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟದಲ್ಲಿ ತೆಲಂಗಾಣ 5 ಚಿನ್ನ, ಕೇರಳ 2 ಚಿನ್ನದ ಪದಕ ಪಡೆದು ಮುನ್ನಡೆ ಸಾಧಿಸಿವೆ.ಸಬ್ ಜ್ಯೂನಿಯರ್ ವಿಭಾಗದಲ್ಲಿ ತಮಿಳುನಾಡು 5 ಚಿನ್ನ, 4 ಕಂಚು, 2 ಬೆಳ್ಳಿ ಪದಕ ಪಡೆದು ಮುನ್ನಡೆ ಸಾಧಿಸಿದೆ. ಕೇರಳ 2 ಚಿನ್ನ, 3 ಬೆಳ್ಳಿ ಪದಕ ಪಡೆದು ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದೆ, ಕರ್ನಾಟಕ ಒಂದು ಬೆಳ್ಳಿ, 3 ಕಂಚು ಪದಕ ಪಡೆದು ತೃತೀಯ ಸ್ಥಾನದಲ್ಲಿದ್ದರೆ, ತೆಲಂಗಾಣ 5 ಕಂಚು ಪದಕ ಪಡೆದುಕೊಂಡಿದೆ.ಚಾಂಗ್ ಕ್ವಾನ್ ವಿಭಾಗದಲ್ಲಿ ತಮಿಳುನಾಡಿನ ಗೋಕುಲವರ್ಷಣಿ ಚಿನ್ನದ ಪದಕ, ಕೆರಳ ದಿಯಾರೀಜು ಬೆಳ್ಳಿ ಪದಕ ಪಡೆದರೆ, ತೆಲಂಗಾಣದ ಜಿ. ವೈಷ್ಣವಿ ಹಾಗೂ ತಮಿಳುನಾಡಿನ ಎಂ. ಕಲಂದಿಯಾ ಇಲಾಸರೆ ಕಂಚಿನ ಪದಕ ಪಡೆದು ಜಯಶಾಲಿಗಳಾದರು.
ಜಿಯಾನ್ಯು ವಿಭಾಗದಲ್ಲಿ ಕೇರಳದ ನೈನಾ ನೌಪಾಲ ಬೆಳ್ಳಿ ಪದಕ, ತಮಿಳುನಾಡಿನ ಎಸ್.ರಶ್ಮಿ, ಕೇರಳದ ನಯನಿಕಾ ಹಾಗೂ ತೆಲಂಗಾಣದ ಮಕಾಂಕ್ಷಾ ಯಾದವ ಕಂಚಿನ ಪದಕ ಪಡೆದರು. ತೈಜಿಕ್ವಾನ್ ವಿಭಾಗದಲ್ಲಿ ತಮಿಳನಾಡಿನ ಪ್ರಕಾಲ್ಯ ಕೆ.ಎಸ್. ಚಿನ್ನದ ಪದಕ, ಕೆರಳದ ಋತಿಕಾ ಎಂ., ತಮಿಳನಾಡಿನ ಅಭಿರಾಮಿ ಕೆ. ಹಾಗೂ ಕರ್ನಾಟಕದ ಸ್ಫೂರ್ತಿ ಗೌಡರ ಕಂಚಿನ ಪದಕ ಪಡೆದಿದ್ದಾರೆ. ತೈಜಿಜಿಯಾನ ವಿಭಾಗದಲ್ಲಿ ತಮಿಳನಾಡಿನ ಕೆ. ಯಜನಿ ಚಿನ್ನದ ಪದಕ ಪಡೆದರೆ, ಎಸ್. ರಹಿತಾ ಬೆಳ್ಳಿ ಪದಕ ಪಡೆದರು. ತೆಲಂಗಾಣದ ಗೋಪಾರಜುಲಾ ಹಾಗೂ ಕರ್ನಾಟಕ ಜೈಷ್ಣಾ ಶ್ರೀತಾ ಬಿ, ತಲಾ ಒಂದು ಕಂಚಿನ ಪದಕ ಪಡೆದರು. ಚಾಂಗ್ ಕ್ವಾನ್ ವಿಭಾಗದಲ್ಲಿ ತಮಿಳನಾಡಿನ ಎಫ್.ಲಹಿಜಾಬೆಲ್ ಚಿನ್ನದ ಪದಕ ಪಡೆದರೆ, ಕೇರಳದ ನೋಯಾ ಜುನೈದ ಬೆಳ್ಳಿ ಪದಕ ಪಡೆದರು. ತಮಿಳನಾಡಿನ ಗಂಗಾವರ್ಷನ ಜಿ., ಹಾಗೂ ತೆಲಂಗಾಣದ ಜರುಪುಲಾ ಚಂದನ ತಲಾ ಒಂದು ಕಂಚು ಪದಕ ಪಡೆದರು. ಜಿಹಾನ್ಸು ವಿಭಾಗದಲ್ಲಿ ಕೇರಳದ ಅನ್ನಮರೀಯಾ ಮರ್ಕೀಸ್ ಚಿನ್ನದ ಪದಕ, ತೆಲಂಗಾಣದ ರವೂಲಾಮೋಕ್ಷಾ ಬೆಳ್ಳಿ ಪದಕ, ಕರ್ನಾಟಕದ ಅನ್ನಪೂರ್ಣೇಶ್ವರಿ ಆರಾಧ್ಯಮಠ ಹಾಗೂ ತಮಿಳುನಾಡಿನ ಜೆ.ಎಲ್. ಶೋಷ್ಣಾ ತಲಾ ಒಂದು ಕಂಚಿನ ಪದಕ ಪಡೆದರು. ಕಿಯಾಂಗ್ಸು ವಿಭಾಗದಲ್ಲಿ ತಮಿಳುನಾಡಿನ ರೀಯಾನ್ಸಕಾ ಆರ್ ಚಿನ್ನದ ಪದಕ, ಕರ್ನಾಟಕದ ಶ್ರುತಿ ಸುಲಾಖೆ ಬೆಳ್ಳಿ ಪದಕ, ಕೇರಳದ ವೈಗಾ ಜಿ.ಎಸ್ ಹಾಗೂ ತಮಿಳುನಾಡಿನ ಆರ್.ನೇಹಾ ಮರೀನ್ ತಲಾ ಒಂದು ಕಂಚಿನ ಪದಕ ಪಡೆದರು. ನಂಕ್ವಾನ್ ವಿಭಾಗದಲ್ಲಿ ತಮಿಳುನಾಡಿನ ಪಿ.ಅಭಿರುತಾ ಚಿನ್ನದ ಪದಕ ಪಡೆದರೆ, ಕೇರಳದ ಹೈಜಾ ಪಾತೀಮಾ ಎಂ.ಪಿ ಬೆಳ್ಳಿ ಪದಕ ಪಡೆದರು, ಓಡಿಸ್ಸಾದ ಆರ್. ಪದ್ಮಾ ಹಾಗೂ ಕರ್ನಾಟಕದ ಶ್ರೀಶ್ವಾನ್ವಿ ತಲಾ ಒಂದು ಕಂಚಿನ ಪದಕ ಪಡೆದರು.4 ದಿನಗಳ ದಕ್ಷಿಣ ಭಾರತ ರಾಜ್ಯಗಳ ಮಹಿಳಾ ವುಶು ಕ್ರೀಡಾಕೂಟದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಪಾಂಡಿಚೇರಿ, ಓಡಿಸ್ಸಾ, ಗೋವಾ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಸೇರಿದಂತೆ 10 ರಾಜ್ಯಗಳ 500 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.