ಸಾರಾಂಶ
ತಮ್ಮ ಮಗಳ ಮದುವೆಗಾಗಿ ಮಾಡಿದ ಪ್ರಾರ್ಥನೆ ಫಲಿಸಿದ ಕಾರಣ ತೆಲಂಗಾಣದ ಸಚಿವ ಶ್ರೀನಿವಾಸ ರೆಡ್ಡಿ ಮಂಗಳವಾರ ಕುಟುಂಬ ಸಮೇತ ಸುಬ್ರಹ್ಮಣ್ಯಕ್ಕೆ ಬಂದು ಅನ್ನದಾನಕ್ಕೆ ೧ ಕೋಟಿ ರು. ಚೆಕ್ ನೀಡಿ ಹರಿಕೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಣ
ರಾಜ್ಯದಲ್ಲಿ ಆದಾಯದಲ್ಲಿ ನಂ.೧ ಸ್ಥಾನದಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಅನ್ನದಾನಕ್ಕೆ ತೆಲಂಗಾಣದ ಸಚಿವ ಪೊಂಗುಲೆಟಿ ಶ್ರೀನಿವಾಸ ರೆಡ್ಡಿ ಎಂಬವರು ಒಂದು ಕೋಟಿ ಹಣವನ್ನು ಅನ್ನದಾನಕ್ಕೆ ನೀಡಿ ತನ್ನ ಹರಕೆ ಸೇವೆಯನ್ನು ಮಂಗಳವಾರ ಪೂರೈಸಿದ್ದಾರೆ.ತಮ್ಮ ಮಗಳ ಮದುವೆಗಾಗಿ ಮಾಡಿದ ಪ್ರಾರ್ಥನೆ ಫಲಿಸಿದ ಕಾರಣ ಈ ಸೇವೆ ಪೂರೈಸಿದ್ದಾರೆ. ತೆಲಂಗಾಣದ ಸಚಿವ ಶ್ರೀನಿವಾಸ ರೆಡ್ಡಿ ಮಂಗಳವಾರ ಕುಟುಂಬ ಸಮೇತ ಸುಬ್ರಹ್ಮಣ್ಯಕ್ಕೆ ಬಂದು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಈ ಸಂದರ್ಭ ಅವರೊಂದಿಗೆ ಮಗಳು, ಅಳಿಯ, ಸಹೋದರ ಹಾಗೂ ತಿರುಪತಿಯಲ್ಲಿ ಪ್ರೊಫೆಸರ್ ಆಗಿರುವ ಗಣಪತಿ ಭಟ್ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾಟ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಭೆ, ಶ್ರೀವತ್ಸಾ, ಲೋಕೇಶ್ ಮುಂಡಕಜೆ, ಶೋಭಾ ಗಿರಿಧರ್, ವನಜಾ ಭಟ್ ಮತ್ತಿತರಿದ್ದು ಚೆಕ್ ಸ್ವೀಕರಿಸಲಾಯಿತು.