ಸುಳ್ಳು ಹೇಳಿ, ಜನರ ಯಾಮಾರಿಸುವುದನ್ನು ಬಿಜೆಪಿ ನಿಲ್ಲಿಸಲಿ-ರಿಜ್ವಾನ್‌ ಅರ್ಷದ್‌

| Published : May 01 2024, 01:16 AM IST

ಸುಳ್ಳು ಹೇಳಿ, ಜನರ ಯಾಮಾರಿಸುವುದನ್ನು ಬಿಜೆಪಿ ನಿಲ್ಲಿಸಲಿ-ರಿಜ್ವಾನ್‌ ಅರ್ಷದ್‌
Share this Article
  • FB
  • TW
  • Linkdin
  • Email

ಸಾರಾಂಶ

೧೦ ವರ್ಷಗಳ ಸಾಧನೆ ಬಗ್ಗೆ ತುಟಿಬಿಡದೇ ಬರೀ ಸಂಘರ್ಷದ ಮಾತುಗಳನ್ನಾಡುತ್ತೀರಿ. ಸುಳ್ಳು ಹೇಳಿ, ಜನರನ್ನು ಯಾಮಾರಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂದು ನರೇಂದ್ರ ಮೋದಿಯಾದಿಯಾಗಿ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಿಡಿಕಾರಿದರು.

ಹಾನಗಲ್ಲ: ದೇಶದ ಸಂಪತ್ತನ್ನೆಲ್ಲ ಅಂಬಾನಿ, ಅದಾನಿ ಅವರ ಕೈಗಿಟ್ಟಿದ್ದೀರಿ. ಪ್ರಾಮಾಣಿಕತೆ ಬಗ್ಗೆ ಭಾಷಣ ಮಾಡುತ್ತೀರಿ. ೧೦ ವರ್ಷಗಳ ಸಾಧನೆ ಬಗ್ಗೆ ತುಟಿಬಿಡದೇ ಬರೀ ಸಂಘರ್ಷದ ಮಾತುಗಳನ್ನಾಡುತ್ತೀರಿ. ಸುಳ್ಳು ಹೇಳಿ, ಜನರನ್ನು ಯಾಮಾರಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂದು ನರೇಂದ್ರ ಮೋದಿಯಾದಿಯಾಗಿ ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಿಡಿಕಾರಿದರು.ಹಾನಗಲ್ಲಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಜನಸಂಪರ್ಕ ಕಚೇರಿ ಬಳಿ ಆಯೋಜಿಸಲಾಗಿದ್ದ ತಾಲೂಕಿನ ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂಬೈ ಮಹಾನಗರದ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಮಾರಲಾಗಿದೆ. ಹೋಟೆಲ್‌ನಲ್ಲಿ ತಿನ್ನುವ ಇಡ್ಲಿ, ಚಟ್ನಿಯ ಮೇಲೂ ಜಿಎಸ್‌ಟಿ ಹೇರಿ ಜನರ ರಕ್ತ ಹೀರಲಾಗುತ್ತಿದೆ. ಸಂವಿಧಾನ ಬದಲಿಸಿ, ಜನಸಾಮಾನ್ಯರ ಹಕ್ಕು ಕಸಿಯಲು ೪೦೦ ಸ್ಥಾನ ಗೆಲ್ಲಿಸಿ ಎಂದು ಬಿಜೆಪಿ ನಾಯಕರು ಮತ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಪ್ರತಿಯೊಬ್ಬರೂ ಸಹ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುವಂಥ ಮೊದಲಿನ ಭಾರತ ದೇಶ ನಮಗೆ ಬೇಕಿದೆ. ಬಡವರ ಬದುಕು ಬದಲಿಸಿದ ಗ್ಯಾರಂಟಿ ಯೋಜನೆಗಳನ್ನು ಪ್ರಶ್ನಿಸಿ ದೇಶ ದಿವಾಳಿ ಏಳಲಿದೆ ಎಂದು ಪ್ರಶ್ನಿಸುವ ಬಿಜೆಪಿ ನಾಯಕರು ಶ್ರೀಮಂತರ ೧೫ ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಇದರಿಂದ ದೇಶ ದಿವಾಳಿ ಏಳಲಿಲ್ಲವೇ? ಎಂದು ಪ್ರಶ್ನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷರಾದ ದುದ್ದು ಅಕ್ಕಿವಳ್ಳಿ, ಸತ್ತಾರಸಾಬ ಅರಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ಅಹ್ಮದ್‌ಭಾಷಾ ಪೀರಜಾದೆ, ಮುಖಂಡರಾದ ಮಕ್ಬೂಲ್‌ಅಹ್ಮದ್ ಖಾಜಿ, ಸಿಕಂದರ್ ವಾಲಿಕಾರ, ಮೆಹಬೂಬಅಲಿ ಬ್ಯಾಡಗಿ, ಫಯಾಜ್ ಲೋಹಾರ, ನೌಶಾದ ರಾಣೇಬೆನ್ನೂರು, ಗನಿ ಪಟೇಲ, ಫಯಾಜ್ ಅಂಚಿ ಸೇರಿದಂತೆ ಇನ್ನೂ ಹಲವರಿದ್ದರು.