ಚೆನ್ನಮ್ಮನ ಸಾಹಸಗಾಥೆ ಮಕ್ಕಳಿಗೆ ತಿಳಿಸಿ: ತಹಸೀಲ್ದಾರ್ ಎರ್ರಿಸ್ವಾಮಿ

| Published : Oct 24 2025, 01:00 AM IST

ಚೆನ್ನಮ್ಮನ ಸಾಹಸಗಾಥೆ ಮಕ್ಕಳಿಗೆ ತಿಳಿಸಿ: ತಹಸೀಲ್ದಾರ್ ಎರ್ರಿಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚೆನ್ನಮ್ಮ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಹೀಗಾಗಿ ಅವರ ವಿಜಯೋತ್ಸವವನ್ನು ಎಲ್ಲರೂ ಸೇರಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.

ಮುಂಡರಗಿ: ಕರ್ನಾಟಕ ಹಾಗೂ ದೇಶದ ಇತಿಹಾಸದಲ್ಲಿ ಚೆನ್ನಮ್ಮನನ್ನು ಬೆಳ್ಳಿಚುಕ್ಕಿ ಎಂದು ಕರೆಯುತ್ತೇವೆ. ಮಕ್ಕಳಿಗೆ ಕಿತ್ತೂರು ರಾಣಿ ಚೆನ್ನಮ್ಮನ ಇತಿಹಾಸ ಹಾಗೂ ಸಾಹಸಗಾಥೆ ಕುರಿತು ತಿಳಿಸಿ ಹೇಳಬೇಕು. ಅಂದಾಗ ಅವರ ಬಗ್ಗೆ ರಾಷ್ಟ್ರೀಯ ಹಬ್ಬ ಆಚರಿಸುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.

ಗುರುವಾರ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಜರುಗಿದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನ 201ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾರಂಭದಲ್ಲಿ ವ್ಯಹಾರಕ್ಕೆಂದು ಬಂದ ಈಸ್ಟ್ ಇಂಡಿಯಾ‌ ಕಂಪನಿ ನಂತರ ಇಲ್ಲಿಯೇ‌ ಸಾಮ್ರಾಜ್ಯ ನಡೆಸುವ ಹುನ್ನಾರ ನಡೆಸಿತು. ದತ್ತು ಮಕ್ಕಳಿಗೆ ಅಧಿಕಾರ ಹಕ್ಕಿಲ್ಲ ಎನ್ನುವ ನಿಯಮ‌ ಜಾರಿಗೆ‌ ತಂದು ಕಿತ್ತೂರಿನ ಮೇಲೆ ಕಣ್ಣು ಹಾಕಿದರು. ಚೆನ್ನಮ್ಮ ಅವರಿಗೆ ಸಿಂಹವಾಗಿ ನಿಂತು ಇಲ್ಲಿಂದ ಓಡಿಸುವಲ್ಲಿ ಯಶಸ್ವಿಯಾದರು ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದರೆ ಅದು 1823ರ ಅ. 23. ಆದರೆ‌ ಸರ್ಕಾರ ಅದನ್ನು 1857 ಎಂದು ದಾಖಲಿಸಿ ಬೇರೆಯವರ ಯಶಸ್ಸನ್ನು ದಾಖಲೀಕರಣ ಮಾಡುವ ಮೂಲಕ ಕಿತ್ತೂರು ರಾಣಿ ಚೆನ್ನಮ್ಮನ ಹೆಸರನ್ನು ಮರೆಮಾಚುವ ಹುನ್ನಾರ ನಡೆಸಿದೆ ಎಂದರು.

ಮುಖಂಡ ಬಸವರಾಜ ದೇಸಾಯಿ ಮಾತನಾಡಿ, ಈ ದಿನವನ್ನು ಸರ್ಕಾರ ವಿಜಯೋತ್ಸವ ಎಂದು ಕರೆಯದೇ ಜಯಂತ್ಯೋತ್ಸವ ಎಂದು ಆಚರಿಸುತ್ತಿದ್ದು, ನಾವು ಮಾತ್ರ ಇದನ್ನು 201ನೇ ವಿಜಯೋತ್ಸವ ಎಂದೇ ಕರೆಯುತ್ತೇವೆ. ಇದು ಎಲ್ಲರ ತ್ಯಾಗ, ಬಲಿದಾನದ ಸಂಕೇತವಾಗಿ ಹೋರಾಟ ನಡೆದಿದೆ. ಚೆನ್ನಮ್ಮ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಹೀಗಾಗಿ ಅವರ ವಿಜಯೋತ್ಸವವನ್ನು ಎಲ್ಲರೂ ಸೇರಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ, ಎಂ.ಎಸ್. ಹೊಟ್ಟಿನ, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಮಂಜುನಾಥ ಮುಧೋಳ, ಬಸವರಾಜ ನವಲಗುಂದ, ಅಶ್ವಿನಿ ಗೌಡರ ಸೇರಿದಂತೆ ಅನೇಕರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ಪಂಚಮಸಾಲಿ ಸಮಾಜದ ಆರ್.ಬಿ. ಹಕ್ಕಂಡಿ, ವಿ.ಎಫ್. ಗುಡದಪ್ಪನವರ, ಎಸ್.ಎಸ್. ಇನಾಮತಿ, ವಿ.ಎಸ್. ಗಟ್ಟಿ, ಈರಣ್ಣ ಉಳ್ಳಾಗಡ್ಡಿ, ಅಂದಪ್ಪ ಉಳ್ಳಾಗಡ್ಡಿ, ಆರ್.ವೈ. ಪಾಟೀಲ, ಈರಣ್ಣ ತೆಂಗಿನಕಾಯಿ, ಮುತ್ತು ಅಳವಂಡಿ, ಸೋಮು ಹಕ್ಕಂಡಿ, ಬಸವರಾಜ ಅಸುಂಡಿ, ಶರಣಪ್ಪ ಕಲ್ಲೂರ, ಶಂಭುಲಿಂಗ ಲಿಂಗಶೆಟ್ಟರ, ದೇವಪ್ಪ ಇಟಗಿ, ನಾಗರಾಜ ಮರಡಿ, ಶೋಭಾ ಹೊಟ್ಟಿನ, ನೇತ್ರಾವತಿ ಭಾವಿಹಳ್ಳಿ, ರೇಖಾ ದೇಸಾಯಿ, ಶೋಭಾ ಪಾಟೀಲ, ಶ್ರೀದೇವಿ ಗೋಡಿ, ಪ್ರಭು ಹಳ್ಳಿಗುಡಿ,‌ ಜಗದೀಶ್ವರಪ್ಪ ಮೈನಳ್ಳಿ, ಪ್ರಭು ಕೊರ್ಲಹಳ್ಳಿ, ರಾಮಣ್ಣ ಮುಕ್ಕಣ್ಣವರ, ಲಕ್ಷ್ಮಣ ತಗಡಿನಮನಿ, ಮುತ್ತು ಬಳ್ಳಾರಿ,ಚಂದ್ರಕಾಂತ ಚಿಕ್ಕಣ್ಣವರ, ಗಂಗಾಧರ ಅಣ್ಣಿಗೇರಿ, ಬಸವರಾಜ್ ಎಚ್. ನಾಗಭೂಷನ ಹಿರೇಮಠ, ಸವಿತಾ ಸಾಶ್ವಿಹಳ್ಳಿ, ಶಿವಯೋಗಿ ಕಲ್ಮಠ ಸೇರಿ ಅನೇಕರು ಉಪಸ್ಥಿತರಿದ್ದರು. ಉದಯಕುಮಾರ ಯಲಿವಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.