ಸಂಸದ ಖೂಬಾ ವೈಫಲ್ಯ ಜನರಿಗೆ ತಿಳಿಸಿ: ಸಚಿವ ಈಶ್ವರ ಖಂಡ್ರೆ

| Published : Apr 08 2024, 01:00 AM IST

ಸಂಸದ ಖೂಬಾ ವೈಫಲ್ಯ ಜನರಿಗೆ ತಿಳಿಸಿ: ಸಚಿವ ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಸಿದ್ಧಾಂತವನ್ನು ಒಪ್ಪಿ ವಿವಿಧ ಸಮುದಾಯದ ಪ್ರಮುಖರು, ಯುವಕರು ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಸಂತಸ ತರಿಸಿದೆ. ಹಳಬರು ಮತ್ತು ಹೊಸಬರು ಸೇರಿ ಎಲ್ಲರೂ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಭಾತಂಬ್ರಾ ಗ್ರಾಮದ ಪ್ರಮುಖರು ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಕಳೆದ ಎರಡು ಅವಧಿಯಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಭಗವಂತ ಖೂಬಾ ಜಿಲ್ಲೆಯ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಯಾವುದೇ ಕೊಡುಗೆ ನೀಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಾಲೂಕಿನ ಭಾತಂಬ್ರಾ ಗ್ರಾಮದ ಪ್ರಮುಖರು ಸಚಿವರ ನಿವಾಸದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡ ನಂತರ ಅವರಿಗೆ ಪಕ್ಷದ ಬಾವುಟ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಕಾರ್ಯಕರ್ತರು ಸಂಸದರ ವೈಫಲ್ಯವನ್ನು ಜನರ ಮುಂದಿಟ್ಟು ಕಾಂಗ್ರೆಸ್‌ ಗೆಲ್ಲಿಸಲು ಶ್ರಮಿಸಬೇಕು ಎಂದರು.

ಕಾಂಗ್ರೆಸ್‌ ಸಿದ್ಧಾಂತವನ್ನು ಒಪ್ಪಿ ವಿವಿಧ ಸಮುದಾಯದ ಪ್ರಮುಖರು, ಯುವಕರು ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಸಂತಸ ತರಿಸಿದೆ. ಹಳಬರು ಮತ್ತು ಹೊಸಬರು ಸೇರಿ ಎಲ್ಲರೂ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ವಿಜಯಕುಮಾರ ಗಾಮಾ, ಸದಸ್ಯರಾದ ಜೈರಾಜ ಪಾಟೀಲ್‌, ಶಿವಕುಮಾರ ಕಾಪಸೆ, ರವಿ ಬೊರವೇಲ್ಸ್‌ ಮಾಲೀಕ ರವೀಂದ್ರ ಚಿಡಗುಪ್ಪೆ, ಪ್ರಮುಖರಾದ ಓಂಕಾರ ರಾಮಶೆಟ್ಟೆ, ಭಯ್ಯ, ಸಂಜು ಚಿದ್ರೆ, ಸಂತೋಷ ರೊಡ್ಡೆ, ಮಂತ್ರಿ, ಮುಸ್ತಾಕ್ ಸೇರಿದಂತೆ ಹಲವರು ಇದ್ದರು.

ಇದೇ ಸಂದರ್ಭದಲ್ಲಿ ಪಿಕೆಪಿಎಸ್‌ ಅಧ್ಯಕ್ಷ ಸತೀಶ ಬಿರಾದಾರ, ಉಪಾಧ್ಯಕ್ಷ ಚಂದ್ರಕಾಂತ ಕುಟಮಲಗೆ, ಪ್ರೇಮನಾಥ ಗಾಮಾ, ಗುಂಡು ಅಹ್ಮದಾಬಾದೆ, ಮಹಾದೇವ ಅಹ್ಮದಾಬಾದೆ, ಶಿವರಾಜ ಧೂಳೆ, ಮಹಾದೇವ ಕುಟಮಲಗೆ, ದತ್ತು ಕುಟಮಲಗೆ, ಸುರೇಶ ಕುಟಮಲಗೆ, ಶಿವರಾಜ ಕುಟಮಲಗೆ, ಸದಾನಂದ ಕುಟಮಲಗೆ, ಸಂಗಮೇಶ ಪಾಟೀಲ್‌, ವಿಜಯ ಮೂಳೆ, ದತ್ತಾ ಜಾಧವ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದರು.