ಸಾರಾಂಶ
ಶಿಗ್ಗಾಂವಿ: ಸಂಗೊಳ್ಳಿ ರಾಯಣ್ಣನವರ ಚರಿತ್ರೆಯ ಕಥೆ, ಕಾವ್ಯಗಳ ಮೂಲಕ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು ಎಂದು ಕುರುಬ ಸಮಾಜದ ಹಿರಿಯ ಮುಖಂಡ ಶಿವಾನಂದ ರಾಮಗೇರಿ ಹೇಳಿದರು.ಶಿಗ್ಗಾಂವಿ ಪಟ್ಟಣದಲ್ಲಿ ರಾತ್ರಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆ ಅಂಗವಾಗಿ ನಡೆದ ೪ನೇ ವರ್ಷದ ಪಂಜಿನ ಮೆರವಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.ರಾಯಣ್ಣನವರ ಆದರ್ಶಗಳನ್ನು ಮಕ್ಕಳಲ್ಲಿ ತುಂಬಿರಿ. ಅದರಿಂದ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಲು ಸಾಧ್ಯವಿದೆ. ದೇಶಕ್ಕಾಗಿ ನಮ್ಮದೆಯಾದ ಕೊಡುಗೆ ನೀಡುವ ಕೆಲಸ ಮಾಡಬೇಕು. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಅಂತಹ ಚಿಂತನೆಗಳು ಪ್ರತಿಯೊಬ್ಬರಲ್ಲಿ ಬೆಳೆಸಬೇಕು ಎಂದರು. ಯೋಧ ಪರಶುರಾಮ ದಿವಾನದ, ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದ ಅಧ್ಯಕ್ಷ ಫಕ್ಕೀರಪ್ಪ ಕುಂದೂರ, ವಕೀಲ ನವೀನ ರಾಮಗೇರಿ, ಪುರಸಭೆ ಸದಸ್ಯ ಸುಭಾಸ ಚವ್ಹಾಣ, ಮುಖಂಡರಾದ ಗದಿಗೆಪ್ಪ ಕೊಡ್ಲಿವಾಡ, ಚಂದ್ರಣ್ಣ ಮಾಯಣ್ಣವರ, ದೇವು ಸೊರಟೂರ, ಹನುಮಂತಪ್ಪ ಹರಿಜನ, ಶಿವಯೋಗಿ ಹಿರೇಮಠ, ರವಿ ಬಿಶೇಟ್ಟಿ, ಶಿವಾನಂದ ಚಾಕಲಬ್ಬಿ, ಮಂಜುನಾಥ ದ್ಯಾಮಣ್ಣವರ, ಸಂತೋಷ ಚಾಕಲಬ್ಬಿ, ಸಂತೋಷ ಲಚಮಣ್ಣವರ, ನೀಲಪ್ಪ ಬಸವನಾಳ, ಅಬ್ಬಾಲಿಸ್ ಹುಲಗೂರ ಸೇರಿದಂತೆ ವಿವಿಧ ಸಮಾಜದ ಮುಖಂಡರು ಇದ್ದರು. ನಂತರ ಮೈಲಾರಲಿಂಗೇಶ್ವರ ಆವರಣದಿಂದ ಪಂಜಿನ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಪಟ್ಟಣದ ದೇವಸ್ಥಾನದ ಆರಂಭವಾದ ಪಟ್ಟಣದ ಸಂಚರಿಸಿ ವೀರ ರಾಣಿ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಮುಕ್ತಾಯಗೊಂಡಿತು.