ಪರಿಸರ ನಾಶದಿಂದ ತಾಪಮಾನ ಹೆಚ್ಚಳ: ಪ್ರಕಾಶ್‌

| Published : Jun 06 2024, 12:31 AM IST

ಸಾರಾಂಶ

ಭದ್ರಾವತಿ ನಗರಸಭೆ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಸಸಿ ನೆಡುವ ಮೂಲಕ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಪರಿಸರ ನಾಶದಿಂದ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ನಾವುಗಳು ಇಂದು ಎದುರಿಸುತ್ತಿದ್ದೇವೆ. ಇದನ್ನು ಅರಿತುಕೊಂಡು ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಬೇಕೆಂದು ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಕರೆ ನೀಡಿದರು.

ಬುಧವಾರ ನಗರಸಭೆ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದು ಮಳೆ ಪ್ರಮಾಣ ಕಡಿಮೆಯಾಗಿ ಬಿಸಿಲಿನ ತಾಪ ಹೆಚ್ಚುತ್ತಿದೆ. ಅಲ್ಲದೆ ಶುದ್ಧ ಪರಿಸರ ಸಹ ಇಲ್ಲವಾಗಿದೆ. ಇದರಿಂದಾಗಿ ನಾವುಗಳು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಪ್ರತಿಯೊಬ್ಬರು ಸಸಿ ನೆಟ್ಟು ರಕ್ಷಣೆ ಮಾಡಿ ಪೋಷಿಸಬೇಕು. ಇದರಿಂದಾಗಿ ಭವಿಷ್ಯದಲ್ಲಿ ಉತ್ತಮ ಪರಿಸರ ನಿರ್ಮಾಣವಾಗಲಿದೆ ಎಂದರು.

ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಹಿರಿಯ ಪತ್ರಕರ್ತ ಎನ್.ಬಾಬು ಸೇರಿ ಇನ್ನಿತರರು ಪರಿಸರ ಕಾಳಜಿ ಕುರಿತು ಮಾತನಾಡಿದರು.

ನಗರಸಭೆ ವ್ಯವಸ್ಥಾಪಕಿ ಎಂ.ಸುನಿತಾಕುಮಾರಿ, ಸಹಾಯಕ ಕಾರ್ಯಪಾಲಕ ಅಬಿಯಂತರ ಬಿ.ಬಿ ಶಿವಪ್ರಸಾದ್, ಕಿರಿಯ ಅಭಿಯಂತರ ಕೆ. ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ, ಸಂತೋಷ್ ಪಾಟೀಲ್, ಪೌರ ಸೇವಾ ನೌಕರರ ಸೇವಾ ಸಂಘದ ತಾ.ಅಧ್ಯಕ್ಷ ಎಸ್. ಚೇತನ್ ಕುಮಾರ್, ನರಸಿಂಹಮೂರ್ತಿ, ಎಂ.ನಿತೀಶ್, ಡಿ.ಎಸ್ ಹೇಮಂತ್ ಕುಮಾರ್, ಬಸವರಾಜ ನಾಯ್ಕ, ಎಸ್. ಪವನ್ ಕುಮಾರ್, ಸುಮಿತ್ರ ಎಚ್. ಹರಪ್ಪನಹಳ್ಳಿ ಸೇರಿ ಇನ್ನಿತರರಿದ್ದರು.