ಸಾರಾಂಶ
2.22ರಂದು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ನಿಮಿತ್ತ ನರೇಂದ್ರ ಮೋದಿ ದೇವಸ್ಥಾನ ಸ್ವಚ್ಛಗೊಳಿಸಲು ಕರೆ ನೀಡಿದ್ದು, ಮಸ್ಕಿ ಪಟ್ಟಣದ ರಥ ಬೀದಿಯಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಮುಂಭಾಗದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಕಾರ್ಯಕರ್ತರು ದೇವಸ್ಥಾನ ಸ್ವಚ್ಛ ಮಾಡಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯ ಮೇರೆಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಕಾರ್ಯಕರ್ತರು, ಹಿಂದೂ ಸಮಾಜದ ಮುಖಂಡರು ಪಟ್ಟಣದಲ್ಲಿ ಮಂಗಳವಾರ ದೇವಸ್ಥಾನ ತೊಳೆದು ಸ್ವಚ್ಛ ಮಾಡುವ ಕಾರ್ಯದಲ್ಲಿ ತೊಡಗಿದ್ದರು.ಜ.22ರಂದು ಅಯ್ಯೋಧೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರಾಮಮಂದಿರ ಉದ್ಘಾಟನೆಯ ಅಂಗವಾಗಿ ದೇಶದ ಎಲ್ಲಾ ನಗರ ಪಟ್ಟಣಗಳಲ್ಲಿ ದೇವಸ್ಥಾನ ಸ್ವಚ್ಛತೆ ಹಾಗೂವು. ಪ್ರ ವಿಶೇಷ ಪೂಜೆ ನೆರವೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದ ಹಿನ್ನೆಲೆ ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಬೆಟ್ಟದ ಕೆಳಗಡೆ ಇರುವ ಭ್ರಮರಾಂಬ ದೇವಸ್ಥಾನವನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಸ ಬಳಿದು ನೀರಿನಿಂದ ತೊಳೆಯುವ ಮೂಲಕ ಮೋದಿ ನಡೆಯನ್ನು ಅನುಸರಿಸಿದರು.
ಪ್ರತಾಪಗೌಡ ಪಾಟೀಲ್ ಇದೇ ಸಂದರ್ಭದಲ್ಲಿ ಮಾತನಾಡಿ, ಮಸ್ಕಿ ಕ್ಷೇತ್ರದ ಎಲ್ಲಾ ದೇವಸ್ಥಾನಗಳನ್ನು ನಮ್ಮ ಕಾರ್ಯಕರ್ತರು ಗ್ರಾಮದ ಸಾರ್ವಜನಿಕರ ಸಹಕಾರದಿಂದ ಸ್ವಚ್ಛಗೊಳಿಸಬೇಕು. ಜ.22 ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ದೀಪ ಬೆಳಗುವಂತೆ ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿದರು.ಬಿಜೆಪಿಯ ಹಿರಿಯ ಮುಖಂಡರಾದ ಡಾ. ಬಿ.ಎಚ್.ದಿವಟರ್, ಅಂದಾನಪ್ಪ ಗುಂಡಳ್ಳಿ, ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಶಿವಶಂಕ್ರಪ್ಪ ಹಳ್ಳಿ, ಅಶೋಕ ಠಾಕೂರ, ಪ್ರಸನ್ನ ಪಾಟೀಲ್, ಚೇತನ ಪಾಟೀಲ್, ಹಾಗೂ ಇತರರು ಭಾಗವಹಿಸಿದ್ದರು.