ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಕರೆ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸಿದರು.
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಪ್ರತಿಷ್ಠಾಪನೆಗೂ ಮುನ್ನ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಅವರು ಭಾನುವಾರ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಹಳೆ ಹುಬ್ಬಳ್ಳಿಯಲ್ಲಿರುವ ಭವಾನಿ ಶಂಕರ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತೆಂಗಿನಕಾಯಿ, ಜ. 22ರ ವರೆಗೆ ಸ್ವಚ್ಛತಾ ಕಾರ್ಯಗಳು ಹುಬ್ಬಳ್ಳಿಯಲ್ಲಿರುವ ಪ್ರತಿಯೊಂದು ದೇವಸ್ಥಾನಗಳಲ್ಲಿ ನಡೆಯಲಿದೆ ಎಂದರು.ಶ್ರೀರಾಮನ ಚಿತ್ರವಿರುವ ಭಗವಾ ಧ್ವಜಗಳನ್ನು ಪ್ರತಿ ಬೂತ್ ಗಳಲ್ಲಿರುವ ಮನೆಗಳಿಗೆ ವಿತರಿಸಲಾಗುತ್ತಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಮನೆಗಳ ಮೇಲೆ ಧ್ವಜ ಕಟ್ಟಲು ಕರೆ ನೀಡಿದ್ದು, ಅಂದು ಇಡೀ ನಗರವೇ ಕೇಸರಿಮಯವಾಗಬೇಕು ಹಾಗೂ ಎಲ್ಲೆಡೆ ಶ್ರೀ ರಾಮನ ಜಪ ಆಗಬೇಕು ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
ಸ್ವಚ್ಛತಾ ಕಾರ್ಯದಲ್ಲಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ದತ್ತಮೂರ್ತಿ ಕುಲಕರ್ಣಿ, ಗೋಪಾಲ ಬದ್ದಿ, ಅಶೋಕ ವಾಲ್ಮೀಕಿ, ಬಿಜೆಪಿ ಜಿಲ್ಲಾ ವಕ್ತಾರ ರವಿ ನಾಯಕ. ತೋಟಪ್ಪ ನಿಡಗುಂದಿ, ರೂಪಾ ಶೆಟ್ಟಿ, ಉಮಾ ಮುಕುಂದ, ಅಕ್ಕಮ್ಮ ಹೆಗಡೆ. ಸೀಮಾ ಲದ್ವಾ, ಸಂಗೀತಾ ಬದ್ದಿ, ಕೃಷ್ಣ ಘಂಡಗಾಳೆಕರ, ಸುಭಾಷ ಅಂಕಲಕೋಟಿ, ಚಂದ್ರು ನೂಲ್ವಿ, ವಿನಾಯಕ ಕುಲಕರ್ಣಿ, ಗುರು ಮೈಲಿ, ನಾಗರಾಜ ಬಾಕಳೆ, ಪ್ರವೀಣ ಪವಾರ್, ಅವಿನಾಶ ಅರಿವಾಣ, ಲೀಲಾವತಿ ಪಾಸ್ತೆ, ಗುರು ವೀರಾಪುರ, ರವಿ ಬಂಕಾಪುರ, ಗುರು ವೀರಾಪುರ ಸೇರಿದಂತೆ ಹಲವರಿದ್ದರು.