ಶ್ರೀಕಂಠೇಶ್ವರ ದೇವಾಲಯದ ಹುಂಡಿ ಹಣ ಎಣಿಕೆ - 1.80 ಕೋಟಿ ಆದಾಯ

| Published : Jul 17 2025, 12:30 AM IST / Updated: Jul 17 2025, 12:31 AM IST

ಶ್ರೀಕಂಠೇಶ್ವರ ದೇವಾಲಯದ ಹುಂಡಿ ಹಣ ಎಣಿಕೆ - 1.80 ಕೋಟಿ ಆದಾಯ
Share this Article
  • FB
  • TW
  • Linkdin
  • Email

ಸಾರಾಂಶ

ಯುಎಸ್ಎ 31 ಡಾಲರ್, ಕತಾರ್ ರಿಯಾಬ್ 23, ಕುವಾಯುತ್ ದಿನಾಂ 8, ಕೆನಡಾ ಡಾಲರ್ 2, ನೇಪಾಳ ರುಪೀಸ್ 5, ಓಮನ್

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಶ್ರೀ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಬುಧವಾರ 31 ಹುಂಡಿಗಳ ಪಾರ್ಕಾವಣೆ ನಡೆದು, ಹುಂಡಿಯಲ್ಲಿ 1 ಕೋಟಿ 80 ಲಕ್ಷ 67 ಸಾವಿರ 108 ನಗದು, 74.5 ಗ್ರಾಂ ಚಿನ್ನ, ಬೆಳ್ಳಿ1.78 ಕೆ.ಜಿ, 78 ವಿದೇಶಿ ಕರೆನ್ಸಿಗಳು ಸಂಗ್ರಹಗೊಂಡಿದೆ.

ದೇವಾಲಯದ ದಾಸೋಹ ಭವನದಲ್ಲಿ ದೇವಾಲಯದ ಹುಂಡಿಗಳನ್ನು ಒಡೆದು ಎಣಿಕೆ ಕಾರ್ಯ ನಡೆಯಿತು. ಪಟ್ಟಣದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಸಿಬ್ಬಂದಿ, ನೂರಕ್ಕೂ ಹೆಚ್ಚಿನ ಸ್ತ್ರಿಶಕ್ತಿ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯಕ್ಕೆ ನೆರವಾದರು.

ಯುಎಸ್ಎ 31 ಡಾಲರ್, ಕತಾರ್ ರಿಯಾಬ್ 23, ಕುವಾಯುತ್ ದಿನಾಂ 8, ಕೆನಡಾ ಡಾಲರ್ 2, ನೇಪಾಳ ರುಪೀಸ್ 5, ಓಮನ್ 3, ಇಂಡೋನೇಷಿಯಾದ 2, ಆಸ್ಟ್ರೇಲಿಯಾದ ಒಂದು ಡಾಲರ್, ಎರಡು ಯೂರೋ ಸೇರಿದಂತೆ 78 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹ ಗೊಂಡಿವೆ ಎಂದು ದೇವಾಲಯದ ಇಒ ಜಗದೀಶ್ ಕುಮಾರ್ ಮಾಹಿತಿ ನೀಡಿದರು.

ಧಾರ್ಮಿಕ ತಹಸೀಲ್ದಾರ್ ವಿದ್ಯುಲತಾ, ಲೆಕ್ಕಾಧಿಕಾರಿ ಗುರುಮಲ್ಲಯ್ಯ ಇದ್ದರು.

--------------