ನಮ್ಮ ಭಾಗದಲ್ಲಿ ಅಮರಗೋಳ ನಾಗಸ್ವಾಮಿ ದೇವಸ್ಥಾನ ಬಿಟ್ಟರೆ, ನಂತರದ ನಾಗಸ್ವಾಮಿ ದೇವಸ್ಥಾನ ಪಟ್ಟಣದ ಹಗೇದಕಟ್ಟಿ ಓಣಿಯಲ್ಲಿ ನಿರ್ಮಾಣವಾಗಿದೆ. ಪ್ರತಿವರ್ಷ ನಾಗರಪಂಚಮಿ ಹಬ್ಬದಲ್ಲಿ ನಾಗಸ್ವಾಮಿಯ ಹಬ್ಬ ಅತಿ ವಿಜೃಂಭಣೆಯಿಂದ ನಡೆಯಲಿ.

ನರಗುಂದ: ದೇವತಾ ಕಾರ್ಯಗಳಲ್ಲಿ ಶಕ್ತಿಯಿದೆ. ಸಂಸ್ಕಾರ, ಸಂಸ್ಕೃತಿ ಉಳಿಯಲು ದೇವಸ್ಥಾನಗಳು ಅವಶ್ಯ. ಜನರಲ್ಲಿ ಮಾನವೀಯತೆ ಸ್ವಭಾವ ಬರಲು ಆಧ್ಯಾತ್ಮಿಕ ಚಿಂತನೆ ಅವಶ್ಯವಿದೆ ಎಂದು ಪುಣ್ಯಾರಣ್ಯ ಪತ್ರೀವನಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ಹೇಳಿದರು.

ಭಾನುವಾರ ಪಟ್ಟಣದ ಹಗೇದಕಟ್ಟಿಯ ನಾಗಸ್ವಾಮಿ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ನಾಗಸ್ವಾಮಿ, ಗಣೇಶ ಶಿಲಾಮೂರ್ತಿ, ಬಸವಣ್ಣನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪಣಾ ಕಾರ್ಯಕ್ರಮದ ಧರ್ಮಸಭೆಯಲ್ಲಿ‌ ಮಾತನಾಡಿದರು. ನಮ್ಮ ಭಾಗದಲ್ಲಿ ಅಮರಗೋಳ ನಾಗಸ್ವಾಮಿ ದೇವಸ್ಥಾನ ಬಿಟ್ಟರೆ, ನಂತರದ ನಾಗಸ್ವಾಮಿ ದೇವಸ್ಥಾನ ಪಟ್ಟಣದ ಹಗೇದಕಟ್ಟಿ ಓಣಿಯಲ್ಲಿ ನಿರ್ಮಾಣವಾಗಿದೆ. ಪ್ರತಿವರ್ಷ ನಾಗರಪಂಚಮಿ ಹಬ್ಬದಲ್ಲಿ ನಾಗಸ್ವಾಮಿಯ ಹಬ್ಬ ಅತಿ ವಿಜೃಂಭಣೆಯಿಂದ ನಡೆಯಲಿ ಎಂದರು.

ಉಮೇಶಗೌಡ ಪಾಟೀಲ ಮಾತನಾಡಿದರು. ದೇವಸ್ಥಾನದ ದಾನಿಗಳನ್ನು ಸನ್ಮಾನಿಸಲಾಯಿತು. ರಾಜು ಕಲಾಲ ಹಾಗೂ ಎಸ್.ಎಸ್. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಮಕೃಷ್ಣ ಗೊಂಬಿ, ಉಮೇಶ ಯಳ್ಳೂರ, ಬಸವಂತ ಘಾಟಗೆ, ಸೋಮಣ್ಣ ಆಯಟ್ಟಿ, ಬಸವರಾಜ ಘಾಟಗೆ, ಹನುಮಂತ ಬೋವಿ, ಪ್ರಕಾಶಗೌಡ ಪಾಟೀಲ, ಯಲ್ಲಪ್ಪ ಪಿರಂಗಿ, ಬಸು ನೆಗಳೂರ, ಸಿದ್ದಪ್ಪ ಆಯಟ್ಟಿ, ಸಂಗಣ್ಣ ಕಳಸಾ, ಶರಣಪ್ಪ ಶಿರಸಂಗಿ, ರುದ್ರಗೌಡ ಪಾಟೀಲ, ಮುತ್ತು ಜಾಧವ, ಹಸನ್ ಕೆರೂರ, ಚನಬಸ್ಸು ಆಯಟ್ಟಿ, ಈರಣ್ಣ ನವಲಗುಂದ, ಮಹೇಶ ಹಾರೋಗೇರಿಮಠ, ರಮೇಶ ಕೋರಿ, ಮಂಜು ಕಮತರ ಹಾಗೂ ಹಗೇದಕಟ್ಟಿ ಓಣಿಯ ಗುರುಹಿರಿಯರು ಇದ್ದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.ಸೆ. 19ರಂದು ಸರ್ವಧರ್ಮ ಸಾಮೂಹಿಕ ವಿವಾಹಗದಗ: ಶ್ರಾವಣ ಮಾಸದ ಅಂಗವಾಗಿ ಶುಭಾರಂಭಗೊಂಡ ಶ್ರೀಶರಣ ಬಸವೇಶ್ವರ ಪುರಾಣ ಸೆ. 19ರಂದು ಮಹಾಮಂಗಲಗೊಳ್ಳಲಿದ್ದು, ಅದರ ಅಂಗವಾಗಿ ಸರ್ವಧರ್ಮಗಳ ಸಾಮೂಹಿಕ ವಿವಾಹಗಳು ಜರುಗಲಿದೆ. ಅರ್ಹ ವಧು- ವರರು ಆ. 31ರೊಳಗಾಗಿ ಅವಶ್ಯಕ ದಾಖಲಾತಿಗಳೊಂದಿಗೆ ಶರಣ ಬಸವೇಶ್ವರ ಪುರಾಣ ಸಮಿತಿಯವರನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 8105253228 ಅಥವಾ 9164903895 ಸಂಪರ್ಕಿಸಬೇಕೆಂದು ಸಂಚಾಲಕ ಬಿ.ಎಸ್. ಚಿಂಚಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.