ದೇವಾಲಯಗಳು ಶಾಂತಿ , ನೆಮ್ಮದಿಯ ತಾಣಗಳು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದಾಗ ದೇಶದ ಪ್ರಗತಿ ಮತ್ತು ಸಮಾಜದ ಅಭ್ಯುದಯ ಸಾಧ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಧುಗಿರಿ
ದೇವಾಲಯಗಳು ಶಾಂತಿ , ನೆಮ್ಮದಿಯ ತಾಣಗಳು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದಾಗ ದೇಶದ ಪ್ರಗತಿ ಮತ್ತು ಸಮಾಜದ ಅಭ್ಯುದಯ ಸಾಧ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.ಪಟ್ಟಣದ ಐತಿಹಾಸಿಕ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮದೇವಿಗೆ ವಿಶೇಷ ಧಾರ್ಮಿಕ ಪೂಜೆ ಭಾಗವಹಿಸಿ ಮಾತನಾಡಿದರು.
ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಪ್ರಾರಂಭವಾದ ಈ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದಕ್ಕೆ ಅಭಿನಂದಿಸುವುದಾಗಿ ತಿಳಿಸಿ, ಜಾತ್ರೆಗಳು, ಉತ್ಸವಗಳನ್ನು ಪರಸ್ಪರ ಪ್ರೀತಿ ,ವಿಶ್ವಾಸದಿಂದ ಸೌಹಾರ್ದಯುತವಾಗಿ ನಡೆಸುವುದರಿಂದ ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ರಾಜ್ಯದಲ್ಲಿ ಉತ್ತಮ ಮಳೆ,ಬೆಳೆಯಾಗಿ ಜನತೆ, ರೈತರು,ಕೃಷಿಕರು ಹಾಗೂ ಕೂಲಿಕಾರ್ಮಿಕರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಶಕ್ತಿ ನೀಡುವಂತೆ ಆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ದಂಡಿಮಾರಮ್ಮ ಮತ್ತು ಶ್ರೀಮಲ್ಲೇಶ್ವರಸ್ವಾಮಿ ಉದ್ಬವ ಲಿಂಗಕ್ಕೆ ಅಲಂಕಾರ ಮಾಡಿದ್ದು ಜನಾಕರ್ಷಣೆ ಪಡೆಯಿತು.ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು.ಡಿ.ಜಿ.ಶಂಕರನಾರಾಯಣಶಟ್ಟಿ,ಕೆ.ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಲಾಲಪೇಟೆ ಮಂಜುನಾಥ್,ಆರ್‌ಎಲ್‌ಎಸ್ ರಮೇಶ್, ಪಿಎಸ್‌ಐ ಚಂದ್ರಶೇಖರ್, ಜಿ.ಆರ್.ಧನ್‌ಪಾಲ್, ಪ್ರಧಾನ ಅರ್ಚಕರಾದ ಅನಂತ ಪದ್ಮನಾಭ ಭಟ್ಟರು, ಮಧುಸೂದನ್ ,ಇಓ ಲಕ್ಷ್ಮಣ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ,ಭಕ್ತರು ಮತ್ತಿತರರು ಭಾಗವಹಿಸಿದ್ದರು.
ಮಿಡಿಗೇಶಿ: ತಾಲೂಕಿನ ಮಿಡಿಗೇಶಿಯಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿರುವ ಶ್ರೀಲಕ್ಷ್ಮೀವೆಂಕಟರಮಸ್ವಾಮಿ ದೇಗುಲದಲ್ಲಿ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಬಡವನಹಳ್ಲಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಜಕ್ಕೇನಹಳ್ಳಿ ಗ್ರಾಮದ ಶ್ರೀ ಅಹೋಬಲ ಲಕ್ಷ್ಮೀನರಸಿಂಹಸ್ವಾಮಿ , ಕಸಬಾ ವ್ಯಾಪ್ತಿಯ ಮೀನಗೊಂದಿ ಮಲ್ಲೇರಂಗನಾಥಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ದೇವರುಗಳಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಂಕ್ರಯೈಗಳು ನಡೆದು ಭಕ್ತಾಧಿಗಳು ದೇವರ ಕೃಪೆಗೆ ಪಾತ್ರರಾದರು.