ವಕ್ಫ್‌ ಹಠಾವೋ ಧರಣಿಗೆ ತಾತ್ಕಾಲಿಕ ಬ್ರೇಕ್‌

| Published : Nov 08 2024, 12:36 AM IST / Updated: Nov 08 2024, 12:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್‌ ಹಠಾವೋ ದೇಶ ಬಚಾವೋ ಎಂದು ನಗರದ ಡಿಸಿ ಕಚೇರಿ ಬಳಿ ವಕ್ಫ್‌ ಕಾಯ್ದೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಸ್ಥಗಿತಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಕ್ಫ್‌ ಹಠಾವೋ ದೇಶ ಬಚಾವೋ ಎಂದು ನಗರದ ಡಿಸಿ ಕಚೇರಿ ಬಳಿ ವಕ್ಫ್‌ ಕಾಯ್ದೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಸ್ಥಗಿತಗೊಳಿಸಲಾಗಿದೆ.

ಕೇಂದ್ರ ಜಂಟಿ ಸಂಸದೀಯ ಕಮಿಟಿ ನೀಡಿರುವ(ಜೆಪಿಸಿ) ಭರವಸೆಯ ಆಧಾರದ ಮೇಲೆ ಧರಣಿಯನ್ನು ಕೈ ಬಿಡಲಾಗಿದೆ.ಬಿಜೆಪಿ ಹಮ್ಮಿಕೊಂಡಿದ್ದ ಧರಣಿ 4ನೇ ದಿನಕ್ಕೆ ತಾತ್ಕಾಲಿಕ ಅಂತ್ಯವಾಗಿದೆ. ಈ ಧರಣಿಗೆ ಹಲವಾರು ಮಠಾಧೀಶರು, ರೈತ ಸಂಘಟನೆಗಳು ಹಾಗೂ ರೈತರು, ಸಾರ್ವಜನಿಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಅಲ್ಲದೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ನಿ ಶೈಲಜಾ ಪಾಟೀಲ ಹಾಗೂ ಪುತ್ರ ರಾಮನಗೌಡ ಪಾಟೀಲ ವಕ್ಫ್ ಹೋರಾಟದಲ್ಲಿ ಭಾಗಿಯಾಗಿದ್ದರು.ವಿವಿಧ ಜಿಲ್ಲೆಗಳ ರೈತರ ಆಗಮನ

ಜೆಪಿಸಿ ಕಮಿಟಿ ಚೇರಮನ್ ಜಗದಂಬಿಕಾ ಪಾಲ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನೊಳಗೊಂಡ ತಂಡ ನಗರದಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸುವ ಮಾಹಿತಿಯಿಂದಾಗಿ ಸುತ್ತಮುತ್ತಲಿನ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಕೊಪ್ಪಳ, ಬಾಗಲಕೋಟ, ರಾಯಚೂರು,‌‌ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಶಾಸಕ ಯತ್ನಾಳ ಕಚೇರಿಯಲ್ಲಿ ಹಾಗೂ ಧರಣಿ ಸ್ಥಳದಲ್ಲಿ ವಕ್ಪ್ ಸಮಸ್ಯೆ ಬಗ್ಗೆ ರೈತರು ದಾಖಲೆಗಳನ್ನು ಒದಗಿಸಿದರು. ರೈತರು ನೀಡಿದ ದಾಖಲೆಯನ್ನು ಜೆಪಿಸಿ ಕಮಿಟಿಗೆ ಸಲ್ಲಿಸಲಾಯಿತು. ಈ ವೇಳೆ ರೈತರ ಪರಿವಾಗಿ ಇಬ್ಬರು ರೈತರಿಗೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಇಬ್ಬರು ಸ್ವಾಮೀಜಿ, ಇಬ್ಬರು ಸಂಘ ಸಂಸ್ಥೆಗಳ ಸದಸ್ಯರು, ನೋಟಿಸ್ ಪಡೆದ ಗ್ರಾಮಗಳ ಇಬ್ಬರು ಮುಖಂಡರು ಸೇರಿದಂತೆ ಹಲವರಿಂದ ಮಾಹಿತಿಯನ್ನು ಜೆಪಿಸಿ ಟೀಮ್ ಪಡೆಯಿತು.ರಾಜಕೀಯ ನಾಯಕರು ಸಾಥ್‌:

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯುತ್ತಿದ್ದ ವಕ್ಫ್‌ ವಿರುದ್ಧದ ಹೋರಾಟಕ್ಕೆ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಹಲವರು ಮಠಾಧೀಶರು, ಸಂಸದರಾದ ರಮೇಶ ಜಿಗಜಿಣಗಿ, ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಹರೀಶ ಪಾಟೀಲ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಸಾವಿರಾರು ರೈತರು ಭಾಗವಹಿಸಿದ್ದರು. ಇದೇ ವೇಳೆ ಜೆಪಿಸಿ ಕಮಿಟಿಗೆ ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ರೈತರು ತಮ್ಮ ಅಹವಾಲುಗಳನ್ನು ಸಲ್ಲಿಸಲಾಯಿತು.ಬಾಕ್ಸ್‌

ಫಿಚ್ಚರ್‌ ಅಬಿ ಬಾಕಿ ಹೈ: ಜೊಲ್ಲೆವಿಜಯಪುರ: ವಕ್ಫ್‌ನಿಂದ ರೈತರಿಗೆ, ದೇವಸ್ಥಾನಗಳಿಗೆ ಒಟ್ಟಿನಲ್ಲಿ ಹಿಂದೂಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ರೈತರಿಗೆ ನೋಟಿಸ್ ಕೊಟ್ಟು, ತೊಂದರೆ ಕೊಟ್ಟು ಸಾವಿರಾರು ಎಕರೆ ಜಮೀನು ನಮ್ಮದು ಎಂದು ಹೇಳುತ್ತಿದ್ದಾರೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು. ನಗರದ ಡಿಸಿ ಕಚೇರಿ ಬಳಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಕ್ಫ್‌ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು. ಈಗ ಆರಂಭವಾಗಿರುವ ನಮ್ಮ ಹೋರಾಟ ಟ್ರೈಯಲ್‌ ಇದೆ, ಪಿಕ್ಚರ್ ಅಬಿ ಬಾಕಿ ಹೈ ಎಂದರು. ದೇಶದ ಇತಿಹಾಸದಲ್ಲಿ ಮೊದಲಿನಿಂದಲೂ ಹಿಂದೂಗಳ ಮೇಲೆ ಸಾಕಷ್ಟು ಅನ್ಯಾಯಗಳಾಗಿವೆ. ಹಾಗಾಗಿಯೇ ಈ ಬಾರಿಯ ಈ ಹೋರಾಟಕ್ಕೆ ಹಲವಾರು ಪೂಜ್ಯರು ಸಹ ಸಾಥ್ ನೀಡಿದ್ದಾರೆ. ಒಂದು ದೇಶದಲ್ಲಿ ವಕ್ಫ್‌ಗೆ ಒಂದು ನ್ಯಾಯ, ನಮಗೊಂದು ನ್ಯಾಯ ಎಂಬಂತೆ ಆಗಿರುವ ಕುರಿತು ಕೇಂದ್ರ ಕಮೀಟಿ ಚೇರಮನ್ ಅವರಿಗೆ ಮನಮುಟ್ಟಿಸಿ ಇದನ್ನು ಕಿತ್ತು ಒಗೆಯೋಣ. ಯಾವುದೇ ರೀತಿಯಲ್ಲಿ ರೈತರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದು ಗುಟುರು ಹಾಕಿದರು.(ಫೋಟೊಗಳನ್ನು ಮೇಲ್ ಮಾಡಲಾಗಿದೆ)ಪರಿಶೀಲನೆಗೆ....ಪುಟ....2ಕ್ಕೆ ಲೀಡ್‌ ವಕ್ಫ್‌ ಹಠಾವೋ ಧರಣಿಗೆ ತಾತ್ಕಾಲಿಕ ಬ್ರೇಕ್‌ಕೇಂದ್ರದ ಜೆಪಿಸಿ ಭರವಸೆಯ ಆಧಾರದ ಮೇಲೆ ಧರಣಿ ಅಂಗತ್ಯ । ವಿವಿಧ ರೈತರು, ರಾಜಕೀಯ ನಾಯಕರು ಸಾಥ್ಕನ್ನಡಪ್ರಭ ವಾರ್ತೆ ವಿಜಯಪುರವಕ್ಫ್‌ ಹಠಾವೋ ದೇಶ ಬಚಾವೋ ಎಂದು ನಗರದ ಡಿಸಿ ಕಚೇರಿ ಬಳಿ ವಕ್ಫ್‌ ಕಾಯ್ದೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಸ್ಥಗಿತಗೊಳಿಸಲಾಗಿದೆ.ಕೇಂದ್ರ ಜಂಟಿ ಸಂಸದೀಯ ಕಮಿಟಿ ನೀಡಿರುವ(ಜೆಪಿಸಿ) ಭರವಸೆಯ ಆಧಾರದ ಮೇಲೆ ಧರಣಿಯನ್ನು ಕೈ ಬಿಡಲಾಗಿದೆ.ಬಿಜೆಪಿ ಹಮ್ಮಿಕೊಂಡಿದ್ದ ಧರಣಿ 4ನೇ ದಿನಕ್ಕೆ ತಾತ್ಕಾಲಿಕ ಅಂತ್ಯವಾಗಿದೆ. ಈ ಧರಣಿಗೆ ಹಲವಾರು ಮಠಾಧೀಶರು, ರೈತ ಸಂಘಟನೆಗಳು ಹಾಗೂ ರೈತರು, ಸಾರ್ವಜನಿಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಅಲ್ಲದೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ನಿ ಶೈಲಜಾ ಪಾಟೀಲ ಹಾಗೂ ಪುತ್ರ ರಾಮನಗೌಡ ಪಾಟೀಲ ವಕ್ಫ್ ಹೋರಾಟದಲ್ಲಿ ಭಾಗಿಯಾಗಿದ್ದರು.ವಿವಿಧ ಜಿಲ್ಲೆಗಳ ರೈತರ ಆಗಮನಜೆಪಿಸಿ ಕಮಿಟಿ ಚೇರಮನ್ ಜಗದಂಬಿಕಾ ಪಾಲ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನೊಳಗೊಂಡ ತಂಡ ನಗರದಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸುವ ಮಾಹಿತಿಯಿಂದಾಗಿ ಸುತ್ತಮುತ್ತಲಿನ ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಕೊಪ್ಪಳ, ಬಾಗಲಕೋಟ, ರಾಯಚೂರು,‌‌ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಶಾಸಕ ಯತ್ನಾಳ ಕಚೇರಿಯಲ್ಲಿ ಹಾಗೂ ಧರಣಿ ಸ್ಥಳದಲ್ಲಿ ವಕ್ಪ್ ಸಮಸ್ಯೆ ಬಗ್ಗೆ ರೈತರು ದಾಖಲೆಗಳನ್ನು ಒದಗಿಸಿದರು. ರೈತರು ನೀಡಿದ ದಾಖಲೆಯನ್ನು ಜೆಪಿಸಿ ಕಮಿಟಿಗೆ ಸಲ್ಲಿಸಲಾಯಿತು. ಈ ವೇಳೆ ರೈತರ ಪರಿವಾಗಿ ಇಬ್ಬರು ರೈತರಿಗೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಇಬ್ಬರು ಸ್ವಾಮೀಜಿ, ಇಬ್ಬರು ಸಂಘ ಸಂಸ್ಥೆಗಳ ಸದಸ್ಯರು, ನೋಟಿಸ್ ಪಡೆದ ಗ್ರಾಮಗಳ ಇಬ್ಬರು ಮುಖಂಡರು ಸೇರಿದಂತೆ ಹಲವರಿಂದ ಮಾಹಿತಿಯನ್ನು ಜೆಪಿಸಿ ಟೀಮ್ ಪಡೆಯಿತು.ರಾಜಕೀಯ ನಾಯಕರು ಸಾಥ್‌:ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯುತ್ತಿದ್ದ ವಕ್ಫ್‌ ವಿರುದ್ಧದ ಹೋರಾಟಕ್ಕೆ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಹಲವರು ಮಠಾಧೀಶರು, ಸಂಸದರಾದ ರಮೇಶ ಜಿಗಜಿಣಗಿ, ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಹರೀಶ ಪಾಟೀಲ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಸಾವಿರಾರು ರೈತರು ಭಾಗವಹಿಸಿದ್ದರು. ಇದೇ ವೇಳೆ ಜೆಪಿಸಿ ಕಮಿಟಿಗೆ ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ರೈತರು ತಮ್ಮ ಅಹವಾಲುಗಳನ್ನು ಸಲ್ಲಿಸಲಾಯಿತು.ಬಾಕ್ಸ್‌ಫಿಚ್ಚರ್‌ ಅಬಿ ಬಾಕಿ ಹೈ: ಜೊಲ್ಲೆವಿಜಯಪುರ: ವಕ್ಫ್‌ನಿಂದ ರೈತರಿಗೆ, ದೇವಸ್ಥಾನಗಳಿಗೆ ಒಟ್ಟಿನಲ್ಲಿ ಹಿಂದೂಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ರೈತರಿಗೆ ನೋಟಿಸ್ ಕೊಟ್ಟು, ತೊಂದರೆ ಕೊಟ್ಟು ಸಾವಿರಾರು ಎಕರೆ ಜಮೀನು ನಮ್ಮದು ಎಂದು ಹೇಳುತ್ತಿದ್ದಾರೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು. ನಗರದ ಡಿಸಿ ಕಚೇರಿ ಬಳಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಕ್ಫ್‌ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು. ಈಗ ಆರಂಭವಾಗಿರುವ ನಮ್ಮ ಹೋರಾಟ ಟ್ರೈಯಲ್‌ ಇದೆ, ಪಿಕ್ಚರ್ ಅಬಿ ಬಾಕಿ ಹೈ ಎಂದರು. ದೇಶದ ಇತಿಹಾಸದಲ್ಲಿ ಮೊದಲಿನಿಂದಲೂ ಹಿಂದೂಗಳ ಮೇಲೆ ಸಾಕಷ್ಟು ಅನ್ಯಾಯಗಳಾಗಿವೆ. ಹಾಗಾಗಿಯೇ ಈ ಬಾರಿಯ ಈ ಹೋರಾಟಕ್ಕೆ ಹಲವಾರು ಪೂಜ್ಯರು ಸಹ ಸಾಥ್ ನೀಡಿದ್ದಾರೆ. ಒಂದು ದೇಶದಲ್ಲಿ ವಕ್ಫ್‌ಗೆ ಒಂದು ನ್ಯಾಯ, ನಮಗೊಂದು ನ್ಯಾಯ ಎಂಬಂತೆ ಆಗಿರುವ ಕುರಿತು ಕೇಂದ್ರ ಕಮೀಟಿ ಚೇರಮನ್ ಅವರಿಗೆ ಮನಮುಟ್ಟಿಸಿ ಇದನ್ನು ಕಿತ್ತು ಒಗೆಯೋಣ. ಯಾವುದೇ ರೀತಿಯಲ್ಲಿ ರೈತರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದು ಗುಟುರು ಹಾಕಿದರು.