ಸಾರಾಂಶ
ರವೀಂದ್ರನಾಥ ಟಾಗೋರ ಕಡಲ ತೀರ, ಮಾಲಾದೇವಿ ಕ್ರೀಡಾಂಗಣ ಒಳಗೊಂಡು ವಿವಿಧೆಡೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಸ್ಥಳಗಳಲ್ಲೇ ಈ ರೀತಿಯಾಗಿದ್ದು, ತೆರೆದ ಪ್ಯಾನಲ್ ಬಾಕ್ಸ್ ಅತ್ಯಂತ ಅಪಾಯಕಾರಿ
ಕಾರವಾರ
ನಗರದ ವಿವಿಧೆಡೆ ಬೀದಿದೀಪದ ವಿದ್ಯುತ್ ಕಂಬದ ಪ್ಯಾನಲ್ ಬಾಕ್ಸ್‌ಗಳಿಗೆ ನಗರಸಭೆಯಿಂದ ತಾತ್ಕಾಲಿಕವಾಗಿ ಬ್ಯಾನರ್ ಕಟ್ಟಲಾಗಿದೆ.ತೆರೆದುಕೊಂಡ ವಿದ್ಯುತ್ ಕಂಬದ ಪ್ಯಾನಲ್ ಬಾಕ್ಸ್, ಪ್ರಾಣಕ್ಕೆ ಕುತ್ತು''''''''ಎನ್ನುವ ಶಿರ್ಷಿಕೆಯಡಿ ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಬೀದಿದೀಪದ ವಿದ್ಯುತ್ ಕಂಬದ ಪ್ಯಾನಲ್ ಬಾಕ್ಸ್‌ಗಳಿಗೆ ಮುಚ್ಚಲ ಇಲ್ಲದ ಕುರಿತು ಕನ್ನಡಪ್ರಭ ವರದಿ ಡಿ. ೧೪ರಂದು ಪ್ರಕಟಿಸಿತ್ತು. ಎಚ್ಚೆತ್ತ ಸಿಎಂಸಿ ಅಧಿಕಾರಿಗಳು ಮುಚ್ಚಳವಿಲ್ಲದೇ ಇರುವ ಪ್ಯಾನಲ್ ಬಾಕ್ಸ್‌ಗೆ ತಾತ್ಕಾಲಿಕವಾಗಿ ಬ್ಯಾನರ್ ಮುಚ್ಚಿದ್ದಾರೆ. ಆದಷ್ಟು ಶೀಘ್ರದಲ್ಲಿ ಹಾಳಾದ ಬಾಕ್ಸ್ ಹಾಗೂ ಮುಚ್ಚಳ ಬದಲಿಸಲು ಕ್ರಮವಹಿಸುವುದಾಗಿ ತಿಳಿಸಿದ್ದಾರೆ.ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರ, ಮಾಲಾದೇವಿ ಕ್ರೀಡಾಂಗಣ ಒಳಗೊಂಡು ವಿವಿಧೆಡೆ ಜನರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಸ್ಥಳಗಳಲ್ಲೇ ಈ ರೀತಿಯಾಗಿದ್ದು, ತೆರೆದ ಪ್ಯಾನಲ್ ಬಾಕ್ಸ್ ಅತ್ಯಂತ ಅಪಾಯಕಾರಿಯಾಗಿದ್ದು, ಜೀವ ಹಾನಿಯಾಗುವ ಸಾಧ್ಯತೆಯಿದೆ.