ಮೂಲ್ಕಿ ಸಮೀಪದ ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕುಮಾರ ಮಂಗಿಲ ದೇವಸ್ಥಾನದ ಕಚ್ಚಾ ಮಣ್ಣಿನ ರಸ್ತೆ ಭಾರಿ ಮಳೆಗೆ ಕೆಸರುಮಯವಾಗಿದ್ದು, ಸಂಚಾರ ದುಸ್ತರವಾಗಿ ಪರಿಣಮಿಸಿರುವ ಬಗ್ಗೆ ಜೂ. 13ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಂಜನ್ ಶೆಟ್ಟಿ ಕೆಂಪುಗುಡ್ಡೆ ಕೂಡಲೇ ಕಾರ್ಯಪ್ರವೃತ್ತರಾಗಿ ಸೋಮವಾರ ಜೆಸಿಬಿ ಮೂಲಕ ಕೆಸರುಮಯ ಕಚ್ಚಾ ಮಣ್ಣಿನ ರಸ್ತೆಗೆ ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿ ರಸ್ತೆಗೆ ಹಾಕಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆ ದುರಸ್ತಿಪಡಿಸಿದ್ದಾರೆ.
ಮೂಲ್ಕಿ: ಮೂಲ್ಕಿ ಸಮೀಪದ ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕುಮಾರ ಮಂಗಿಲ ದೇವಸ್ಥಾನದ ಕಚ್ಚಾ ಮಣ್ಣಿನ ರಸ್ತೆ ಭಾರಿ ಮಳೆಗೆ ಕೆಸರುಮಯವಾಗಿದ್ದು, ಸಂಚಾರ ದುಸ್ತರವಾಗಿ ಪರಿಣಮಿಸಿರುವ ಬಗ್ಗೆ ಜೂ. 13ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಂಜನ್ ಶೆಟ್ಟಿ ಕೆಂಪುಗುಡ್ಡೆ ಕೂಡಲೇ ಕಾರ್ಯಪ್ರವೃತ್ತರಾಗಿ ಸೋಮವಾರ ಜೆಸಿಬಿ ಮೂಲಕ ಕೆಸರುಮಯ ಕಚ್ಚಾ ಮಣ್ಣಿನ ರಸ್ತೆಗೆ ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿ ರಸ್ತೆಗೆ ಹಾಕಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆ ದುರಸ್ತಿಪಡಿಸಿದ್ದಾರೆ.ಈ ಭಾಗದಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿದ್ದು, ಸರ್ಕಾರಿ ಶಾಲೆ ಹಾಗೂ ಕಿಲ್ಪಾಡಿ ಶ್ರೀ ರಾಘವೇಂದ್ರ ಮಠ ಕೂಡ ಇದ್ದು, ಮಕ್ಕಳು ಸಹಿತ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಈ ರಸ್ತೆ ಬಳಸಿಕೊಂಡು ಸಂಚಾರ ಮಾಡುತ್ತಿದ್ದು, ಸ್ಥಳೀಯರಿಗೆ ಮಳೆಗಾಲದಲ್ಲಿ ರಸ್ತೆಯಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿತ್ತು. ರಂಜನ್ ಶೆಟ್ಟಿ ಕೆಂಪುಗುಡ್ಡೆ ಅವರು ತಾತ್ಕಾಲಿಕ ನೆಲೆಯಲ್ಲಿ ರಸ್ತೆ ಸರಿಪಡಿಸಿದ್ದು, ಕಳೆದ ಬೇಸಿಗೆಯಲ್ಲಿ ಇದೇ ರಸ್ತೆಯನ್ನು ದುರಸ್ತಿ ಪಡಿಸಲು ಮುಂದಾದಾಗ ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸಿದ್ದರು. ರಂಜನ್ ಶೆಟ್ಟಿ ಅವರ ರಸ್ತೆ ದುರಸ್ತಿ ಕಾರ್ಯಕ್ಕೆ ಸ್ಥಳೀಯರು ಅಭಿನಂದಿಸಿದ್ದಾರೆ. ಈ ರಸ್ತೆ ಮಂಗಳೂರು ಉಡುಪಿ, ಕೊಂಕಣ ರೈಲ್ವೆ ಹಳಿಯ ಸಮೀಪದಲ್ಲಿ ಬರುತ್ತಿದ್ದು, ಅಭಿವೃದ್ಧಿಪಡಿಸಲು ಕೊಂಕಣ ರೈಲ್ವೆ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ, ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೆ ಚತುಷ್ಪಥಗೊಂಡರೂ, ಇನ್ನೊಂದು ಭಾಗದಲ್ಲಿ ಕಾಮಗಾರಿ ನಡೆಯುತ್ತದೆ ವಿನಃ ಕಚ್ಚಾ ಮಣ್ಣಿನ ರಸ್ತೆ ಬಳಿ ಕಾಮಗಾರಿಯ ನಕ್ಷೆ ಇಲ್ಲ ಎಂದು ಸ್ಥಳೀಯರು ಹೇಳಿದ್ದು, ತಾತ್ಕಾಲಿಕ ನೆಲೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.