ಸಾರಾಂಶ
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಾಲ್ಕನೇ ಸೌತ್ ಇಂಡಿಯಾ ಝೋನಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯ 6 ಕರಾಟೆ ಪಟುಗಳು ಪಾಲ್ಗೊಂಡು 4 ಚಿನ್ನ, 3 ಬೆಳ್ಳಿ 3 ಕಂಚಿನ ಪದಕಗಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಾಲ್ಕನೇ ಸೌತ್ ಇಂಡಿಯಾ ಝೋನಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯ 6 ಕರಾಟೆ ಪಟುಗಳು ಪಾಲ್ಗೊಂಡು 4 ಚಿನ್ನ, 3 ಬೆಳ್ಳಿ 3 ಕಂಚಿನ ಪದಕಗಳಿಸಿದ್ದಾರೆ.14 ವರ್ಷ ಒಳಗಿನ ವಯೋಮಿತಿಯಲ್ಲಿನ ಸ್ಪರ್ಧೆಯಲ್ಲಿ ಪಾಲ್ಗೊಂಡ 6 ಮಕ್ಕಳ ಪೈಕಿ ಕೊಳ್ಳೇಗಾಲದ ಬಾಪುನಗರದ ಕರಾಟೆ ಶಿಕ್ಷಕ ನಂಜುಂಡಸ್ವಾಮಿ ಪುತ್ರ ಭ್ರತ್ವ ಕಣ್ವಗೆ 1 ಚಿನ್ನ ಮತ್ತು 1 ಬೆಳ್ಳಿ, ಕುರುಬನಕ್ಟೆ ಗ್ರಾಮದ ಅನುಶ್ರೀ-1 ಚಿನ್ನ ಮತ್ತು 1 ಕಂಚು, ನಯನ ಕುಕ್ಕೂರು 1 ಚಿನ್ನ, ಧನಗೆರೆ ಗ್ರಾಮದ ಲಿಖಿತ್ ಜೋಗಿಗೆ 1 ಚಿನ್ನ, ಕೊಳ್ಳೇಗಾಲದ ಕೃತಿಕ್ ಶ್ರೇಷ್ಟಿ1 ಬೆಳ್ಳಿ, 1 ಕಂಚು, ನೂತನ್‌ಗೆ 1 ಬೆಳ್ಳಿ, 1 ಕಂಚಿನ ಪದಕ ಬಂದಿದೆ.
ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ರಾಜ್ಯ ಗಳಿಂದ ಸಾವಿರಾರುಕ್ರೀಡಾಪಟುಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಕರಾಟೆ ಇಂಡಿಯಾ ಆರ್ಗನೈಸೇಷನ್ ಕಾರ್ಯದರ್ಶಿ ಸಂಜೀವ್ ಕುಮಾರ್ ಜಂಗ್ರ, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಮಾಚಯ. ಕೇರಳ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ರಾಮ್ ದಯಾಳ್, ಚಾಮರಾಜನಗರ ಜಿಲ್ಲಾ ಕರಾಟೆ ಅಧ್ಯಕ್ಷ ಕೆ ನಂಜುಂಡಸ್ವಾಮಿ, ಕೋಚ್- ಲಿಖಿತ್ ಪ್ರಶಂಶಿಸಿದ್ದಾರೆ.