ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ತೆಂಡೇಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ (ಪ್ರಭಾರ) ಅಂಚೆಮುದ್ದನಹಳ್ಳಿ ನಾಗರತ್ನಮ್ಮ ಗಂಗಾಧರ್ ಅಧಿಕಾರ ಸ್ವೀಕರಿಸಿದರು.ಹಿಂದಿನ ಅಧ್ಯಕ್ಷ ಶ್ರೀನಿವಾಸ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ಸ್ಥಾನಕ್ಕೆ ಚುನಾವಣೆ ನಿಗಧಿಯಾಗದ ಕಾರಣ ಉಪಾಧ್ಯಕ್ಷರಾಗಿದ್ದ ನಾಗರತ್ನಮ್ಮ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರ ಸಹಕಾರ ನಮಗಿದ್ದು ಇಬ್ಬರೂ ನಾಯಕರ ಮಾರ್ಗದರ್ಶನ ಮತ್ತು ಸಹಕಾರದಿಂದ ಪಕ್ಷಾತೀತವಾಗಿ ಗ್ರಾಪಂ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮಾಜಿ ಉಪಾಧ್ಯಕ್ಷ ಶಿವಲಿಂಗ (ಗುಂಡ), ಸದಸ್ಯರಾದ ರವಿಕುಮಾರ್, ಸ್ವಾಮೀಗೌಡ, ರಂಗಣ್ಣ, ಸವಿತಾ ಗೋವಿಂದಶೆಟ್ಟಿ, ಸವಿತಾ ಇಂದ್ರೇಶ್, ರೋಹಿಣಿ ಮಹೇಶ್, ಕಾಂತರಾಜು, ರಾಜು (ದುರ್ಗಿ), ಸೌಭಾಗ್ಯ, ಜ್ಯೋತಿ, ಗಂಗಮ್ಮ, ಜಯಮ್ಮ, ಶಿಲ್ಪಶೇಖರ್, ಅಂಚೇಮುದ್ದನಹಳ್ಳಿ ಮುಖಂಡರಾದ ಬಸವರಾಜು, ಜಗದೀಶ್, ರಾಮಣ್ಣ ಮತ್ತಿತರರಿದ್ದರು.
ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಹಲಗೂರು:
ಗೊಲ್ಲರಹಳ್ಳಿ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ಬೆಳಗ್ಗೆ ದೇವರ ಮೂರ್ತಿಯನ್ನು ಭೀಮಾ ನದಿಯಲ್ಲಿ ಶುಚಿಗೊಳಿಸಿ ಹೂವು ಹೊಂಬಾಳೆಯಿಂದ ಅಲಂಕಾರ ಮಾಡಿದ ನಂತರ ಕುಂಭಮೇಳದೊಡನೆ ವೀರಗಾಸೆ ಕುಣಿತ ಮತ್ತು ಜೋಡಿ ಬಸಪ್ಪ ದೇವರ ಜೊತೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ತರಲಾಯಿತು. ನಂತರ ದೇವರಿಗೆ ವಿಶೇಷ ಪುಷ್ಪಗಳಿಂದ ಅಲಂಕರಿಸಿ ಬೆಣ್ಣೆ ಅಲಂಕಾರದಿಂದ ಸಿಂಗರಿಸಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು. ಈ ವೇಳೆ ಊರಿನ ನಾಡಗೌಡರು, ಮುಖಂಡರು, ಮತ್ತು ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.