ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷ್ಣಾ ಮೇಲ್ದಂಡೆ ಮುಳವಾಡ ಏತ ನೀರಾವರಿ ಯೋಜನೆಯ ಹಂತ-3ರಲ್ಲಿನ ಬಬಲೇಶ್ವರ ಶಾಖಾ ಕಾಲುವೆಯ 5ಎ, 5ಬಿ ಲಿಫ್ಟ್ ಕಾಮಗಾರಿಗಳಿಗೆ ₹ 127 ಕೋಟಿ ಮತ್ತು ವಿತರಣಾ ಸಂಖ್ಯೆ 15 ಹಾಗೂ ಲ್ಯಾಟರಲ್ ಕಾಲುವೆಗಳ ಅಭಿವೃದ್ಧಿ ₹ 108 ಕೋಟಿ ಮೊತ್ತದ ಕಾಮಗಾರಿಗಳು ಸೇರಿ ಒಟ್ಟು ₹ 235 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬಬಲೇಶ್ವರ ಶಾಖಾ ಕಾಲುವೆ ಕಿ.ಮೀ 40ರಲ್ಲಿ 5ಎ ಲಿಫ್ಟ್ ಮುಖಾಂತರ 11,300 ಎಕರೆ ಮತ್ತು ಕಿ.ಮೀ 18 ರಲ್ಲಿ 5ಬಿ ಲಿಫ್ಟ್ ಮುಖಾಂತರ 1,355 ಎಕರೆ ಪ್ರದೇಶಕ್ಕೆ ನೀರೋದಗಿಸುವ ಕಾಮಗಾರಿಗೆ ₹ 127 ಕೋಟಿ ಹಾಗೂ ವಿತರಣಾ ಸಂಖ್ಯೆ 15 ಮತ್ತು ಲ್ಯಾಟರಲ್ ಒಳಗೊಂಡ 13,272 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಪ್ಯಾಕೇಜ್ ಕಾಮಗಾರಿ ಕೈಗೆತ್ತಿಕೊಳ್ಳಲು ₹ 108 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ಕಾಮಗಾರಿಗಳಿಂದ ಬಬಲೇಶ್ವರ ತಾಲೂಕಿನ ಬಾಕಿ ಉಳಿದಿರುವ ಒಟ್ಟು 26 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದಂತಾಗುತ್ತದೆ.ಮುಳವಾಡ ಬಳಿಯ 4ಎ ಲಿಫ್ಟ್ ನಿಂದ ಆರಂಭವಾಗುವ ಬಬಲೇಶ್ವರ ಶಾಖಾ ಕಾಲುವೆಯು 40 ಕಿಲೋ ಮೀಟರ್ ಉದ್ದವಿದ್ದು, 4.04 ಟಿ.ಎಂ.ಸಿ ನೀರನ್ನು ಬಳಸಿ, ಬಬಲೇಶ್ವರ ತಾಲೂಕಿನ 52,500 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ. ಇದರಡಿ ಒಟ್ಟು 15 ವಿತರಣಾ ಕಾಲುವೆಗಳ ಪೈಕಿ 14 ವಿತರಣೆ ಜಾಲದ ಕಾಮಗಾರಿಗಳನ್ನು ಕೈಗೊಂಡಿದೆ. 15ನೇ ಹಾಗೂ ಕೊನೆಯ ವಿತರಣಾ ಕಾಲುವೆ ಕಾಮಗಾರಿಗೆ ₹ 108 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊತ್ತಿಕೊಳ್ಳಲು ಅನುದಾನ ದೊರೆತಿದೆ. ಬಬಲೇಶ್ವರ ತಾಲೂಕಿನ ಕೊನೆಯ ಹಳ್ಳಿಗಳಿಗೆ ವಿತರಣಾ ಕಾಲುವೆಯ ಮೂಲಕ 10,272 ಎಕರೆ ಪ್ರದೇಶ ಹಾಗೂ ಜಮಖಂಡಿ ತಾಲೂಕಿನ 3000 ಎಕರೆ ಪ್ರದೇಶ ಸೇರಿದಂತೆ ಒಟ್ಟು 13,272 ಎಕರೆ ಪ್ರದೇಶವು ನೀರಾವರಿಗೆ ಒಳಪಡಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರ: 29BIJ01ಬರಹ: ಮುಳವಾಡ ಏತನೀರಾವರಿಗೆ ರೂ.235 ಕೋಟಿ ಟೆಂಡರ್: ಎಂಬಿ ಪಾಟೀಲಕೋಟ್‌ಮುಳವಾಡ ಏತನೀರಾವರಿ ಯೋಜನೆ ಹಂತ-3 ರ ಮೂಲಕ ಬಬಲೇಶ್ವರ ಹಾಗೂ ಸುತ್ತಲಿನ ಪ್ರದೇಶಕ್ಕೆ ಮಲಘಾಣ ಪಶ್ಚಿಮ ಕಾಲುವೆ ಹಾಗೂ ಬಬಲೇಶ್ವರ ಶಾಖಾ ಕಾಲುವೆಗಳ ಮೂಲಕ ಈಗಾಗಲೇ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ನಿಡೋಣಿ, ನಾಗರಾಳ, ತಿಗಣಿಬಿದರಿ ಸುತ್ತಲಿನ ಎತ್ತರದ ಪ್ರದೇಶ ಹಾಗೂ ಕಾಖಂಡಕಿ, ಶೇಗುಣಶಿ, ಸಂಗಾಪುರ ಗ್ರಾಮದ ಎತ್ತರದ ಸ್ವಲ್ಪ ಪ್ರದೇಶಗಳು ಈ ಕಾಲುವೆ ನೀರಾವರಿ ಸೌಕರ್ಯದಿಂದ ವಂಚಿತವಾಗಿದ್ದವು.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ