ತೆಂಕನಿಡಿಯೂರು ಕಾಲೇಜಿನ ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಾಗಾರ

| Published : Aug 11 2025, 01:56 AM IST

ತೆಂಕನಿಡಿಯೂರು ಕಾಲೇಜಿನ ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ಮಾದಕ ವ್ಯಸನ ತಡೆ ಸಮಿತಿ ಹಾಗೂ ಎನ್.ಎಸ್.ಎಸ್. ಮತ್ತು ಯುವ ರೆಡ್‌ಕ್ರಾಸ್ ಘಟಕಗಳ ಆಶ್ರಯದಲ್ಲಿ ಮಾದಕ ವ್ಯಸನ ನಿಯಂತ್ರಣ ಜಾಗೃತಿ ಕಾರ್ಯಾಗಾರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ಮಾದಕ ವ್ಯಸನ ತಡೆ ಸಮಿತಿ ಹಾಗೂ ಎನ್.ಎಸ್.ಎಸ್. ಮತ್ತು ಯುವ ರೆಡ್‌ಕ್ರಾಸ್ ಘಟಕಗಳ ಆಶ್ರಯದಲ್ಲಿ ಮಾದಕ ವ್ಯಸನ ನಿಯಂತ್ರಣ ಜಾಗೃತಿ ಕಾರ್ಯಾಗಾರ ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಡಿವೈಎಸ್ಪಿ ಡಿ. ಟಿ. ಪ್ರಭು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಕುರಿತಾಗಿ ಜಾಗೃತಿಯ ಮಾತನಾಡುತ್ತಾ, ಆರಂಭದಲ್ಲಿ ಒತ್ತಡ, ಆಯಾಸ ಮತ್ತು ನೋವುಗಳ ಪರಿಹಾರ ಮತ್ತು ಮನೋರಂಜನೆಗಾಗಿ ಮಾದಕ ವ್ಯಸನಿಗಳಾದವರು ಕ್ರಮೇಣ ಅದರ ದಾಸರಾಗಿ ತಮ್ಮ ಜೀವನ ಕಳೆದುಕೊಳ್ಳುವುದಷ್ಟೇ ಅಲ್ಲದೆ ಕುಟುಂಬ ಮತ್ತು ಸಾಮಾಜಿಕ ಶಾಂತಿಯನ್ನ ಹಾಳು ಮಾಡುವ ಸ್ಥಿತಿ ತಲುಪುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.ಸಮಾಜದಲ್ಲಿ ಖ್ಯಾತ ಸಿನಿಮಾ ತಾರೆಯರ, ಕ್ರೀಡಾಪಟುಗಳ ಜೊತೆಗೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿದ್ದಾರೆ, ಈ ನಿಟ್ಟಿನಲ್ಲಿ ಯುವಜನತೆ ಜಾಗೃತರಾಗಿ ಸಮಾಜವನ್ನು ಜಾಗೃತಿಗೊಳಿಸುವ ನಾಗರಿಕ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದರಲ್ಲದೇ ವಿವಿಧ ರೀತಿಯ ಮಾದಕ ದ್ರವ್ಯಗಳು ಅವುಗಳಿಂದಾಗುವ ದುಷ್ಪರಿಣಾಮಗಳು ಮತ್ತು ಇದರ ತಡೆಗೆ ಇರುವ ಕಾನೂನು - ಶಿಕ್ಷೆಗಳ ಕುರಿತಾಗಿಯೂ ವಿವರವಾದ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಯುವಜನತೆ ಸಮಾಜಮುಖಿಯಾಗಿ ಚಿಂತಿಸುವ ಮತ್ತು ಕಾರ್ಯ ಪ್ರವೃತ್ತರಾಗುವಂತೆ ಸಲಹೆಯಿತ್ತರು. ವೇದಿಕೆಯಲ್ಲಿ ಮಲ್ಪೆ ಠಾಣಾಧಿಕಾರಿ ಗಂಗಪ್ಪ ಮತ್ತು ಎಎಸ್ಐ ವಿಶ್ವನಾಥ್ ಉಪಸ್ಥಿತರಿದ್ದರು.ಕಾಲೇಜಿನ ಮಾದಕ ವ್ಯಸನ ನಿಯಂತ್ರಣ ಮತ್ತು ಜಾಗೃತಿ ಸಮಿತಿ ಸಂಚಾಲಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಸಹಪ್ರಾಧ್ಯಾಪಕ ಉಮೇಶ್ ಪೈ ವಂದಿಸಿದರು. ಯುವ ರೆಡ್ ಕ್ರಾಸ್ ಸಂಚಾಲಕ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರ್ವಹಿಸಿದರು. ಗ್ರಂಥಪಾಲಕರಾದ ಕೃಷ್ಣ ಸಾಸಾನ ಸಹಕರಿಸಿದರು.